ಕವಿತೆ : ಕರುನಾಡ ಮನೆಮನದ ಹಬ್ಬ

ಶಿವಮೂರ‍್ತಿ. ಹೆಚ್. ದಾವಣಗೆರೆ.

dasara

ವಿಜಯನಗರ ಅರಸರ ಕಾಲದ ನವಮಿ ದಿಬ್ಬವು
ಮೈಸೂರ ರಾಜ ಒಡೆಯರ‍್ ಕಾಲದಿ ದಸರವು
ಆಶ್ವಯುಜ ಮಾಸದಿ ದಶದಿನಗಳ ಸಂಬ್ರಮವು
ಕರುನಾಡ ಮನೆಮನಗಳಂಗಳದಿ ಸಡಗರವು

ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ
ಅಟ್ಟಹಾಸದಿ ಮೆರೆದ ಮಹಿಶಾಸುರನ ಸಂಹಾರಿ
ಕಪ್ಪು ಮಣ್ಣಿನ ಜನರ ಬಕ್ತಿಗೆ ಒಲಿದ ಮಹಾಮಾಯಿ
ಕನ್ನಡಿಗರ ಅನವರತ ಪೊರೆಯುವ ಕರುಣಾಮಯಿ

ವಿಜಯದಶಮಿಯ ವೈಬವವ ಸವಿಯುವ ಕಾತುರ
ವಿಶ್ವದ ಮೂಲೆ ಮೂಲೆಯಿಂದ ಬರುವ ಜನಸಾಗರ
ಕಣ್ಮನಗಳ ಮೂಕ ವಿಸ್ಮಿತಗೊಳಿಸುವ ಸ್ತಬ್ದ ಚಿತ್ರಗಳು
ಹ್ರನ್ಮನಗಳ ತಣಿಸುವ ಜನಪದ ಕಲಾ ತಂಡಗಳು

ಬನ್ನಿ ಬನ್ನಿಮಂಟಪದ ಮುಂದೆ ನಾವೆಲ್ಲರೂ ಸೇರುವ
ಚಿನ್ನದ ಅಂಬಾರಿಯಲ್ಲಿಯ ಚಾಮುಂಡಿಯ ನೋಡುವ
ಜಂಬೂಸವಾರಿಯ ಗತ್ತಿನ ಗಮ್ಮತ್ತುನು ಸವಿಯುವ
ಜನರ ಬದುಕು ಹಸನಾಗಲೆಂದು ತಾಯಿಯ ಬೇಡುವ

( ಚಿತ್ರ ಸೆಲೆ: mysoredasara.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *