ಕವಿತೆ: ಶರಣೆನ್ನಿರೋ

– ಪವನ್ ಕುಮಾರ್ ರಾಮಣ್ಣ (ಪಕುರಾ)

ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು
ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ
ಶರಣೆನ್ನಿರೋ ಇವಗೆ ಶರಣೆನ್ನಿರೋ
ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ

ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ
ಗುಡಿಯಲ್ಲಿ ಗಪ್ಪಾಗಿ ಗುಪ್ಪಿಯಾಗ್ ಅಡಗವ್ನೆ
ಶರಣೆನ್ನಿರೋ ಇವಗೆ ಶರಣೆನ್ನಿರೋ
ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ

ಕುತ್ತಿಗೆಯ ಚಾಕ್ಕೊಂಡು ನೆತ್ತಿಯ ಮ್ಯಾಲೆತ್ತಿ
ನೇಸರನ ನೋಡ್ಕೊಂಡು ನಗುನಗುತ ನಲಿದವ್ನೆ
ಶರಣೆನ್ನಿರೋ ಇವಗೆ ಶರಣೆನ್ನಿರಿ
ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ

ಕರಿ ಕರಡಿ ಮರಿಯಂತೆ ಮೊಟ್ನಾಯ ಸಿರಿಯಂತೆ
ಕಾಡಂದಿ ಕಾಡ್ನಾಗೆ ಜೇನ್ನವಿಲ ಸವಿದವ್ನೆ
ಶರಣೆನ್ನಿರೋ ಇವಗೆ ಶರಣೆನ್ನಿರೋ
ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ

ಮೈ ಮನಸು ಮಡಿಯಾಗಿ ಹೂ ಕಾಯಿ ಇಡಿಯಾಗಿ
ಕಾಲ್ನಡಿಗೆ ನಡ್ಕೊಂಡು ಸ್ವಾಮಾರ ಮಾಡುವ
ಶರಣೆನ್ನಿರೋ ಇವಗೆ ಶರಣೆನ್ನಿರೋ
ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *