ಜೀರಿಗೆ ಜ್ಯೂಸ್

– ಸವಿತಾ.

ಏನೇನು ಬೇಕು

  • ಜೀರಿಗೆ – 1 ಚಮಚ
  • ಉಪ್ಪು – 1/4 ಚಮಚ
  • ಕರಿಮೆಣಸಿನಕಾಳು – 4
  • ಏಲಕ್ಕಿ – 2
  • ಬೆಲ್ಲ – 6
  • ಹುಣಸೆಹಣ್ಣು – 4
  • ನೀರು – 3 ಲೋಟ

ಮಾಡುವ ಬಗೆ

ಹುಣಸೆಹಣ್ಣನ್ನು ಅರ‍್ದ ಗಂಟೆ ನೆನೆ ಹಾಕಿ, ಒಂದು ಲೋಟ ನೀರು ಸೇರಿಸಿ ಹಿಚಿಕಿ, ಸೋಸಿ ಇಟ್ಟುಕೊಳ್ಳಿ. ಜೀರಿಗೆ, ಉಪ್ಪು, ಕರಿಮೆಣಸಿನಕಾಳು ಹಾಗೂ ಏಲಕ್ಕಿಯನ್ನು ಪುಡಿ ಮಾಡಿ, ಸೋಸಿಟ್ಟ ಹುಣಸೆಹಣ್ಣಿನ ಹುಳಿಗೆ ಸೇರಿಸಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು 2 ಲೋಟ ನೀರು ಸೇರಿಸಿ ತಂಪಾಗಲು ಸ್ವಲ್ಪ ಹೊತ್ತು ಪ್ರಿಡ್ಜ್ ನಲ್ಲಿ ಇಟ್ಟು ಆಮೇಲೆ ಕುಡಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks