ಮಾಡಿ ಸವಿಯಿರಿ ರುಚಿಯಾದ ಬೀಟ್ರೂಟ್ ಪಲ್ಯ

– ನಿತಿನ್ ಗೌಡ.

ಏನೇನು ಬೇಕು ?

  • ಬೀಟ್ರೂಟ್ – ಅರ್‍ದ ಕಿಲೋ
  • ಈರುಳ್ಳಿ – 2 ( ಚಿಕ್ಕದು )
  • ಟೊಮೊಟೋ – 2
  • ಶೇಂಗಾ ಬೀಜ – 10 ರಿಂದ 15
  • ಕಡಲೆಬೇಳೆ – 1 ಚಮಚ
  • ಹಸಿಮೆಣಸಿನ ಕಾಯಿ – 3
  • ಉಪ್ಪು – ರುಚಿಗೆ ತಕ್ಕಶ್ಟು
  • ಕಾರದ ಪುಡಿ – 1 ಚಮಚ
  • ಕರಿಬೇವು – ಒಗ್ಗರಣ್ಣೆಗೆ ಸ್ವಲ್ಪ
  • ಸಾಸಿವೆ – ಒಗ್ಗರಣ್ಣೆಗೆ ಸ್ವಲ್ಪ
  • ಎಣ್ಣೆ – ಒಗ್ಗರಣ್ಣೆಗೆ

ಮಾಡುವ ಬಗೆ

ಮೊದಲಿಗೆ ಬೀಟ್ರೂಟ್ ಅನ್ನು ಚೆನ್ನಾಗಿ ತುರಿದುಕೊಳ್ಳಿರಿ. ನಂತರ ಈರುಳ್ಳಿ, ಟೊಮೊಟೋ ಹೆಚ್ಚಿಕೊಳ್ಳಿರಿ. ಆಮೇಲೆ ಒಂದು ಪಾತ್ರೆಗೆ ಕೊಂಚ ಎಣ್ಣೆ ಹಾಕಿ, ಅದಕ್ಕೆ ಕಡಲೆ ಬೇಳೆ, ಸಾಸಿವೆ, ಶೇಂಗಾ ಹಾಕಿ ಹುರಿಯಿರಿ( ಶೇಂಗಾ ಕಂದು ಬಣ್ಣ ಬರುವವರೆಗೆ). ಈಗ ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಟೊಮೋಟೋ ಅರಿಶಿಣ ಹಾಕಿ ಹುರಿಯಿರಿ. ಈಗ ಇದಕ್ಕೆ ತುರಿದಿಟ್ಟುಕೊಂಡ ಬೀಟ್ರೂಟ್ ತುರಿ ಹಾಕಿ, ಕಾರದ ಪುಡಿ, ದನಿಯಾ ಪುಡಿ ಹಾಕಿ ಕಲಸಿರಿ. ಈಗ ಇದಕ್ಕೆ ಕೊಂಚ ನೀರು ಹಾಕಿ, ಮುಚ್ಚಳ ಮುಚ್ಚಿ ಒಂದು ಹದಿನೈದು ನಿಮಿಶ ಬೇಯಿಸಿ, ಒಲೆ ಆರಿಸಿ. ಇದನ್ನು ಚಪಾತಿ ಜೊತೆ ಸವಿಯಬಹುದು ಇಲ್ಲವಾದಲ್ಲಿ ಅನ್ನದ ಜೊತೆ ಸವಿಯಬಹುದು.

(ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: