ಮಣ್ಣಿಂದಲೇ ಎಲ್ಲಾ

– ಶ್ಯಾಮಲಶ್ರೀ.ಕೆ.ಎಸ್.

ಮಣ್ಣಿಂದಲೇ ಎಲ್ಲಾ
ಮಣ್ಣಿದ್ದರೆ ಎಲ್ಲಾ
ಮಣ್ಣಿಗಾಗಿಯೇ ಎಲ್ಲಾ
ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ

ಮಣ್ಣೇ ಮೊದಲು ಮಣ್ಣೇ ಮಿಗಿಲು
ಮಣ್ಣಲ್ಲವೇ ಸಕಲ ಜೀವಕೂ ಮಡಿಲು
ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು
ಮಣ್ಣೇ ಕುಂಬಾರನ ಬದುಕಿಗೆ ಊರುಗೋಲು

ಬೀಜ ಮೊಳೆತು ಸಸಿಯಾಗಿದ್ದು ಮಣ್ಣಲ್ಲೇ
ಪಲ ಬಿಟ್ಟು ಮುದಿಯಾಗಿ ಕೊಳೆತದ್ದು ಮಣ್ಣಲ್ಲೇ
ಜೀವಸಂಕುಲಕೆ ಆಸರೆ ಸಿಕ್ಕಿದ್ದು ಮಣ್ಣಲ್ಲೇ
ಹೊಳೆವ ಹೊನ್ನು ಅವಿತದ್ದು ಮಣ್ಣಲ್ಲೇ

ಮುಗಿಲಿನಿಂದ ಸುರಿವ ಮಳೆ
ಸೇರಬಯಸಿದ್ದು ಮಣ್ಣನ್ನೇ
ಉಳುವ ಯೋಗಿ ಬದುಕುತಿಹ
ನಂಬಿ ಬೂತಾಯಿ ಮಣ್ಣನ್ನೇ

ಸ್ರುಶ್ಟಿಯ ಮೂಲ ಮಣ್ಣು
ಮೆಟ್ಟುವ ನೆಲ ಮಣ್ಣು
ತಿನ್ನುವ ಅನ್ನಕೆ, ಕುಡಿವ ಜಲಕೆ
ಉಸಿರಾಡುವ ಗಾಳಿಗೆ ಆದಾರ ಮಣ್ಣು
ಕಡೆಗೆ ಸೇರುವ ಗಮ್ಯವೂ ಮಣ್ಣು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications