ಶನಿಯ ಉಂಗುರಗಳಿಂದ ನೀರು ಸೋರುತ್ತಿದೆ!
– ರಗುನಂದನ್.
ಬಾನರಿಗರು ಶನಿ ಸುತ್ತುಗದ (ಗ್ರಹದ) ಉಂಗುರಗಳಿಂದ ನೀರು ಸುರಿಯುವುದನ್ನು ಕಂಡು ಹಿಡಿದಿದ್ದಾರೆ. ಶನಿ ಸುತ್ತುಗದ ಬಗ್ಗೆ ತಿಳಿದಿದ್ದ ಮುಂಚಿನ ಅರಿಗರು ನೀರು-ತುಣುಕುಗಳು ಬರಿ ಎರಡು-ಮೂರು ಪಟ್ಟಿಗಳಿಂದ ಬೀಳುತ್ತದೆ ಮತ್ತು ಅದು ಚಿಕ್ಕ ಹರವಿನ ಮೇಲಶ್ಟೇ ಬೀಳುತ್ತದೆಯೆಂದು ಅಂದುಕೊಂಡಿದ್ದರು. ಆದರೆ ಈ ನೀರು, ಸುತ್ತುಗದ ದೊಡ್ಡ ಹರವಿನ ಮೇಲೆಯೂ ಬೀಳುತ್ತಿದ್ದು ಸುತ್ತುಗದ ಗಾಳಿಪದರದ (atmosphere) ಮೇಲೆ ಪ್ರಬಾವ ಬೀರಲಿದೆ.
ಹವಾಯಿಯ ಬಾನಂಗಳ ನೋಟದ ನೆಲೆಯಿಂದ ಬಂದ ಮಾಹಿತಿಗಳನ್ನು ಒರೆಗೆ ಹಚ್ಚಿದ ಬಾನರಿಗರು, ಉಂಗುರಗಳಿಂದ ಬೀಳುತ್ತಿರುವ ನೀರಿನ ಹರವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ ಎನ್ನುವ ತೀರ‍್ಮಾನಕ್ಕೆ ಬಂದಿದ್ದಾರೆ. ಇದರಿಂದ ಶನಿ ಸುತ್ತುಗದ ಗಾಳಿಪದರದ ಬಿಸಿಮಟ್ಟ (temperature) ಮತ್ತು ಬೆಸವಿನ (composition) ಮೇಲೆ ಒತ್ತು ಬೀರಲಿದೆ.
ಈ ಅರಕೆಯ ಮುಂದಾಳು ಜೇಮ್ಸ್ ಡೊನೊಗ್ ತಿಳಿಸುವಂತೆ ಶನಿಯ ಉಂಗುರಗಳು ಮತ್ತು ಗಾಳಿಪದರ ಒಂದರ ಮೇಲೊಂದು ಪ್ರಬಾವ ಬೀರುತ್ತವೆ, ಉಂಗುರದಿಂದ ಬೀಳುವ ಮಳೆಯು ಶನಿಯ ತುಣುಕುಪದರವನ್ನು (ionosphere) ತಣ್ಣಗಾಗಿಸುತ್ತದೆ. ಇದರಿಂದ ಎಲೆಕ್ಟ್ರಾನ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ. ಮುಂಚೆ ಬಾನರಿಗರಿಗೆ ಶನಿಯ ಕೆಲವು ಕಡೆ ಎಲೆಕ್ಟ್ರಾನ್ ದಟ್ಟಣೆ ಕಡಿಮೆ ಏಕಿರುತ್ತದೆ ಎಂಬುದರ ಬಗ್ಗೆ ಅರೆಮರೆಯಿತ್ತು. ಈಗ ಈ ನೀರಿನ ಸುರಿಯುವಿಕೆಯಿಂದಾಗಿ ಎಲೆಕ್ಟ್ರಾನ್ ದಟ್ಟಣೆ ಕಡಿಮೆಯಾಗುತ್ತದೆ ಎಂಬ ಹಿನ್ನೆಲೆ ತಿಳಿದಂತಾಗಿದೆ. ಅರಕೆಗಾರರು ಹೇಳುವಂತೆ, ಶನಿಯ ಸೆಳೆಗಲ್ಲಿನ ಹರಹು ನೀರು-ತುಣುಕುಗಳನ್ನು ಮಿಂಚಿಸುತ್ತದೆ. ಈ ತುಣುಕುಗಳು ಸುತ್ತುಗದ ಮಯ್ಯಿಗೆ ಸೆಳೆಯಲ್ಪಡುತ್ತದೆ. ಇದರಿಂದ ನೀರು ಸುರಿಯುತ್ತದೆ. ಈ ಕಂಡು-ಹಿಡಿಯುವಿಕೆ ತುಂಬಾ ಹಿಂದಿನಿಂದ ಇದ್ದ ಇಂತಹ ಕೆಲವು ಕುತೂಹಲಗಳನ್ನು ಬಗೆಹರಿಸಿದೆ.
ಇನ್ನೂ ಶನಿಯ ಕಾಟ ಎಂದು ಹುಸಿ ನಂಬಿಕೆಯಲ್ಲಿರುವ ಮಂದಿಗೆ ಬಾನಂಗಳದ ಇಂತಹ ಬೆಳವಣಿಗೆಯನ್ನು ತಿಳಿದುಕೊಳ್ಳಲು ಅರಿಮೆಯ ಬೆಳಕು ಮತ್ತೊಮ್ಮೆ ಕನ್ನಡಿಯಾಗಿದೆ.
ಸುದ್ದಿಸೆಲೆ:
(ಚಿತ್ರ: www.thehindu.com
ಇತ್ತೀಚಿನ ಅನಿಸಿಕೆಗಳು