ಕವಿತೆ: ಅದೊಂದಿತ್ತು ಕಾಲ
– ನಿತಿನ್ ಗೌಡ.
ಅದೊಂದಿತ್ತು ಕಾಲ
ಮದುರ ಬಾವನೆಗಳ ತೊಗಲು ಗೊಂಬೆಯಾಟ ಜರುಗುತಿತ್ತು;
ಒಲುಮೆ ಎನ್ನುವ ಪರೆದೆಯ ಹಿಂದೆ;
ತಿರುಗಿ ನೋಡಲು ಆ ಗಳಿಗೆಯ,
ನೆನಪೆಂಬ ಬುತ್ತಿಯನು ತೆರೆದು..
ಪುಳಕಗೊಳ್ಳುವುದು ಮನ, ಸಾರ್‍ತಕತೆಯ ಬಾವದಲಿ..
ಅಂದೊಂದಿತ್ತು ಕಾಲ…
ಅಲ್ಲಲ್ಲೇ ಮೂಡುತಿದ್ದ ತೆರೆಮೆರೆಯ ಮುನಿಸುಗಳೇ..
ಮರೆಮಾಚಿದ ಒಲುಮೆಯ ಕಣ್ಣಾಮುಚ್ಚಾಲೆಗೆ ಹಿಡಿದ ಕನ್ನಡಿ ಅಲ್ಲವೇ ನನ್ನೊಡತಿ?
ಜೊತೆಗೂಡಿ ಕಳೆದ ಕ್ಷಣಗಳ ಪೋಣಿಸಲು..
ದೊರೆವುದು ನಮ್ಮ ಬಾಳಪಯಣದ ಸರಮಾಲೆ..
ಜಪಿಸಲು ಅದನು, ದೊರೆವುದು ಪಯಣದ ಹಿನ್ನೋಟ..
ಸವೆಸುವ ಸಮಯವ, ಈ ಮುಪ್ಪಿನಲಿ;
ಯೌವನದ ಹುರುಪನು ಮೆಲುಕುತ ಎನ್ನ ಸಂಗಾತಿ..
( ಚಿತ್ರಸೆಲೆ: )
ಇತ್ತೀಚಿನ ಅನಿಸಿಕೆಗಳು