ಮಾಡಿ ನೋಡಿ ಹೆಸರು ಬೇಳೆ ಕಡುಬು

– ಸವಿತಾ.

ಏನೇನು ಬೇಕು ?

  • ಹೆಸರುಬೇಳೆ – ಅರ್‍ದ ಲೋಟ
  • ಅಕ್ಕಿ
  • ರವೆ – 1 ಲೋಟ
  • ತಾಜಾ ಕೊಬ್ಬರಿ ತುರಿ – ಅರ್‍ದ ಲೋಟ
  • ಉಪ್ಪು – ರುಚಿಗೆ ಅನುಸಾರ
  • ಎಣ್ಣೆ – 1 ಚಮಚ
  • ಸಾಸಿವೆ – ಕಾಲು ಚಮಚ
  • ಜೀರಿಗೆ – ಕಾಲು ಚಮಚ
  • ಒಣ ಮೆಣಸಿನ ಕಾಯಿ – 1
  • ಅರಿಶಿಣ ಸ್ವಲ್ಪ

ಮಾಡುವ ಬಗೆ:

ಮೊದಲಿಗೆ ಹೆಸರು ಬೇಳೆ ತೊಳೆದು ಅರ‍್ದ ಗಂಟೆ ಕಾಲ ನೆನೆಯಲು ಇಡಿರಿ. ನಂತರ ಒಂದು ಲೋಟ ನೀರು ಹಾಕಿ ಒಂದು ಕುದಿ ಕುದಿಸಿ ಒಲೆ ಆರಿಸಿ. ನಂತರ ಹಸಿ ಕೊಬ್ಬರಿ ತುರಿದು ಇಟ್ಟುಕೊಳ್ಳಿರಿ. ಈಗ ಅಕ್ಕಿ ರವೆ ತೊಳೆದು, ಕೊಬ್ಬರಿ ತುರಿ ಸೇರಿಸಿ . ಹೆಸರು ಬೇಳೆಯಿಂದ ನೀರು ಬಸಿದು, ನೀರು ಬೇರೆ ಇಡಿ. ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ; ಸಾಸಿವ, ಜೀರಿಗೆ, ಒಣ ಮೆಣಸಿನ ಕಾಯಿ ಕೈಯಿಂದ ಪುಡಿ ಮಾಡಿ ಹಾಕಿ. ಹಾಗೆ ಸ್ವಲ್ಪ ಅರಿಶಿಣ, ಉಪ್ಪು ಸೇರಿಸಿ ಒಗ್ಗರಣೆ ಮಾಡಿ ನಂತರ ರವೆ, ಹೆಸರು ಬೇಳೆಯನ್ನು ಕೊಬ್ಬರಿ ತುರಿಗೆ ಸೇರಿಸಿ. ಈಗ ಬಸಿದಿಟ್ಟ ನೀರಿಗೆ ಮತ್ತೆ ನೀರು ಸೇರಿಸಿ ಒಂದೂವರೆ ಲೋಟ ನೀರು ಮಾಡಿ ಸೇರಿಸಿ . ಈಗ ಮಿಶ್ರಣವನ್ನು ಚೆನ್ನಾಗಿ ಕಲಸಿ ಸಣ್ಣ ಉಂಡೆ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ (ಇಡ್ಲಿ ತರಹ) ಬೇಯಿಸಿ ತೆಗೆಯಿರಿ. ಈಗ ಹೆಸರು ಬೇಳೆ ಕಡುಬು ಸವಿಯಲು ಸಿದ್ದವಾಗಿದೆ. ಈಗ ತಯಾರಿಸಿದ ಹೆಸರು ಬೇಳೆ ಕಡುಬು. ಕೊಬ್ಬರಿ ಚಟ್ನಿ, ಈರುಳ್ಳಿ ಚಟ್ನಿ ಜೊತೆ ಸವಿಯಿರಿ.

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *