ಮಾಡಿ ನೋಡಿ ರಸ್ತೆಯ ಬದಿಯ ಶೈಲಿಯ ಸ್ವೀಟ್ ಕಾರ್ನ್
ಬೇಕಾಗುವ ಸಾಮಾನುಗಳು
- ಬೇಯಿಸಿದ ಸ್ವೀಟ್ ಕಾರ್ನ್ – 250 ಗ್ರಾಂ
- ಬೆಣ್ಣೆ – 3 ಟೀ ಚಮಚ
- ಚಾಟ್ ಮಸಾಲಾ – ರುಚಿಗೆ ತಕ್ಕಶ್ಟು
- ಕಾರದ ಪುಡಿ – ರುಚಿಗೆ ತಕ್ಕಶ್ಟು
- ನಿಂಬೆ ರಸ – 1 ಟೀ ಚಮಚ
ಮಾಡುವ ಬಗೆ
ಮೊದಲಿಗೆ ಒಂದು ಬಾಣಲೆಯನ್ನು ಮದ್ಯಮ ಉರಿಯಲ್ಲಿ ಬಿಸಿ ಮಾಡಿ. ಈಗ ಇದಕ್ಕೆ ಬೇಯಿಸಿದ ಸ್ವೀಟ್ ಕಾರ್ನ್ ಕಾಳುಗಳನ್ನು ಹಾಕಿ, 1-2 ನಿಮಿಶಗಳ ಕಾಲ ಬಿಸಿ ಮಾಡಿ. ನಂತರ ಬೆಣ್ಣೆಯನ್ನು ಸೇರಿಸಿ ಅದು ಕರಗಿ ಕಾರ್ನ್ ಕಾಳುಗಳಿಗೆ ಚೆನ್ನಾಗಿ ಲೇಪಿಸುವವರೆಗೆ ಬೆರೆಸಿ. ಬಾಣಲೆಯನ್ನು ಉರಿಯಿಂದ ಇಳಿಸಿ ಮತ್ತು ಕಾರ್ನ್ ಅನ್ನು ಬೌಲ್ಗೆ ವರ್ಗಾಯಿಸಿ. ಈಗ ಇದರಮೇಲೆ ಚಾಟ್ ಮಸಾಲಾ ಮತ್ತು ಕಾರದ ಪುಡಿಯನ್ನು ಉದುರಿಸಿ. ಆಮೇಲೆ ನಿಂಬೆ ರಸವನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ರುಚಿಯಾದ ಸ್ವೀಟ್ ಕಾರ್ನ್ ತಿನ್ನಲು ಸಿದ್ದ.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು