ಮಾಡಿ ನೋಡಿ ಮೊಟ್ಟೆ ಅನ್ನ
– ನಿತಿನ್ ಗೌಡ.
ಏನೇನು ಬೇಕು ?
- ಅಕ್ಕಿ – ಒಂದೂ ವರೆ ಕಪ್ಪು ( ಮೂರು ಜನಕ್ಕೆ)
- ಮೊಟ್ಟೆ – 5
- ಈರುಳ್ಳಿ( ನಡು ಗಾತ್ರದ್ದು ) – 3
- ಟೊಮೋಟೋ – 1
- ಹಸಿಮೆಣಸು – 4
- ಕಾರದ ಪುಡಿ – 2 ಚಮಚ
- ದನಿಯಾ ಪುಡಿ – ಅರ್ದ ಚಮಚ
- ಜೀರಿಗೆ ಪುಡಿ – ಅರ್ದ ಚಮಚ
- ಗರಮ್ ಮಸಾಲೆ – 1 ಚಮಚ
- ಎಣ್ಣೆ – ಸ್ವಲ್ಪ
- ಅರಿಶಿಣ – ಕಾಲು ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಕೊತ್ತಂಬರಿ ಸೊಪ್ಪು – ಚೆಂದಕಾಣಿಸಲು ಸ್ವಲ್ಪ
ಮಾಡುವ ಬಗೆ:
ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ಬಳಿಕ, ಹೆಚ್ಚಿಟ್ಟುಕೊಂಡ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಶುಂಟಿ ಬೆಳ್ಳುಳ್ಳಿ ಗಸಿ ಹಾಕಿ ಬಾಡಿಸಿ. ಈಗ ಇದಕ್ಕೆ ಟೋಮೋಟೋ ಹಾಕಿ, ಉಪ್ಪು, ಅರಿಶಿಣ ಹಾಕಿ ಬಾಡಿಸಿ. ಈಗ ಇದಕ್ಕೆ ಜೀರಿಗೆ ಪುಡಿ, ಕಾರದ ಪುಡಿ, ದನಿಯಾ ಪುಡಿ ಹಾಕಿ ಬಾಡಿಸಿ. ಈಗ ಇದಕ್ಕೆ ಮೊಟ್ಟೆ ಒಡೆದು ಹಾಕಿ ,ನಡು ಉರಿಯಲ್ಲಿ ಹುರಿಯಿರಿ. ಕೊನೆಗೆ ಇದಕ್ಕೆ ಅನ್ನ ಹಾಕಿ ಕಲಸಿ, ಗರಮ್ ಮಸಾಲೆ ಹಾಕಿ ಇನ್ನಶ್ಟು ಕಲಸಿಕೊಳ್ಳಿ. ಇದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಬಿಸಿ ಬಿಸಿ ಮೊಟ್ಟೆ ಅನ್ನ ಸಿದ್ದವಿದ್ದು, ಕೋಳಿ ಕಬಾಬ್ ಕೊತೆ ಸವಿಯಲು ಚೆನ್ನಾಗಿರುತ್ತದೆ.
( ಚಿತ್ರಸೆಲೆ : ಬರಹಗಾರರು )
ಇತ್ತೀಚಿನ ಅನಿಸಿಕೆಗಳು