ಕಿರುಗವಿತೆಗಳು

– ನಿತಿನ್ ಗೌಡ.

ಅದ್ವೈತದ ಹಣತೆ

ನೂರು ರಾಜ್ಯ ಗೆದ್ದರೇನು?
ಹೊನ್ನ ರಾಶಿ ಗಳಿಸಿದರೇನು?
ಗನದಿ ಗದ್ದುಗೆ ಏರಿದರೇನು?
ಎಲ್ಲೆಯಿರುವುದೇನು..!
ಈ ಇಹದ ಮಾಯೆಯ ದ್ವೈತಕೆ?
ಸೋಲು-ಗೆಲುವು, ನೋವು-ನಲಿವು,
ಕಶ್ಟ-ಸುಕ, ಎಲ್ಲವೂ;
ನನ್ನೊಳಿಗಿನ ನಾನೆಂಬುವ ಗುರುತಿನಾಟ,
ಕಳಚಲು ಈ ಕವಚ;
ತಿಳಿಯಾಗುವುದು ಬವಸಾಗರದ ಬಯಕೆಗಳ ಅಲೆಗಳು,
ಬೆಳಗುವುದು ಅದ್ವೈತದ ಹಣತೆಯ ಬೆಳಕು,
ಅದುವೆ ಕಾಣು ಪರಮಾತ್ಮನ ಒಡಲಸೇರುವ ಗಳಿಗೆಯು‌.

******

ಸಾರ್‍ತಕತೆಯ ಮೆಟ್ಟಿಲು

ಹಿಗ್ಗದಿರಲು ಗೆಲುವು-ನಲಿವಲಿ,
ಕುಗ್ಗದಿರಲು ಸೋಲಿನಳುಕಲಿ,
ಏಳು ಬೀಳುಗಳಾಗುವವು ಸಾರ‌್ತಕತೆಯ ಮೆಟ್ಟಿಲು,
ಬಾಳಪಯಣದ ದಾರಿಯಲಿ.

******

ದಿಗಂತಗಳ ದಾಟಿ

ಮಾತಲಿ ಹಿಡಿತವಿರಲು,
ನೋಟದಲಿ ಮುಗ್ದತೆಯಿರಲು,
ಮಿತವಿರಲು ಆಹಾರದ ಸೇವನೆಯಲಿ,
ಒಳಿತಿರಲು ಆಲೋಚನೆಗಳಲಿ,
ಮನವು‌ ಮುದದಿ, ನಲಿಯುತಿರಲು,
ಸಾಗುವೆ ನೀ, ಅಡೆತಡೆಗಳೆಂಬ ದಿಗಂತಗಳ ದಾಟಿ
ಏರುವೇ ನೀ ಇಹಪರದ ಮಾಯೆಯ
ಶಿಕರದಂಚನು‌ ಮೀರಿ..

( ಚಿತ್ರಸೆಲೆ: designer.microsoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *