ಹಯಗ್ರೀವ
ಏನೇನು ಬೇಕು
- ಕಡಲೆಬೇಳೆ – 1 ಬಟ್ಟಲು
- ಬೆಲ್ಲ – ¾ ಬಟ್ಟಲು
- ಗೋಡಂಬಿ – 5
- ಬಾದಾಮಿ – 4
- ಲವಂಗ – 5
- ದ್ರಾಕ್ಶಿ – 5
- ಕೊಬ್ಬರಿ ತುರಿ
- ಏಲಕ್ಕಿ ಪುಡಿ
- ತುಪ್ಪ
ಮಾಡುವ ಬಗೆ
ಕಡಲೇಬೇಳೆಗೆ ನೀರು ಹಾಕಿ, ಅರ‍್ದ ದಿನ ನೆನೆಯಲು ಬಿಡಿ. ನೆನೆಸಿದ ಕಡಲೆಬೇಳೆಯನ್ನು ಕುಕ್ಕರ್ ಗೆ ಹಾಕಿ, 3 ರಿಂದ 4 ಲೋಟ ನೀರು ಸೇರಿಸಿ, ಒಂದು ವಿಶಲ್ ಹೊಡೆಸಿ.
ಒಂದು ಬಾಣಲೆಗೆ 3 ಚಮಚ ತುಪ್ಪ ಹಾಕಿ, ಗೋಡಂಬಿ ಮತ್ತು ದ್ರಾಕ್ಶಿಯನ್ನು ಹುರಿದು ತೆಗೆಡಿದಿ. ಇದೇ ಬಾಣಲೆಗೆ ಬೇಯಿಸಿದ ಕಡಲೆಬೇಳೆ, ಬೆಲ್ಲ, ಲವಂಗ ಹಾಗೂ 5 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಪಾಕ ಬರುವವರೆಗೆ ಬೇಯಿಸಿ. ನಂತರ ಕೊಬ್ಬರಿ ತುರಿ, ಏಲಕ್ಕಿ ಪುಡಿ ಹಾಗೂ ಹುರಿದಿಟ್ಟುಕೊಂಡಿದ್ದ ಗೋಡಂಬಿ, ದ್ರಾಕ್ಶಿ ಹಾಕಿ ಚೆನ್ನಾಗಿ ಕಲಸಿ. ಬಾದಾಮಿಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಿ ಇದರ ಮೇಲೆ ಉದುರಿಸಿ. ಈಗ ಬಿಸಿ ಬಿಸಿ ಹಯಗ್ರೀವ ರೆಡಿ.
( ಸಾಂದರ್‍ಬಿಕ ಚಿತ್ರಸೆಲೆ: swiggy.com )
ಇತ್ತೀಚಿನ ಅನಿಸಿಕೆಗಳು