ಹಕಾರದ ಬಗೆಗಿನ ತಪ್ಪನಿಸಿಕೆಗಳ ಮೇಲೆ ನುಡಿಯರಿಮೆಯ ಬೆಳಕು

ರಗುನಂದನ್.

jabberjawಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯಲ್ಲಿ ಪ-ಕಾರದಿಂದ ಶುರುವಾಗುವ ಪದಗಳು 10-11ನೇ ನೂರೇಡಿನಲ್ಲಿ (ಶತಮಾನದಲ್ಲಿ) ಹ-ಕಾರವಾಗಿ ಮಾರ‍್ಪಾಟಾದವು. ಈ ಮಾರ‍್ಪಾಟಿನ ಪಲವಾಗಿ ಇಂದು ಬೇರೆ ದ್ರಾವಿಡ ನುಡಿಗಳಲ್ಲಿ ಪಕಾರದಿಂದ ಆರಂಬವಾಗುವ ಪದಗಳು ಬರಿ ಕನ್ನಡದಲ್ಲಿ ಮಾತ್ರ ಹಕಾರದಿಂದ ಆರಂಬವಾಗುತ್ತದೆ. ಈ ಮಾರ‍್ಪಾಟಿನ ಸುತ್ತ ಸಾಕಶ್ಟು ಸಾಮಾಜಿಕವಾಗಿ ಬಂದಂತಹ ತಪ್ಪು ಅನಿಸಿಕೆಗಳು ಮನೆಮಾಡಿವೆ. ಈ ತಪ್ಪು ಅನಿಸಿಕೆಗಳಿಗೆ ದಿಟವಾಗಿಯೂ ಯಾವುದೇ ಆದಾರಗಳಿಲ್ಲ. ಇಂದು ನುಡಿಯರಿಮೆಯ ನೆರವಿನಿಂದ ಈ ತಪ್ಪು ಅನಿಸಿಕೆಗಳ ಗೋಜಲನ್ನು ಬಿಡಿಸಬಹುದಾಗಿದೆ. ಈ ತಪ್ಪು ಅನಿಸಿಕೆಗಳಾದರೂ ಯಾವುವು?

ಮೊದಲಿಗೆ ಪ-ಕಾರವು ಬರಿ ಹ-ಕಾರವಾಗಿ ಬದಲಾಗಿದೆ ಎಂಬ ಅನಿಸಿಕೆ. ಇದರ ಪರಿಣಾಮವಾಗಿ ಇಂದು ಹ-ಕಾರವೇ ಸರಿಯಾದ ಉಚ್ಚಾರಣೆ ಮತ್ತು ಅದು ಅ-ಕಾರವಾಗಿ ಉಚ್ಚರಿಸಿದರೆ ತಪ್ಪು ಎಂಬ ಅನಿಸಿಕೆ. ಇವತ್ತು ಹ-ಕಾರವನ್ನು ಅ-ಕಾರವನ್ನಾಗಿ ಉಚ್ಚರಿಸುವವರು ತಪ್ಪು ಕನ್ನಡ ಮಾತಾಡುತ್ತಿದ್ದಾರೆ ಮತ್ತು ಅವರು ಕನ್ನಡದ ಕೊಲೆ ಮಾಡುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತದೆ. ಇದು ನುಡಿಯರಿಮೆಯ ವಿಶಯದಲ್ಲಿ ಮಾತ್ರ ತಪ್ಪು ಅನಿಸಿಕೆಯಲ್ಲದೆ ಮಂದಿಯಾಳ್ವಿಕೆಯನ್ನು ಗವ್ರವಿಸದ ಹಾಗೆ ಕೂಡ ಆಗುತ್ತದೆ.

ಈ ಅನಿಸಿಕೆಗಳು ಹುರುಳಿಲ್ಲದ್ದು. ಯಾಕೆಂದರೆ 11-12ನೇ ಶತಮಾನಗಳ ಕಲ್ಬರಹಗಳನ್ನು ಅವಲೋಕಿಸಿದಾಗ ಹ-ಕಾರವಿಲ್ಲದ ಪದಗಳು ಕಂಡು ಬಂದಿರುತ್ತದೆ. ಎತ್ತುಗೆಗೆ: ಓಗು(ಹೋಗು), ಓದರ್(ಹೋದರು) ಎಂಬ ಪದಗಳ ಬಳಕೆ. ಕಾರದಿಂದ ಕಾರ ಮತ್ತು ಕಾರದಿಂದ ಕಾರ ಯಾವ ಒಳನುಡಿಗಳಲ್ಲಿ ನಡೆದಿದೆ ಯಾವುದರಲ್ಲಿ ನಡೆದಿಲ್ಲ ಎಂಬುದನ್ನು ನಿಕರವಾಗಿ ಹೇಳಲು ಬರುವುದಿಲ್ಲ. ಕಾರದಿಂದ ಕಾರ ಮತ್ತು ಕಾರದಿಂದ ಕಾರವಾಗುವ ಬದಲಾವಣೆಗಳು ಬರಹದ ಮಟ್ಟಿಗೆ ಕನ್ನಡದಲ್ಲಿ ಯಾಕೆ ಮುಕ್ಯವಾಗುತ್ತದೆ ಎಂಬುದನ್ನು ನೋಡೋಣ.

ಕೆಳಗಿನ ಪದಪಟ್ಟಿಯನ್ನು ಗಮನಿಸಿರಿ. ಇದರಲ್ಲಿ ಮೊದಲು ಬರಹ ಕನ್ನಡದ ಪದ ಕೊಡಲಾಗಿದೆ. ಎರಡನೆ ಸಾಲಿನಲ್ಲಿ ಇಂಗ್ಲಿಶಿನಲ್ಲಿ ಅದರ ಹುರುಳು ಕೊಡಲಾಗಿದೆ. ಮೂರನೇ ಸಾಲಿನಲ್ಲಿ ಮಯ್ಸೂರಿನ ಕೆಲವು ಕಡೆಗಳಲ್ಲಿ ಮಾತನಾಡುವ ಕನ್ನಡದ ಒಳನುಡಿಯೊಂದರಲ್ಲಿ ಅದನ್ನು ಉಚ್ಚರಿಸುವ ಬಗೆ ಮತ್ತು ನಾಲ್ಕನೇ ಸಾಲಿನಲ್ಲಿ ಅದರ ಹುರುಳನ್ನು ಕೊಡಲಾಗಿದೆ.

ಬರಹ ಕನ್ನಡ ಹುರುಳು ಮಯ್ಸೂರಿನ ಕೆಲವೆಡೆ ಬಳಸುವ ಕನ್ನಡ ಹುರುಳು
ಹಾಳು spoiled ಆಳು person
ಹುಳಿ sour ಉಳಿ chisel
ಹೇಳು say ಏಳು get up
ಹಾರು fly ಆರು dry up
ಹೇಡಿ timid ಏಡಿ crab
ಹಕ್ಕಿ bird ಅಕ್ಕಿ rice
ಹತ್ತಿ cotton ಅತ್ತಿ fig
ಹಲ್ಲಿ lizard ಅಲ್ಲಿ there

ಈ ಮೇಲಿನ ಎತ್ತುಗೆಗಳನ್ನು ನೋಡಿದಾಗ ಕಾರ ಮತ್ತು ಕಾರ ನಡುವಿನ ಬೇರ‍್ಮೆ ಕನ್ನಡದ ಮಟ್ಟಿಗೆ ಮುಕ್ಯವೆಂದು ತಿಳಿದುಬರುತ್ತದೆ. ಮಯ್ಸೂರಿನ ಒಳನುಡಿಯೊಂದರ ಕನ್ನಡದಲ್ಲಿ ಹಾಳುಆಳು, ಹಾರುಆರು ಜೋಡಿಗಳು ಒಂದೇ ತೆರನಾಗಿ ಉಲಿಯಲ್ಪಡುತ್ತದೆ. ಈ ರೀತಿಯ ಬೇರ‍್ಮೆ ಇದ್ದರೂ ಕೂಡ ಮಾತನಾಡುವಾಗ ಪದಗಳು ಆ ಸನ್ನಿವೇಶಕ್ಕೆ ತಕ್ಕುದಾಗಿರುತ್ತಾದ್ದರಿಂದ ಅರ‍್ತವ್ಯತ್ಯಾಸದ ಗೊಂದಲಗಳು ಆಗುವುದಿಲ್ಲ.

ಕಳೆದ ಅಯ್ವತ್ತು ವರ‍್ಶಗಳಲ್ಲಿ ಓದು ಬರಹ ಕಲಿಯುತ್ತಿರುವ ಮಂದಿ ಹೆಚ್ಚಾಗುತ್ತಿದ್ದಾರೆ. ಸಾಕ್ಶರತೆಯ ಪ್ರಮಾಣ ಹೆಚ್ಚಾಗುತ್ತಿದೆಯಾದ್ದರಿಂದ ಬರಹ ಕನ್ನಡದ ಪದಗಳು ಹೆಚ್ಚಿನ ಮಂದಿಗೆ ತಿಳಿಯಲ್ಪಡುತ್ತಿದೆ. ಇದರ ಅರಿವಿನಿಂದ ಅವರು ತಮ್ಮ ಉಚ್ಚಾರಣೆ ಮತ್ತು ಬರಹಕನ್ನಡವನ್ನು ಹೋಲಿಸುವುದು ಸಹಜವಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಆಡುಕನ್ನಡಕ್ಕೂ ಬರಹಕನ್ನಡಕ್ಕೂ ಬೇರ‍್ಮೆ ಇರುವುದನ್ನು ಗುರುತಿಸಬಹುದು. ತಮ್ಮ ಒಳನುಡಿಯಲ್ಲಿ ಕಾರವನ್ನು ಉಚ್ಚರಿಸುವ ಕೆಲವು ನುಡಿಯಾಡುಗರು/ಬಾಶಿಕರು ಉಲಿ ಮಾರ‍್ಪಿನ ಬಗ್ಗೆ ಎಚ್ಚರ ವಹಿಸಿ ಉದ್ದೇಶಪೂರ‍್ವಕವಾಗಿ ಕಾರವನ್ನು ಉಚ್ಚರಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರಯತ್ನದಲ್ಲೂ ಅವರು ಎಡವುತ್ತಾರೆ.

ಯಾಕೆಂದರೆ ಅವರು ಕಾರವಿಲ್ಲದ ಪದಗಳಿಗೂ ಕಾರವನ್ನು ಸೇರಿಸುವ ವಾಡಿಕೆ ಮಾಡಿಕೊಳ್ಳುತ್ತಾರೆ. ಇದನ್ನು ನುಡಿಯರಿಮೆಯಲ್ಲಿ hypercorrection (ಮೇಲ್ತಿದ್ದಿಕೆ) ಎಂದು ಕರೆಯುತ್ತಾರೆ. ಕೆಳಗಿನ ಪದಪಟ್ಟಿಯಲ್ಲಿ ಇದನ್ನು ಕಾಣಬಹುದಾಗಿದೆ.

ಇಂಗ್ಲಿಶ್ ಬರಹ ಕನ್ನಡ ಮಯ್ಸೂರಿನ ಒಂದು ಒಳನುಡಿ ಕನ್ನಡ(ಬೇಡದ ಕಡೆಗೂ ಸೇರಿಸಿರುವ ಹಕಾರ)
elder sister ಅಕ್ಕ ಹಕ್ಕ
for this ಇದಕ್ಕೆ ಹಿದಕ್ಕೆ
meal ಊಟ ಹೂಟ
to plough ಊಳು ಹೂಳು
there ಅಲ್ಲಿ ಹಲ್ಲಿ

ಈ ಮೇಲಿನ ಎತ್ತುಗೆಗಳಿಂದ ನಾವು ಉಲಿ ಮಾರ‍್ಪುಗಳು ನುಡಿಯ ಸೊಲ್ಲರಿಮೆ ಮೇಲೆ ಎಂತಹ ಪ್ರಬಾವವನ್ನು ಬೀರಬಲ್ಲದು ಎಂಬುದನ್ನು ಕಾಣಬಹುದಾಗಿದೆ.

ಹ-ಕಾರ ಮತ್ತು ಅ-ಕಾರ ಬೇರೆ ಬೇರೆಯಾಗಿ ಉಲಿಯುತ್ತಾರಾದರೂ ಗೊಂದಲ ಯಾಕೆ ಆಗುವುದಿಲ್ಲ? ಕಾರವನ್ನು ಕಾರವಾಗಿ ಉಚ್ಚರಿಸುವುದರಿಂದಾಗಲಿ ಇಲ್ಲವೇ ಕಾರವನ್ನು ಕಾರವಾಗಿ ಉಚ್ಚರಿಸುವುದರಿಂದಾಗಲಿ ಮಾತನಾಡುವಾಗ ಅರ‍್ತವ್ಯತ್ಯಾಸವನ್ನು ತರುವುದಿಲ್ಲ. ಈ ಉಚ್ಚಾರಣೆಗಳು ಸಾಕಶ್ಟು ವರ‍್ಶಗಳಿಂದ ಹೀಗೆಯೇ ಆಗುತ್ತಿದ್ದು ನಮಗೆ ಬರಹ ಬಂದ ಮೇಲೆ ಮತ್ತು ಬೇರೆ ಬೇರೆ ಊರಿನ ಕನ್ನಡಿಗರ ಪರಿಚಯವಾದ ಮೇಲೆ ಈ ವ್ಯತ್ಯಾಸಗಳನ್ನು ಕಂಡುಕೊಂಡಿರುತ್ತೇವೆ. ಇದರ ಜೊತೆ ಮುಂಚೆ ಹೇಳಿದಂತೆ ಪದಗಳ ಬಳಕೆ ಅದನ್ನು ಬಳಸುವ ಸೊಲ್ಲಿನ ಮೇಲೆ ಮತ್ತು ಮಾತನಾಡುವಾಗ ಇರುವ ಸನ್ನಿವೇಶದ ಮೇಲೆ ಅವಲಂಬಿತವಾಗಿರುತ್ತದೆ.

ಕನ್ನಡದಲ್ಲಿಯೇ ಇದಕ್ಕೆ ಉದಾಹರಣೆ ಕೊಡಬಹುದು. ಮುಂಚೆ ಬಳಕೆಯಲ್ಲಿದ್ದ ೞ ಮತ್ತು ಱ ಎಂಬ ಬರಿಗೆಗಳು ಇಂದು ಕನ್ನಡದಲ್ಲಿ ಬಳಕೆಯಿಲ್ಲ. ಆ ಎರಡು ಅಕ್ಕರಗಳನ್ನು ಕಯ್ಬಿಟ್ಟ ಮೇಲೆ ಅದರ ಬದಲಾಗಿ ಳ ಮತ್ತು ರ ಗಳನ್ನು ಬಳಸತೊಡಗಿದ್ದೇವೆ. ಇದರಿಂದ ನಮಗೆ ಯಾವುದೇ ಗೊಂದಲಗಳು ಆಗಿಲ್ಲ.  ಎರಡು ಬೇರೆ ಬೇರೆ ಹುರುಳನ್ನು(ಅರ‍್ತವನ್ನು) ಕೊಡುವ ಒಂದೇ ಸ್ಪೆಲ್ಲಿಂಗ ಇರುವ ಸಾಕಶ್ಟು ಪದಗಳನ್ನು ಕನ್ನಡದಲ್ಲಿ ಕಾಣಬಹುದು:

ಪದ ಹುರುಳು 1 ಹುರುಳು 2
ಹೊಳೆ stream shine
ಕರೆ mark call
ಸರಿ move correct
ತೆರೆ open screen
ಕೆರೆ scratch lake
ಹರಿ flow tear

ತಿರುಳು – ನಾವು ಹೇಳುವಾಗ ಮತ್ತು ಕೇಳುವಾಗ ಪದಗಳ ಅರ‍್ತದ ಬಗ್ಗೆ ಗಮನ ಹರಿಸುತ್ತೇವೆ. ಅದು ಯಾವ ಬಗೆಯಾಗಿ ಉಚ್ಚಾರಣೆ ಆಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

(ಚಿತ್ರ: http://www.everydaylanguagelearner.com)

ನಿಮಗೆ ಹಿಡಿಸಬಹುದಾದ ಬರಹಗಳು

13 Responses

  1. ragunandana avarige congrats! nudiyarimeya neeradinda noodidare eshtoo vishayagaLu tiLiyaaguttave embudakke idu olleya ettuge. intavu heccu heccu barali, jana eccettukoLLli endu haaraisuttaa
    nalmeya
    giridara

  2. Maaysa says:

    ರಗುನಂದನ್ ಅವರೇ ,

    ಇಲ್ಲೊಂದು ಸಮಸ್ಯೆಯು. ಬರವಣಿಗೆಯ ‘ಎಲ್ಲರ ಕನ್ನಡ’ದಲ್ಲಿ ಯಾವುದು ಸರಿಯು?

    ‘ಎಲ್ಲರ ಕನ್ನಡ’ದ ಸೊಲ್ಲರಿಮೆಯು ‘ಅಕ್ಕಿಯು ಹಕ್ಕಿಯನ್ನು ಎಕ್ಕಿ ಎಕ್ಕಿ ಮುಕ್ಕಿತು’ ( ಹಕ್ಕಿಯು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ಮುಕ್ಕಿತು ) ಸರಿಯು ಎಂದು ಎನ್ನುವುದೋ ಇಲ್ಲವೇ ತಪ್ಪು ಎಂದು ಎನ್ನುವುದೋ ?

    ‘ಉಲಿದಂತೆ ಬರೆ’ ತತ್ವವು ಎಲ್ಲಿಯ ಮಟ್ಟಿಗೆ, ಹಾಗು ಎಶ್ಟರ ಮಟ್ಟಿಗೆ ತಕ್ಕುದ್ದು!

    ಉಲಿಕೆಯಲ್ಲಿ ಹೇಗೆ ಉಲಿದರು ಸಹ, ಬರೆವಣಿಗೆಯಲ್ಲಿ ಹ ಕಾರದ ಬಳಕೆಯು ಈಗಿರುವ ಹಾಗೆ ಇರಲಿ ಎಂಬುದು ನನ್ನ ಅಭಿಮತವು. ಹ-ಕಾರದ ತಪ್ಪನ್ನು ಬರವಣಿಗೆಯಲ್ಲಿ ಒಪ್ಪೋದು ಬೇಡ, ಉಲಿಕೆಯಲ್ಲಿ ತೆಗಳೋದು ಬೇಡ .

    • Kiran Batni says:

      ಬರವಣಿಗೆಯಲ್ಲಿ ಹಕಾರದ ವಿಶಯ ಇಲ್ಲಿ ಯಾರೂ ಮಾತನಾಡಿಲ್ಲ; ಅದು ಈಗಿನಂತೆಯೇ ಇರಲಿ ಎಂಬುದೇ ನಮ್ಮ ನಿಲುವು. ಗೊಂದಲವೇಕೆ? ’ಹೊನಲಿ’ನಲ್ಲಿ ನೀವು ಹೇಳುತ್ತಿರುವ ಹ-ಅ ಬದಲಾವಣೆಗಳು ಆಗಿಲ್ಲವಲ್ಲ?

      • Maaysa says:

        ನನ್ನ ಮಿಕ್ಕ ಕಾಮೆಂಟ್-ಗಳಲ್ಲಿ ಈ ವಿಷಯವನ್ನು ಇನ್ನೂ ಬಿಡಿಸಲು ಯತ್ನ-ಮಾಡಿದ್ದೀನಿ .

        ‘ಎಲ್ಲರ ಕನ್ನಡ’ದಲ್ಲಿ ಹ-ಕಾರದ ಬಗ್ಗೆ ‘ಈಗಿನಂತೆಯೇ ಇರಲಿ ‘ ಎಂಬ ನಿಲುವಾಗಿದ್ದಾರೆ ಅದು ‘ಉಲಿದಂತೆ ಬರೆ’ ಎಂಬ ತತ್ವವನ್ನು ಕೊಂಚ ಮುರಿದಂತೆ .

        ಸಾಲಿನ ನಡುವೆ ಬರುವ ಹ-ಕಾರದ ಲೋಪವು ಸರ್ವೇ ಸಾಮಾನ್ಯ. ಅದೇ ಹೆಚ್ಚಿನವರು ಉಲಿಯುವುದು .

        ಉದಾಹರಣೆ: ‘ ಎಲ್ಲಿ ಹೋಗಲಿ ‘ = ಎಲ್ಲೋಗಲಿ

        ‘ಬಿಟ್ಟು ಹಾಕು ‘ = ಬಿಟ್ಟಾಕು

        ಹೀಗೆ. !

        • Kiran Batni says:

          ’ಕೊಂಚ ಮುರಿದಂತೆ’ ಎಂಬುದು ನಿಜ. ಆದರೆ ’ಎಶ್ಟು ಮುರಿದರೂ ಪರವಾಗಿಲ್ಲ’ ಎಂಬ ಈಗಿನ ಏರ‍್ಪಾಡಿಗಿಂತ ಇದು ವಾಸಿ. ’ಬಿಟ್ಟಾಕು’ ಎಂದು ಸೇರಿಕೆ ಮಾಡಿ ಬರೆಯುವುದಕ್ಕೂ ’ಬಿಟ್ಟು ಆಕು’ ಎಂದು ಬರೆಯುವುದಕ್ಕೂ ಅಂತರವಿದೆ. ಇವೆರಡರಲ್ಲಿ ಎರಡನೆಯದು ಈಗಿನ ಬರವಣಿಗೆಯಲ್ಲೂ ಇಲ್ಲ, ಮುಂದೂ ಇರಬೇಕೆಂದು ನಾವು ಹೇಳುತ್ತಿಲ್ಲ; ಮೊದಲನೆಯದು ಈಗಲೂ ಇದೆ, ಇನ್ನು ಮುಂದೆಯೂ ಇರಬೇಕೆಂಬುದು ನಮ್ಮ ನಿಲುವು.

          • Maaysa says:

            ಈಗಿನ ಏರ್ಪಾಡಿನ ಬೆಂಬಲವನ್ನು ನಾನು ಮಾಡುತ್ತಿಲ್ಲ.

            ನಿಮ್ಮ ಅನಿಸಿಕೆ ನನಗೆ ಪೂರ್ತ ಅರ್ತವಾಗಲಿಲ್ಲ.

            ನೀವು ‘ಎಲ್ಲರ ಕನ್ನಡ’ದಲ್ಲಿ ಸಾಲಿನ ನಡುವೆ ಬರುವ ಹ-ಕಾರವನ್ನು ಬಿಡುವುದು ಯೋಗ್ಯವು ಎಂದೇಳುತ್ತಿದ್ದೀರ ( ಎಂದು ಹೇಳುತ್ತಿದ್ದೀರ ) ?

            ಬಿಟ್ಟಾಕು ‘ಇಂದಿನ’ ಕನ್ನಡದ ವ್ಯಾಕರಣದಲ್ಲಿ ತಪ್ಪು.

