ಕವಿತೆ: ಬೇಲಿಯೇ ಎದ್ದು ಹೊಲ ಮೇಯ್ದಂತೆ
ಪತ್ತೇದಾರನ ಟೋಪಿಯ ಕೆಳಗೆ ಸಿಗಾರ್
ಬೆಂಕಿ ಹೊತ್ತಿ ಹೊಗೆಯುಗುಳುತ್ತಿದೆ
ಆತ ಸುಳ್ಳು ಹೇಳುತ್ತಾನೆ
ಸಿಗಾರಿನ ದಮ್ಮಿಗೆ ಮೆದುಳು ಹೊತ್ತಿ
ಪ್ರಕಾಶಮಾನವಾಗುತ್ತದೆಂದು!
ಇದು ಬ್ರ್ಯಾಂಡ್ ಗಾಗಿ ಎದೆ ಸುಟ್ಟುಕೊಂಡು
ದೇಹ ಕ್ರುಶವಾಗಿಸಿಕೊಳ್ಳುವುದು
ಅರ‍್ಬುದ ಮಹಾಮಾರಿಯನ್ನು
ಮೈಮೇಲೆ ಆಹ್ವಾನಿಸಿಕೊಳ್ಳುವುದು
ಮೋಜು ಮಸ್ತಿಗಾಗಿಯೂ ದಮ್ಮು
ಎಳೆವ ಎಳೆವೆಗಳು ನಶೆಯ ಹುಚ್ಚು
ಹತ್ತಿ ಕಡೆಗೊಮ್ಮೆ ನಾಶವಾಗುತಿಹರು
ಜಗ ಬೇಡವೆಂದರೂ ಮನ ಬೇಡುತಿಹುದ
ಆಳುವವರ ದ್ವಂದ್ವ ನೀತಿಗಳು
ಅಕ್ಕಿಯ ಮೇಲೆ ಆಸೆ
ನೆಂಟರ ಮೇಲೆ ಪ್ರೀತಿಯಂತೆ
ತಂಬಾಕು ಬೇಡವೆನುತ್ತಲೇ ಮಾರಿ
ಬೊಕ್ಕಸ ತುಂಬಿಕೊಳ್ಳತಿಹರು
ಇವರೇ ಕಳ್ಳರು…
ಬೇಲಿ ಎದ್ದು ಹೊಲ ಮೇಯ್ದಂತೆ
ತಂಬಾಕು ಬಳಕೆಗೆ ತಡೆಯೊಡ್ಡುವವರು ಯಾರು?
(ಚಿತ್ರ ಸೆಲೆ: publicdomainvectors.org)
ಇತ್ತೀಚಿನ ಅನಿಸಿಕೆಗಳು