ಒಳಗಿನ ಶಿವನೊಬ್ಬನೇ ದಿಟ

– ಬರತ್ ಕುಮಾರ್.

782863642

ನೆರೆ ಬಂದು ಉತ್ತರದಲ್ಲಿ
ಹೊರಗಿನ ಶಿವನು ತೇಲುತಿಹನು
ಒಳಗಿನ ಶಿವನು
ನಲಿಯುತಿಹನು ಅವನ ನೋಡಿ

ನೀರ ಗಂಗೆ ನುಂಗಿಹಳು
ಹೊರಗಿನ ಶಿವನ
ಅರಿವಿನ ಗಂಗೆ
ಸೇರಿಹಳು ಒಳಗಿನ ಶಿವನ

ಹೊರಗಿನದಕ್ಕೆ ಅಳಿವುಂಟು
ಒಳಗಿನದಕ್ಕೆ ಅಳಿವಿಲ್ಲವಿಂದು
ಹೇಳಿದನು ಬಸವಣ್ಣನಂದು
ಕೇಳಿ ಮರೆತೆವು ನಾವು
ತಿಳಿಯದಾದೆವು ಒಳಗಿನ ಶಿವನ

ಹೊರಗಿನ ಶಿವನದು ಬರೀ ಮಾಟ!
ಒಳಗಿನ ಶಿವನೊಬ್ಬನೇ ದಿಟ
ಒಳಗಿನ ಶಿವನೊಬ್ಬನೇ ದಿಟ

(ಚಿತ್ರ: http://d3j5vwomefv46c.cloudfront.net/)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *