ಅಕ್ಕಿ ಸಿಹಿ
– ಸವಿತಾ.
ಬೇಕಾಗುವ ಪದಾರ್ತ ಗಳು
ಅಕ್ಕಿ – 1 ಲೋಟ
ಹಸಿ ಕೊಬ್ಬರಿ ತುರಿ – 1/2 ತೆಂಗಿನ ಕಾಯಿ
ಬೆಲ್ಲ – 3/4 (ಮುಕ್ಕಾಲು) ಲೋಟ
ತುಪ್ಪ – 4 ರಿಂದ 6ಚಮಚ
ಏಲಕ್ಕಿ – 4
ಅರಿಶಿಣ ಸ್ವಲ್ಪ
ನೀರು – 2 ಲೋಟ
ಮಾಡುವ ಬಗೆ
ಅಕ್ಕಿ ತೊಳೆದು ಬಿಸಿಲಿನಲ್ಲಿ ಪೂರ್ಣ ಒಣಗಿಸಿ ಇಟ್ಟುಕೊಳ್ಳಿ. ನಂತರ ಮಿಕ್ಸರ್ ನಲ್ಲಿ ಸಣ್ಣ ರವೆ ಮಾಡಿ ಇಡಿರಿ. ಅರ್ದ ಹೋಳು ತೆಂಗಿನಕಾಯಿ ತುರಿದು, ಒಂದು ಲೋಟ ನೀರು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ತೆಗೆಯಿರಿ. ಒಂದು ಬಾಣಲೆ ಕಾಯಲು ಇಟ್ಟು, ಸ್ವಲ್ಪ ತುಪ್ಪ, ಅಕ್ಕಿ ರವೆ ಹಾಕಿ ಹುರಿದು ತೆಗೆದಿಡಿ.
ಇನ್ನೊಂದು ಬಾಣಲೆಯಲ್ಲಿ ರುಬ್ಬಿದ ಕೊಬ್ಬರಿ ಮತ್ತು ಒಂದು ಲೋಟ ನೀರು, ಬೆಲ್ಲ ಹಾಕಿ ಕುದಿಯಲು ಇಡಿ.ಒಂದು ಕುದಿ ಬಂದ ನಂತರ ಹುರಿದ ಅಕ್ಕಿ ರವೆ ಮತ್ತು ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ ತುಪ್ಪ ಹಾಕಿ ತಿರುಗಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ ಚೆನ್ನಾಗಿ ತಿರುಗಿಸಿ. ಸ್ವಲ್ಪ ಗಟ್ಟಿ ಆದ ಹಾಗೇ ಕೆಳಗೆ ಇಳಿಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ತಯಾರಾದ ಅಕ್ಕಿ ಸಿಹಿ ಸುರುವಿ ಸಮ ಮಾಡಿ, ನಿಮಗೆ ಬೇಕಾದ ಆಕಾರ ಕೊಟ್ಟು ಕತ್ತರಿಸಿ. ಈಗ ಅಕ್ಕಿ ಸಿಹಿ ಸವಿಯಲು ಸಿದ್ದ.
(ಚಿತ್ರ ಸೆಲೆ: ಬರಹಗಾರರು)


ಇತ್ತೀಚಿನ ಅನಿಸಿಕೆಗಳು