ಕವಿತೆ: ಬದುಕಿನ ಉಯ್ಯಾಲೆ

– .ಒಬ್ಬಂಟಿ, Loneliness

ಸೋತಾಗ ಕೈ ಹಿಡಿದು ತೂಗುವವರಿಲ್ಲ
ಬದುಕು ತೂಗು ಉಯ್ಯಾಲೆಯಾದಾಗ
ಜೋಕೆ ಎಂದು ಜೀಕಿಸಿ ಪಾರಾಗಿಸುವವರು
ಬಹಳಿಲ್ಲ

ನಿನ್ನ ಸಂತಸಕೆ ನೀನೆ ಹೊಣೆ
ಎದುರಿಸು ಒದಗುವ ಎಲ್ಲ ಬವಣೆ
ರಟ್ಟೆಯಲಿ ಬಲವಿದ್ದರೆ ಜೀಕಿ ತೂಗಿಸು
ಬದುಕಿನ ಉಯ್ಯಾಲೆ
ಮುಕದಲ್ಲಿ ನಗು ಅರಳೀತು
ಮೆಲ್ಲ ಮೆಲ್ಲನೆ

ಜೀಕುವ ಬಲ ನಿಂತಾಗ ಮುಗಿಸಿ
ಬಿಡು ಬವ ಬಂದನದ ಬಿಡೆ
ಉಯ್ಯಾಲೆ ಕಟ್ಟಿದವರ ಬಂದ
ಹಗ್ಗ ಕತ್ತರಿಸಿ ಬೀಳುವವರೆಗೆ
ಮುಗಿಯದೀ ತೂಗುವಿಕೆ
ಸೂರ‍್ಯ ಚಂದ್ರರಿರುವವರೆಗೆ
ನಾವೂ ಇರುವವರೆಗೆ

(ಚಿತ್ರಸೆಲೆ: home.bt.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications