ಕವಿತೆ: ಬದುಕಾಗಲಿ ಬೆಳಕು

ವೀರೇಶ.ಅ.ಲಕ್ಶಾಣಿ.

ಬಾಳಿನಲ್ಲಿ ಬ್ರಾಂತಿ ಸಾಕು
ನಿತ್ಯವೂ ನಾವು ಬದುಕಬೇಕು
ಸ್ಮರಣೆಯೊಂದೇ ಸಾಲದು
ಸಹನೆ ಎಂದೂ ಸೋಲದು

ನೀ ಎದುರಿಗಿರೆ ಜೀವನ
ಕನಸಲ್ಲವೋ ಪಾವನ
ಜೀವ ನಿತ್ಯ ನೂತನ
ಹೊಂಬೆಳಕಿನ ಚೇತನ

ಬಾಳಿದು ಬರಿ ಬಾಳಲ್ಲವೋ
ಅನನುಬವಗಳ ದರುಶನ
ಸವಾಲುಗಳ ಕೋಶ ಕ್ಲೀಶೆ
ಬಾವನೆಗಳ ಹೂರಣ

ನಡೆವ ಹಾದಿ ಬಾವಗೀತೆ
ಸಪ್ತ ಸ್ವರ ಪದ ಸ್ಪರ‍್ಶನ
ನನಗೆ ನೀನು ನಿನಗೆ ನಾನು
ಬಾವ ತಕದಿಮಿತ ನರ‍್ತನ

ಬಂದ ಜೀವ ಹೋದ ಕ್ಶಣವೂ
ತೀರಲಿಲ್ಲವೋ ಸಕಲ ರುಣ
ನಡೆದರಶ್ಟೇ ಪಡೆವ ಬದುಕು
ಸ್ಮರಣೆ ಸದಾ ತೋರಣ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *