ಹೊಸ ಹಣದ ಪಯ್ಪೋಟಿಯಲ್ಲಿ ಈಗ ’ಈ-ಬೇ’

ವಿವೇಕ್ ಶಂಕರ್.

ebay

ಹಿಂದಿನ ಬರಹದಲ್ಲಿ ಮಿಂಬಲೆ ಹಣಗುರ‍್ತಿನ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಮಿಂಬಲೆಯ ಮೂಲಕ ಕೂಡ ಕೊಳ್ಳುವಿಕೆ ಹೆಚ್ಚಾಗಿರುವುದು ನಮಗೆ ಗೊತ್ತಿರುವಂತದು. ಮಿನ್ಕೊಳುಕೊಡೆ (e-commerce)ಯ ಮುಂಚೂಣಿ ಕೂಟವಾದ ಈ-ಬೇ (e-bay) ತಮ್ಮದೇ ಮಿಂಹಣವನ್ನು (e-money) ಬಿಡುಗಡೆ ಮಾಡಿರುವ ಸುದ್ದಿ ಹೊರಬಂದಿದೆ. ಜೊತೆಗೆ ಈ ಕುರಿತು ಹಕ್ಕೋಲೆಯನ್ನೂ (patent) ಕೂಡ ಸಲ್ಲಿಸಿದೆಯಂತೆ. ಈ ಹಕ್ಕೋಲೆಯನ್ನು ಈ-ಬೇ ಜೂನ್ 2012 ನಲ್ಲಿ ಸಲ್ಲಿಸಿದ್ದು ಡಿಸೆಂಬರ್ 19 2013 ರಂದು ಸುದ್ದಿಯಾಗಿ ಬಯಲಾಯಿತು.

ಈ ಹಕ್ಕೊಲೆಯಲ್ಲಿ ಈ-ಬೇ ಹೇಳಿಕೊಂಡಿದ್ದೇನೆಂದರೆ ಬಳಕೆದಾರರು ತಮ್ಮ ಬಳಕೆದಾರರ ಲೆಕ್ಕವನ್ನು(user account) ಮಾಡದೆ, ಕೊಳ್ಳುವಿಕೆಯನ್ನು ಮಾಡಬಹುದು, ಮಿಂಹಣ ಕುರುಪು (token) ಬಗೆಯಲ್ಲಿ ಪಡೆದು, ಬಳಕೆದಾರರು ಈ-ಬೇ (e-bay) ಹಾಗೂ ಪೇಯ್-ಪಾಲ್ (pay-pal) ಹೊರಗಡೆ ಕೂಡ ಕೊಳ್ಳುವಿಕೆಯನ್ನು ಮಾಡಬಹುದು. ಹಾಗೂ ಈ ಕುರುಪುಗಳು ಬಿಟ್-ಕಾಯಿನ್, ಡೊಗೇ-ಕಾಯಿನ್, ಲಿಟ್-ಕಾಯಿನ್ ಅಂತ ಎದುರಾಳಿಗಿಂತ ಗಟ್ಟಿಯಾದ ಕಾಪು (safety) ಒದಗಿಸುತ್ತವೆ.

ಪೇಯ್-ಪಾಲ್ ಕೂಟದ ತಲೆಯಾಳು ಡೇವಿಡ್ ಮಾರ‍್ಕಸ್ (David Marcus) ಪ್ರಕಾರ ಪೇಯ್-ಪಾಲ್ ಸಂದಾಯಗಳಿಗೆ ಅಲೆಯುಲಿ ಬಳಕೆಯೇ ಮುಂದಿನ ದಾರಿ. ಇವೆಲ್ಲ ಬೆಳವಣಿಗೆಗಳನ್ನು ನೋಡಿದರೆ ಮಿಂಬಲೆ ಕೊಳ್ಳುವಿಕೆ ತುಂಬಾ ಹೆಚ್ಚುಗುತ್ತಿದೆ ಹಾಗೂ ಈ ಕೊಳ್ಳುವಿಕೆ ನಾಡುಗಳ ಎಲ್ಲೆಗಳನ್ನು ದಾಟಿವೆ. ಆದರೆ ಹಲವು ನಾಡಿನ ಹಣಗಳು ಮತ್ತು ಅವುಗಳು ಇಂತ ಕೊಳ್ಳುವಿಕೆಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕುವ ತೊಂದರೆಗಳಿರುವುದರಿಂದ ಇಂತ ಕೊಳ್ಳುವಿಕೆಯಲ್ಲಿ ಅಡ್ಡಿ ಬರುತ್ತವೆಂದು ಪೇ-ಪಾಲ್, ಈ-ಬೇಯ್ ಮುಂತಾದ ಕೂಟಗಳು ತಮ್ಮದೇ ಆದ ಹಣಗುರ‍್ತನ್ನು ಬಿಡುಗಡೆ ಮಾಡಿ ಬಳಕೆದಾರರ ಕೊಳ್ಳುವ ಅಳವಿಗೆ ಬೆಲೆಯನ್ನು ನೀಡುತ್ತಿದ್ದಾರೆ.

ಮಿಂಹಣವೇ ಮುಂದಕ್ಕೆ ಕೊಳುಕೊಡೆಯಲ್ಲಿ ತುಂಬಾ ದೊಡ್ಡ ಪಾಂಗು ವಹಿಸುತ್ತದೆಂದು ನಾವು ಇಲ್ಲಿ ಗಮನಸಿಬಹುದು. ಈ-ಬೇ ಅವರ ಈ ಹೆಜ್ಜೆ ಹೇಗೆ ಮುಂದುವರೆಯುತ್ತದೆಂದು ಕಾದು ನೋಡಬೇಕು.

(ಒಸಗೆ ಹಾಗೂ ತಿಟ್ಟದ ಸೆಲೆ: firstpost)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *