ಕವಿತೆ: ಮನ ಕದ್ದು ಹೋದವಳೇ
ಅಕ್ಕರೆಯ ಮಾತಾಡಿ
ಸಕ್ಕರೆ ನಗುವ ಚೆಲ್ಲಿ
ಒಲವಿನ ಸಸಿ ನೆಟ್ಟವಳೇ
ಮೊದಲ ನೋಟದಲೆ
ಮಿಂಚಿನಂತೆ ಸಂಚರಿಸಿ
ರೋಮಾಂಚನ ತಂದವಳೇ
ಕಣ್ಣೆದುರು ಬಂದು
ಮೈಮರೆಸಿ ಹೋಗಿಹೆಯ
ನಾಜೂಕು ನಡೆಯವಳೇ
ನಿಂತಲ್ಲೇ ಸೆರೆಹಿಡಿದು
ನನ ಬಂದಿ ಮಾಡಿರುವೆ
ಮನ ಕದ್ದು ಹೋದವಳೇ
(ಚಿತ್ರಸೆಲೆ: pexels.com)
ಇತ್ತೀಚಿನ ಅನಿಸಿಕೆಗಳು