ಕವಿತೆ: ಎತ್ತಣ ಮಾಮರ ಎತ್ತಣ ಕೋಗಿಲೆ
ಮಾಮರದ ಚಿಗುರು ಸೊಬಗಾಗಿ
ಹಸಿರುಟ್ಟ ನೀರೆಯಂತೆ ಮೆರಗಾಗಿ
ಚಿಗುರಿಗೆ ಕಾಜಾಣ ಬೆರಗಾಗಿ
ಕಂಟದಲಿ ಉಲಿದು ಬಂತು ಸಿಹಿ ಹಾಡಾಗಿ
ಅಚಲ ಮಾಮರ ಕಾಜಾಣಗೆ ತವರಾಗಿ
ಕೈ ಬೀಸಿ ಕರೆದಿದೆ ಕೂಜನಕೆ ಬೆರಗಾಗಿ
ಎತ್ತಣ ಮಾಮರ ಹಸಿರ ಸಿರಿಯಾಗಿ
ಎತ್ತಣ ಕೋಗಿಲೆಯ ಕಂಟಕ್ಕೆ ಸೋತು ಶರಣಾಗಿ
ವಸಂತನ ಮೇಳದಲಿ ಕರಿ ಸಿರಿ ಒಂದಾಗಿ
ಹಸಿರ ರಾಶಿ ಕಂಟದ ಸಿರಿ ಮಿಲನವಾಗಿ
ಪರಿವರ‍್ತಿಸಿ ಜಗವನು ಮದುರ ಮಹೋತ್ಸವವಾಗಿ
ನೋಡು ಮನಕೆ ಮುದ ನೀಡುವ ರಂಗೋತ್ಸವ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು