ಬೆರಗುಗೊಳಿಸುವ ಒಂದಶ್ಟು ಸಂಗತಿಗಳು!
– ನಿತಿನ್ ಗೌಡ.
ಇಂದು ಅರಿಮೆ (science) ಮತ್ತು ಚಳಕ (Technology) ನಮ್ಮ ಬದುಕಿನ ಅವಿಬಾಜ್ಯ ಅಂಗಗಳಾಗಿವೆ. ನಾವೀಗ ಬಳಸುತ್ತಿರುವ ಚಳಕದಿಂದ ಹಿಡಿದು, ವಿಸ್ತಾರವಾದ ಬ್ರಹ್ಮಾಂಡದ ರಹಸ್ಯಗಳವರೆಗೆ, ಅರಿಮೆಯು ನಮಗೆ ಹೆಚ್ಚಿನ ಜ್ನಾನವನ್ನು ನೀಡುತ್ತಿದೆ. ಮಾನವತೆಯ ಏಳ್ಗೆಗೆ ಅರಿಮೆಯು ನೀಡಿದ ಕೊಡುಗೆ ಅಮೋಗ. ಇಂತಹ ಅರಿಮೆಯ ಬಗೆಗಿನ ಕೆಲವು ಸೋಜಿಗದ ಸಂಗತಿಗಳ ಬಗೆಗೆ ತಿಳಿದುಕೊಳ್ಳೋಣ.
ನೀವು ಅರಿಮೆಯ ವಿಶಯಗಳಲ್ಲಿ ಒಲವು ಹೊಂದಿದ್ದರೆ, ಈ ಕೆಳಗಿನ ಅಚ್ಚರಿ ಮೂಡಿಸುವ ಸಂಗತಿಗಳನ್ನು ಓದಿ, ಮತ್ತಶ್ಟು ಕುತೂಹಲ ಹೆಚ್ಚಿಸಿಕೊಳ್ಳಬಹುದು.
1. ನಮ್ಮ ದೇಹದ ಎಲ್ಲಾ ನರಗಳನ್ನು ಸೇರಿಸಿದರೆ, ಪ್ರಪಂಚವನ್ನು 2.5 ಬಾರಿ ಸುತ್ತಬಹುದು!
ಒಟ್ಟಾರೆ 96,500 ಕಿಮೀ ಉದ್ದವಿರುವ ನಾಡೀಜಾಲ ನಮ್ಮ ದೇಹದಲ್ಲಿದೆ.
2. ನಾವು ಪ್ರತಿದಿನವೂ 60-70 ಸಾವಿರ ಯೋಚನೆಗಳನ್ನು ಮಾಡುತ್ತೇವೆ!
ಇದರಲ್ಲಿ 80% ನಕಾರಾತ್ಮಕ ಯೋಚನೆಗಳಾಗಿರಬಹುದು.
3. ಒಂದುವೇಳೆ ಇಳೆಯ ಮೇಲೆ ನೆಲಸೆಳೆತ ಇಲ್ಲದಿದ್ದಲ್ಲಿ( Gravity ), ನಾವು ನೇರವಾಗಿ ಸೆಕೆಂಡಿಗೆ 8 ಕಿ.ಮೀ ವೇಗದಲ್ಲಿ ಹೊರಬಾನಿಗೆ ಹಾರಬಹುದು!
4. ನಮ್ಮ ಮೆದುಳಿನ 75% ಬಾಗ ನೀರಿನಿಂದ ಕೂಡಿದೆ!
5. ಆಪ್ರಿಕಾದ ಹಳೆಯ ಮರವೊಂದು 6,000 ವರ‍್ಶ ಹಳೆಯದು!
“ಬೋಬಾಬ್” ಮರಗಳು ಹಲವು ಶತಮಾನಗಳ ಕಾಲ ಬದುಕಬಲ್ಲವು.
6. ಇಡೀ ಹಿಮಾಲಯ ಶ್ರೇಣಿಯು ವರ‍್ಶಕ್ಕೆ 5mm ಎತ್ತರ ಏರುತ್ತಿದೆ!
ಇದು ಟೆಕ್ಟೋನಿಕ್ ಪ್ಲೇಟ್ ಚಲನೆಯ ಕಾರಣದಿಂದಾಗುತ್ತಿದೆ.
7. ಸೂರ‍್ಯನ ಬೆಳಕು ಬೂಮಿಗೆ ತಲುಪಲು 8 ನಿಮಿಶ 20 ಸೆಕೆಂಡು ತೆಗೆದುಕೊಳ್ಳುತ್ತದೆ.
ಸೂರ‍್ಯನ ಬೆಳಕು ಬೂಮಿಯಡೆಗಿನ 150 ಮಿಲಿಯನ್ ಕಿಮೀ ದೂರವನ್ನು ಸಾಗಿ ಬರುತ್ತದೆ.
8. ನಮ್ಮ ಮೆದುಳಿನ ನೆನಪಿನ ಕಸುವು (Storage Capacity) 2.5 ಪೆಟಾಬೈಟ್ಸ್ (1 ಪೆಟಾಬೈಟ್ = 1024 ಟೆರಾಬೈಟ್‌ಗಳು) ಇದೆ! ಅಂದರೆ 300 ವರ‍್ಶಗಳ ಉತ್ತಮ ಗುಣಮಟ್ಟದ(HD Video) ವೀಡಿಯೋ ಡೇಟಾವನ್ನು ಉಳಿಸಬಹುದು.
9. ಚಂದ್ರನ ಮೇಲೆ ನಮ್ಮ ಬೂಮಿಯ 1/6 ಪಟ್ಟು ಮಾತ್ರ ನೆಲಸೆಳೆತವಿದೆ!
ಆದ್ದರಿಂದ ಅಲ್ಲಿ ಇಳೆಗೆ ಹೋಲಿಸಿದಲ್ಲಿ ವಸ್ತುಗಳ ತೂಕ ಕಡಿಮೆಯಿರುತ್ತದೆ.
10. ಕಡಲಿನಲ್ಲಿರುವ 90% ಜೀವರಾಶಿಗಳನ್ನು ನಾವು ಇನ್ನೂ ಗುರುತಿಸಿಲ್ಲ!
ಕಡಲ ಜೀವರಾಶಿಗಳು ತಮ್ಮೊಳಗೆ ಹಲವು ರಹಸ್ಯಗಳನ್ನು ಬಚಿಟ್ಟುಕೊಂಡಿವೆ.
11. ಮೋಡಗಳ ತೂಕ ಲಕ್ಶಾಂತರ ಕಿಲೋಗ್ರಾಂ ಇರುತ್ತದೆ.
ಒಂದು ದೊಡ್ಡ ಮೋಡ 5 ಲಕ್ಶ ಕಿಲೋ ಗ್ರಾಂ ತೂಕದ ವರೆಗೆ ಇರಬಹುದು.
12. ನಮ್ಮ ಹ್ರುದಯವು ದಿನಕ್ಕೆ 1,00,000 ಬಾರಿ ಬಡಿದುಕೊಳ್ಳುತ್ತದೆ!
ಅಂದರೆ ವರ‍್ಶಕ್ಕೆ 3.65 ಕೋಟಿ ಬಾರಿ!
13. ಚಂದ್ರನ ಮಣ್ಣಿನಿಂದ ಮನೆ ಕಟ್ಟಲು ಸಾದ್ಯ!
ನಾಸಾ ಮತ್ತು ಇಸ್ರೋನ ವಿಜ್ನಾನಿಗಳು, ಚಂದ್ರನ ಮೇಲ್ಮೈಯಲ್ಲಿಯೇ ತ್ರೀಡಿ(3D) ಪ್ರಿಂಟಿಂಗ್ ತಂತ್ರಜ್ನಾನ ಬಳಸಿ ಕಟ್ಟಡಗಳು ಮತ್ತು ಬದುಕಲು ಬೇಕಾದ ಸಾದನಗಳನ್ನು ನಿರ‍್ಮಿಸಲು ತಂತ್ರಜ್ನಾನ ಅಬಿವ್ರುದ್ದಿಪಡಿಸುತ್ತಿದ್ದಾರೆ!
14. ಮನುಶ್ಯನ ಉಸಿರಾಟದಿಂದ ಮಿಂಚಿನ ಉತ್ಪತ್ತಿ ಸಾದ್ಯ!
ನ್ಯಾನೊಜೆನೆರೇಟರ್ (Nanogenerator) ಉಪಕರಣದಿಂದ ನಾವು ಉಸಿರಾಡುವ ಪ್ರಕ್ರಿಯೆಯಿಂದಲೇ ಸಣ್ಣಮಟ್ಟಕ್ಕೆ ಮಿಂಚನ್ನು ಉತ್ಪತ್ತಿ ಮಾಡಬಹುದಾಗಿದೆ. ಇದನ್ನು ತೊಡುಗೆ ಚೂಟಿಗಳನ್ನು ( Wearable Devices ) ಚಾರ್‍ಜ್ ಮಾಡಲು ಬಳಸಬಹುದು.
15.ನೇರವಾಗಿ ಮೆದುಳಿನಿಂದ ಕಂಪ್ಯೂಟರ್ ಅನ್ನು ನಿಯಂತ್ರಿಸುವ ಚಳಕ ಬಂದಾಗಿದೆ!
ನ್ಯೂರಾಲಿಂಕ್ ( Neuralink ) ಹಾಗೂ ಮೆದುಳು ಮತ್ತು ಕಂಪ್ಯೂಟರ್ ಒಡಸೇರ‍್ದಾಣ ( Brain-Computer Interface- BCI ) ಚಳಕ ಬಳಸಿಕೊಂಡು, ಕೀಬೋರ್‍ಡ್ ಅತವಾ ಮುಟ್ಟುತೆರೆಗಳ( Touch screen) ಅಗತ್ಯವಿಲ್ಲದೆ, ನಾವು ನಮ್ಮ ಯೋಚನೆಯ ಮೂಲಕವೇ ಕಂಪ್ಯೂಟರ್ ಅನ್ನು ನಿಯಂತ್ರಿಸಲು ಸಾದ್ಯವಾಗಲಿದೆ!
( ಮಾಹಿತಿ ಸೆಲೆ: chatgpt.com , ಚಿತ್ರಸೆಲೆ: Microsoft Copilot )
ಇತ್ತೀಚಿನ ಅನಿಸಿಕೆಗಳು