ಬೆಳಕಿನಂತೆ ಇರುವೆಗೂ ಆತುರ!

leaf-cutter-ant_604_600x450

ಇರುವೆಗಳು ತಮ್ಮ ಆಹಾರದ ನೆಲೆಯನ್ನು ತಲುಪಲು ಹಲವು ಹಾದಿಗಳಲ್ಲಿ ಹತ್ತಿರದ ಹಾದಿಗಳನ್ನು ಆಯ್ಕೆಮಾಡಿಕೊಳ್ಳುತ್ತವೆ ಎಂಬುದು ಗೊತ್ತಿರುವ ವಿಶಯ. ಆದರೆ ಈ ಹತ್ತಿರದ ಹಾದಿಗಿಂತ ಇನ್ನೊಂದು ಹಾದಿ ದೂರವಾಗಿದ್ದರೂ ಅದರಲ್ಲಿ ಸಾಗಿದಾಗ ಬೇಗನೇ ತಲುಪಬಹುದು ಅನ್ನುವಾಗ ಇರುವೆಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎನ್ನುವುದು ಕುತೂಲಹದ ವಿಶಯವಾಗಿತ್ತು. ಬೆಳಕಿನ೦ತೆ ಇರುವೆಗಳು ಕೂಡಾ ಹತ್ತಿರದ ಹಾದಿಗೆ ಬದಲಾಗಿ ದೂರವಾಗಿದ್ದರೂ ವೇಗದ ಹಾದಿಯನ್ನು ಅರಿಸುತ್ತವೆ ಎಂಬುದು ಜರ್‍ಮನಿ, ಪ್ರಾನ್ಸ್ ಮತ್ತು ಚೀನಾಗಳ ಅರಿಗರು, ಕೆ೦ಪಿರುವೆಗಳ ಮೇಲೆ ನಡೆಸಲಾದ ಇತ್ತೀಚಿನ ಸ೦ಶೋದನೆಯಿಂದ ತಿಳಿದುಬಂದಿದೆ. ಈ ಸಂಶೋದನೆಯಿಂದಾಗಿ “ಕೂಡಿ ಬಾಳುವ ಹುಳು”ಗಳ ಬದುಕಿನ ಏರ್‍ಪಾ್ಟನ್ನು ಅರಿಯುವಲ್ಲಿಯೂ ಇನ್ನಶ್ಟು ಬೆಳಕು ಚೆಲ್ಲಿದ೦ತಾಗಿದೆ. 

ಬೂತಗನ್ನಡಿಯ ಮೂಲಕ ಬೆಳಕು ಹಾದು ಹೋಗುವಾಗ ಅದರ ಕಿರಣಗಳು ಹತ್ತಿರವಲ್ಲದಿದ್ದರೂ ಬೇಗನೆ ತಲಪಬಹುದಾದ೦ತ ಹಾದಿಯನ್ನು ಆರಿಸಿಕೊಳ್ಳುತ್ತವೆ ಎಂದು ಪ್ರಾನ್ಸ್ ಅರಿಗರಾದ ಪೆರಮ್ಯಾಟ ಅವರು ತೋರಿಸಿ ಕೊಟ್ಟಿದ್ದರು. ಈ ಸಿದ್ದಾಂತಕ್ಕೆ ಅವರ ಹೆಸರಿನಿಂದಲೇ “ಪೆರಮ್ಯಾಟರವರ ಕಡಿಮೆ ಹೊತ್ತಿನ ಸಿದ್ದಾಂತ” (fermat’s least time priniciple) ಎ೦ದು ಕರೆಯಲಾಗುತ್ತದೆ. ಆದರೆ ಜೀವಿಗಳ ಮೇಲೆ ಇಂತಹ ಪ್ರಯೋಗಗಳನ್ನು ನಡೆಸಿ, ಜೀವಿಗಳಿಗೂ ಇದು ಹೊಂದುತ್ತದೆ ಎಂದು ಕಂಡುಕೊಂಡಿರುವುದು ಇದೇ ಮೊದಲು.

ಇರುವೆಗಳ ಮೇಲೆ ಈ ಪ್ರಯೋಗ ಮಾಡಲು ಅರಿಗರು ಇಸ್ರೇಲ್ ದೇಶದ ಚಿಕ್ಕ ಕೆ೦ಪಿರುವೆಗಳ ಗು೦ಪುಗಳನ್ನು ಆಯ್ಕೆಮಾಡಿಕೊಂಡರು. ಈ ಚಿಕ್ಕ ಕೆ೦ಪಿರುವೆಗಳು (wasmannia auropunctata) ಜಗತ್ತಿನ ಹಲವೆಡೆ ಕಂಡುಬರುವ ಇರುವೆಗಳ 100 ತಳಿಗಳಲ್ಲೊಂದು. ಪ್ರಯೋಗಕ್ಕೆ ಆರಿಸಿದ ಪ್ರತಿ ಗು೦ಪು ಹಲವು ಸಾವಿರ ಕೆಲಸಗಾರ ಇರುವೆಗಳನ್ನು ಮತ್ತು ಹಲವು ರಾಣಿ ಇರುವೆಗಳನ್ನು ಒಳಗೊ೦ಡಿತ್ತು. ಈ ಇರುವೆಗಳ ಗು೦ಪನ್ನು ಕೋಣೆಯ ಒ೦ದು ಮೂಲೆಯಲ್ಲಿಯು ಮತ್ತು ಮೊತ್ತೊ೦ದು ಮೂಲೆಯಲ್ಲಿ ಜೊ೦ಡುಗಗಳನ್ನು ಇರುವೆಗಳಿಗೆ ಆಹಾರವಾಗಿ ಇಡಲಾಯಿತು. ಆಹಾರವನ್ನು ತಲುಪಲು ಇರುವೆಗಳು ಬೇರೆ ಬೇರೆ ಮೇಲ್ಮಯ್ ಇರುವ ಹಾದಿಯಲ್ಲಿ ಹೋಗಬೇಕಿತ್ತು. ಅವುಗಳು ಆರಿಸುವ ಹಾದಿಯ ಬಗೆಯನ್ನು ಒರೆಗೆಹಚ್ಚಲು ಗಡುಸಾದ ಹಾದಿ ಮತ್ತು ಮೆದುವಾದ ಸಮತಲದ ಹಾದಿಗಳನ್ನು ಮಾಡಲಾಯಿತು. ಮೆದುವಾದ ಸಮತಲ ಹಾದಿಗಳು ಗಡಸು ಹಾದಿಗಿಂತ ದೂರವಾಗಿದ್ದವು. ಇರುವೆಗಳ ವೇಗವು ಮೆದುವಾದ ಸಮತಲದ ಹಾದಿಯ ಮೇಲೆ ಗಡಸು ಹಾದಿಗಿ೦ತಾ ಹೆಚ್ಚಾಗಿರುತ್ತದೆ ಹೀಗಾಗಿ ಅವು ಆಹಾರವನ್ನು ತಲುಪಲು ಹತ್ತಿರದ ನೇರವಾದ ಗಡುಸು ಹಾದಿಗೆ ಬದಲಾಗಿ ದೂರದ ಆದರೆ ಬೇಗನೆ ತಲುಪಬಹುದಾದ, ಸಮತಲದ ಮೆದು ಹಾದಿಗಳಲ್ಲೇ ಸಾಗಿದವು. ಹೀಗೆ ಇರುವೆಗಳನ್ನು ಬೇರೆ ಬೇರೆ ಬಗೆಯ ಮೇಲ್ಮಯ್ ಉಳ್ಳ ಹಾದಿಗಳ ಮೇಲೆ ಬಿಟ್ಟಾಗ ಅವು ಹತ್ತಿರದ ಹಾದಿಗೆ ಬದಲಾಗಿ ದೂರದ ಆದರೆ ಬೇಗನೆ ತಲಪಬಹುದಾದ೦ತ ಹಾದಿಯನ್ನು ಆರಿಸಿಕೊ೦ಡವು.

ಇರುವೆಗಳು ಹೊರಡುವಾಗ ಮುಂದಿನ ಇರುವೆಗಳು ಬಿಡುವ ರಾಸಾಯನಿಕಗಳ ಜಾಡು ಹಿಡಿದು ಹೊರಡುತ್ತವೆ ಹೀಗಾಗಿ ಮೊದ ಮೊದಲು ಇರುವೆಗಳು ಹಲವಾರು ಹಾದಿಗಳಲ್ಲಿ ಸಾಗುತ್ತವೆ ಆದರೆ ಮುಂದೆ ಸಾಗಿದಂತೆ ಎಲ್ಲ ಇರುವೆಗಳು ಬೇಗನೆ ತಲಪಬಹುದಾದ೦ತ ಹಾದಿಯ ಮೇಲೆಯೆ ಒಗ್ಗೂಡುತ್ತವೆ. ಇದು ಅವುಗಳ ಚುರುಕುತನ ಮತ್ತು ಅಚ್ಚುಕಟ್ಟಿನ ಬದುಕಿಗೂ ಕನ್ನಡಿಯಾಗಿದೆ. ಹತ್ತಿರವಾಗಿದ್ದರೂ ದಟ್ಟಣೆಯ ದಾರಿಗಳನ್ನು ಬಿಟ್ಟು ನಮ್ಮ ಗಾಡಿಗಳನ್ನು ಬೇಗನೇ ತಲುಪಬಹುದಾದ ಓಣಿ ಕೇರಿಗಳಲ್ಲಿ ನಾವು ನುಗ್ಗಿಸುವುದೂ ಇದಕ್ಕೆ ಇರಬೇಕೇನೋ.

ಸುದ್ದಿಸೆಲೆ:

  • http://phys.org/news/2013-04-ants-fermat-principle.html

ಕಿರಣ ಹಿತ್ತಲಮನಿ

(ಚಿತ್ರ:  http://www.nationalgeographic.com)

2 ಅನಿಸಿಕೆಗಳು

  1. ಈ ಬರಹದಿಂದ ನನ್ನ ಅರಿತ ಹೆಚ್ಚಾಯಿತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಲವರಿಕೆಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.