ಕಲ್ಲಂಗಡಿ ಹಲ್ವಾ
– ಸವಿತಾ.
ಬೇಕಾಗುವ ಸಾಮಗ್ರಿಗಳು
ಕಲ್ಲಂಗಡಿ ಹಣ್ಣಿನ ಬಿಳಿ ಬಾಗ – 1 ಬಟ್ಟಲು
ಹಸಿ ಕೊಬ್ಬರಿ ತುರಿ – 1 ಬಟ್ಟಲು
ಅಕ್ಕಿ – 2 ಚಮಚ
ಬೆಲ್ಲ ಅತವಾ ಸಕ್ಕರೆ – 1 &1/2 ಬಟ್ಟಲು
ಏಲಕ್ಕಿ – 2
ತುಪ್ಪ – 1/2 ಬಟ್ಟಲು
ಮಾಡುವ ಬಗೆ
ಅಕ್ಕಿ ಒಂದು ತಾಸು ನೆನೆಸಿದ ನಂತರ ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ. ಕಲ್ಲಂಗಡಿ ಹಣ್ಣಿನ ಕೆಂಪು ಬಾಗ ಕತ್ತರಿಸಿ ತಿನ್ನಲಿಕ್ಕೆ ಬಳಸಿಕೊಳ್ಳಿ, ಸಿಪ್ಪೆಗೆ ಅಂಟಿದ ಬಿಳಿ ಗಟ್ಟಿ ಬಾಗವನ್ನು ಮಾತ್ರ ತೆಗೆದು ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿರಿ. ಹಸಿರು ಸಿಪ್ಪೆ ಬಾಗ ತೆಗೆದುಹಾಕಿ. ಹಸಿ ಕೊಬ್ಬರಿ ತುರಿ ಮಾಡಿಕೊಂಡು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆ ಒಲೆ ಮೇಲೆ ಇಡಿ. ತುಪ್ಪ ಹಾಕಿ, ರುಬ್ಬಿದ ಕಲ್ಲಂಗಡಿ ಹಣ್ಣಿನ ಬಿಳಿ ಬಾಗದ ರಸ ಹಾಕಿ. ನಂತರ ರುಬ್ಬಿದ ಅಕ್ಕಿ, ಕೊಬ್ಬರಿ ಸ್ವಲ್ಪ ನೀರು ಹಾಕಿ ಮದ್ಯಮ ಉರಿಯಲ್ಲಿ ತಳ ಹಿಡಿಯ ದಂತೆ ಒಂದು ಕುದಿ ಕುದಿಸಿ. ಬೆಲ್ಲ ಹಾಕಿ ಕರಗಿಸಿ. ಕೊಂಚ ಗಟ್ಟಿಯಾದ ಹಾಗೇ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಸೇರಿಸಿ. ಒಂದು ತಟ್ಟೆ ಗೆ ತುಪ್ಪ ಸವರಿ, ಇನ್ನೊಮ್ಮೆ ಚೆನ್ನಾಗಿ ತಿರುವಿ ತಟ್ಟೆಗೆ ಸುರುವಿ ಬೇಕಾದ ಆಕಾರದಲ್ಲಿ ಕತ್ತರಿಸಿ. ಈಗ ಕಲ್ಲಂಗಡಿ ಹಣ್ಣಿನ ಹಲ್ವಾ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು