ಹೆಸರು ಕಾಳು ಕಿಚಡಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಹೆಸರು ಕಾಳು – 1/2 ಬಟ್ಟಲು
  • ಅಕ್ಕಿ – 1/2 ಬಟ್ಟಲು
  • ತುಪ್ಪ – 3 ಚಮಚ
  • ಜೀರಿಗೆ – 1/4 ಚಮಚ
  • ಇಂಗು – 1/4 ಚಮಚ
  • ಗರಮ್ ಮಸಾಲೆ ಪುಡಿ – 1 ಚಮಚ
  • ಹಸಿ ಶುಂಟಿ – 1/4 ಇಂಚು
  • ಕರಿಮೆಣಸಿನ ಕಾಳು – 4
  • ಬೆಳ್ಳುಳ್ಳಿ ಎಸಳು – 4 (ಬೇಕಾದರೆ)
  • ಅರಿಶಿಣ ಪುಡಿ – ಸ್ವಲ್ಪ (ಬೇಕಾದರೆ)
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಹೆಸರು ಕಾಳನ್ನು ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಿ, ಸ್ವಲ್ಪ ಒಡೆದರೂ ಸಾಕು. ಹೆಸರು ಕಾಳು ಮತ್ತು ಅಕ್ಕಿಯನ್ನು ನೀರಿನಲ್ಲಿ ತೊಳೆದು ಇಟ್ಟುಕೊಳ್ಳಿ. ಕುಕ್ಕರ್ ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಜೀರಿಗೆ, ಇಂಗು ಹಾಕಿ. ಬೆಳ್ಳುಳ್ಳಿ ಮತ್ತು ಶುಂಟಿ ಪೇಸ್ಟ್ ಮಾಡಿ ಹಾಕಿ. ನಂತರ ಕರಿಮೆಣಸನ್ನು ಪುಡಿ ಮಾಡಿ ಹಾಕಿ. ತೊಳೆದ ಅಕ್ಕಿ ಮತ್ತು ಒಡೆದ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿದು ಉಪ್ಪು, ಅರಿಶಿಣ ಪುಡಿ ಹಾಕಿ. ಗರಮ್ ಮಸಾಲೆ ಪುಡಿ ಮತ್ತು ನೀರು ಸೇರಿಸಿ ಮೂರು ಕೂಗು ಕುದಿಸಿ ಇಳಿಸಿ. ಈಗ ಹೆಸರು ಕಾಳು ಕಿಚಡಿ ಸವಿಯಲು ಸಿದ್ದ. ತುಪ್ಪ ಹಾಕಿ ಬಿಸಿ ಬಿಸಿ ಕಿಚಡಿ ಸವಿಯಿರಿ. ಇದು ಆರೋಗ್ಯಕ್ಕೂ ಉತ್ತಮ, ಹಬ್ಬ ಹರಿದಿನಗಳಲ್ಲಿ ಪ್ರಸಾದವಾಗಿಯೂ ಮಾಡಬಹುದು.

(ಚಿತ್ರ ಸೆಲೆ: pixahive.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: