ಹುಣಸೆ ಹುಳಿ ಅನ್ನ
ಏನೇನು ಬೇಕು
- ಹುಣಸೆಹಣ್ಣು – 1 ನಿಂಬೆ ಹಣ್ಣಿನ ಗಾತ್ರ
- ಅರಿಶಿಣ – 1 ಚಮಚ
- ಕರಿಬೇವು – 10 ಎಲೆ
- ಕಡಲೆಬೇಳೆ – ಸ್ವಲ್ಪ
- ಅಡುಗೆ ಎಣ್ಣೆ – ಸ್ವಲ್ಪ
- ಸಾಸಿವೆ – ಸ್ವಲ್ಪ
- ಒಣಮೆಣಸಿನಕಾಯಿ – 4
- ಉಪ್ಪು – ರುಚಿಗೆ ತಕ್ಕಶ್ಟು
- ಅಕ್ಕಿ – 1 ಲೋಟ
- ಕಡಲೆಬೀಜ (ಶೇಂಗಾ) – ಸ್ವಲ್ಪ
ಮಾಡುವ ಬಗೆ
ಒಂದು ಸಣ್ಣ ಪಾತ್ರೆಗೆ ಸ್ವಲ್ಪ ನೀರು ಸೇರಿಸಿ, ಅರಿಶಿಣ, ಹುಣಸೆಹಣ್ಣು ಹಾಕಿ ಕಲಸಿ ನೆನೆಯಲು ಬಿಡಿ. ಒಂದು ಕುಕ್ಕರ್ ನಲ್ಲಿ ಅಕ್ಕಿ ಹಾಗೂ 2 ಲೋಟ ನೀರು ಹಾಕಿ, ಮುಚ್ಚಿ 3 ಕೂಗು ಕೂಗಿಸಿ, ಅನ್ನ ಆದ ಮೇಲೆ ಒಂದು ತಟ್ಟೆಗೆ ಹಾಕಿ ಆರಿಸಿ.
ಒಂದು ಸಣ್ಣ ಬಾಣಲೆಗೆ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಾಸಿವೆ, ಕಡಲೆಬೀಜ, ಕಡಲೆಬೇಳೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ, ತಟ್ಟೆಯಲ್ಲಿ ಅರಿಸಿದ ಅನ್ನಕ್ಕೆ ಸೇರಿಸಿ. ಇದಕ್ಕೆ ನೆನೆಸಿಟ್ಟಿದ್ದ ಹುಣಸೆ ಹುಳಿ ಹಾಕಿ ಚೆನ್ನಾಗಿ ಕಲಸಿ. ಈಗ ರುಚಿಕರ ಹುಣಸೆ ಹುಳಿ ಅನ್ನ ರೆಡಿ.
(ಸಾಂದರ್‍ಬಿಕ ಚಿತ್ರ ಸೆಲೆ: indiamart.com )
ಇತ್ತೀಚಿನ ಅನಿಸಿಕೆಗಳು