    • ೧) ಈ ನಿಟ್ಟಿನಲ್ಲಿ ’ಎಲ್ಲರ ಕನ್ನಡದ’ ನಡೆಯನ್ನು ಶಂಕರ ಬಟ್ಟರೂ ಆಗಲೇ ತಿಳಿಸಿದ್ದಾರೆ. ’ಹ’ಕಾರ ಎಲ್ಲ ಒಳನುಡಿಗಳಲ್ಲೂ ಬಿದ್ದು ಹೋಗದೇ ಇರುವುದರಿಂದ ಅದನ್ನು ಬರಹ ಕನ್ನಡದಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ.
      ೨) ಎಲ್ಲರ ಕನ್ನಡದಲ್ಲಿ ಬರಹವು ಆಡನುಡಿಗೆ ’ಹತ್ತಿರ’ವಾಗಿರುವುದೆ ಹೊರತು ಚಾಚು ತಪ್ಪದೇ ಆಡನುಡಿಯಂತೇ ಬರೆಯಲಾಗುವುದಿಲ್ಲ. (ಬಡಗಣದಲ್ಲಿ ಎ, ಇ ಆದರೂ ಎ ತೆರೆಯುಲಿಯೇ ಬಳಸುವುದು ಮತ್ತು ಆಡುನುಡಿಯಲ್ಲಿ ಪದಗಳೂ ಸೇರಿಕೆಯಾದರೂ ಬರಹದಲ್ಲಿ ಬಿಡಿಸಿಯೇ ಬರೆಯುವುದು ಇದಕ್ಕೆ ಎತ್ತುಗೆಯಾಗಿ ಕೊಡಬಹುದು)
      ೩) ಸಂದೀಪ್ ಅವರು ಹೇಳಿದಂತೆ ಈ ಬರಹದಲ್ಲಿ ರಗುನಂದನ್ ಅವರು ’ಹ’ ಕಾರ ತಪ್ಪುವುದು ಕನ್ನಡ ನಾಲಗೆಯ ಕೊರತೆಯಾಗಿರದೇ ಅದಕ್ಕಿರುವ ನುಡಿಯರಿಮೆಯ ಹಿನ್ನೆಲೆಯನ್ನು ಈ ಬರಹದಲ್ಲಿ ತೋರಿಸಿದ್ದಾರೆ.

  3. ರಗುನಂದನ್, ಒಳ್ಳೆಯ ಬರೆಹ. “ನುಡಿಯವ ಕನ್ನಡ” ಮತ್ತು “ಬರೆಹ ಕನ್ನಡ” ಎರಡೂ ಬೇರೆಬೇರೆಯಾಗಿರುವುದರಿಂದಲೇ ನಮ್ಮಲ್ಲಿ ಹೆಚ್ಚು ಎಢವಟ್ಟುಗಳಾಗುತ್ತವೆ. ಇಂಗ್ಲಿಶ್ ನಂತಹ ನುಡಿಯಲ್ಲೂ ಅದೇ ಎಡವಟ್ಟು. ಅದಕ್ಕೇ ನೋಡಿ ಅಮೆರಿಕನ್ನರು ತಮ್ಮದೇ ಆದ ಸ್ಪೆಲ್ಲಿಂಗ್ ಹುಟ್ಟಿಹಾಕಿದರು. ಹಾಗೆ ಹೇಳಬೇಕೆಂದರೆ, ಬ್ರಿಟಿಶರ ಸ್ಪೆಲ್ಲಿಂಗ್ ಗಿಂತ ಅಮೆರಿಕನ್ನರ ಸ್ಪೆಲ್ಲಿಂಗ್ ಸರಳವಾಗಿದೆ. ಇಂಗ್ಲಿಶ್ ಹತ್ತಾರು ನುಡಿಗಳಿಂದ ಪದಗಳನ್ನು ಎರವಲು ಪಡೆದುಕೊಂಡು ಆ ಪದಗಳನ್ನು ತನ್ನತನಕ್ಕೆ ಸರಿಯಾಗಿ ಒಗ್ಗಿಸಿಕೊಳ್ಳದೆ, ಮೂಲದಲ್ಲಿದ್ದ ಪದಗಳನ್ನು ಹಾಗಾಗೇ ಬಳಸಿದ್ದರಿಂದಾಗಿ ಇಂದು ದೊಡ್ಡ ಎಡವಟ್ಟಾಗಿದೆ. ತುಂಬ ಚೆನ್ನಾಗಿ ಇಂಗ್ಲಿಶ್ ಮಾತನಾಡುವವರು ಕೂಡ ಬರೆಯುವಾಗ ತಪ್ಪುತಪ್ಪು ಬರೆಯುತ್ತಾರೆ. ಇಂಗ್ಲಿಶರನ್ನ ನೋಡಿಕೊಂಡು ಕನ್ನಡದ ಮಂದಿಯೂ ಸಕ್ಕದದಿಂದ ಬಂದ ಪದಗಳನ್ನು ಹಾಗೆಯೇ ಉಳಿಸಿಕೊಂಡು ಎಡವಟ್ಟು ಮಾಡಿಕೊಂಡರು. ಎಲ್ಲೋ ಕೆಲವು ತದ್ಬವಗಳನ್ನ ಬಿಟ್ಟರೆ, ಹೆಚ್ಚಿನವು ಮೂಲದಲ್ಲಿದ್ದ ಹಾಗೇ ಇವೆ. ಅದೇ ತಮಿಳಿನಂತಹ ನುಡಿ ಸಕ್ಕದದಿಂದ ಪಡೆದುಕೊಂಡ ಪದಗಳನ್ನು ಉಚ್ಚಾರಣೆಯಲ್ಲಿನ ಬೇರೆತನದಿಂದಾಗಿ ಅದು ತಮಿಳಿನದ್ದೇ ಪದ ಎನ್ನುವಂತೆ ಮಾಡಿಕೊಂಡಿದೆ. ಬಾಂಗ್ಲಾದಲ್ಲೂ ಇದನ್ನು ಗಮನಿಸಬಹುದು. ಅದು ಎಶ್ಟರ ಮಟ್ಟಿಗಿದೆ ಎಂದರೆ, ಸತ್ಯ ಎನ್ನುವುದು ತಮಿಳಿನಲ್ಲಿ “ಸತ್ತಿ”ಯಾದರೆ, ಬಾಂಗ್ಲಾದಲ್ಲಿ “ಶೊತ್ತಿ” ಆಗುತ್ತದೆ. ಸತ್ಯಜಿತ್ ರೇ(ಇಂದು ಅವರ ಹುಟ್ಟಿದ ದಿನವಾದ್ದರಿಂದ ನೆನೆಸಿಕೊಳ್ಳುತ್ತಿದ್ದೇನೆ) ಎಂದು ನಾವೆಲ್ಲ ಅವರನ್ನು ಕರೆದರೂ, ಗುರುತಿಸಿದರೂ ಅವರ ತಾಯಿನುಡಿಯಲ್ಲಿ ಅವರನ್ನು ಶೊತೊಜಿತ್ ರೇ ಎಂದು ಕರೆಯುತ್ತಾರೆ. ಹಾಗಾಗಿ, ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳುವಂತೆ, “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ/ ಹಿಡಿದಿರ್ದ ಲಿಂಗವು ಘಟಸರ್ಪವಯ್ಯ” ಎನ್ನುವಂತೆ, “ನುಡಿಯಲ್ಲಿ ಎಚ್ಚೆತ್ತು, ಬರೆಹದಲ್ಲಿ ತಪ್ಪಿದೊಡೆ ಎಡವಟ್ಟಾಗುವುದಯ್ಯ” ಎಂದು ಹೇಳುವಂತಾಗಿದೆ. ನುಡಿ-ಬರೆಹ ಒಂದೇ ಮಾಡುವ ಪರಿಯ ಬಣ್ಣಿಸುವುದೆಂತಯ್ಯ?

  4. ಮಾಯ್ಸ ರವರ ಅನಿಸಿಕೆ ಸರಿಯಾಗಿದೆ.

  5. Sandeep Kn says:

    ಮಾಯ್ಸ, ನಾನು ಅರ್ತ ಮಾಡಿಕೊಂಡಂತೆ, ರಾಗುನಂದನ ಅವರು, ಕನ್ನಡದ ಕೆಲವು ಒಳನುಡಿಗಳಲ್ಲಿ ಪಕಾರವು ಹಕಾರದ ಬದಲಾಗಿ ಅಕಾರವಾಗಿರುವುದನ್ನು ತೋರಿಸಿ ಕೊಟ್ಟು ಅಂತಹ ನುಡಿ ಆಡುವರಲ್ಲಿ hypercorrection ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಹೇಳಿದ್ದಾರೆ.

    ಆದರೆ ಕೆಲವು ಒಳನುಡಿಗಳಲ್ಲಿ ಉಲಿಯಲ್ಪಡುವ ಈ ಅಕಾರಗಳು ಬೇರೆ ಒಳನುಡಿಗಳಲ್ಲಿ ಹಕಾರವಾಗೇ ಉಲಿಯಲಾಗುತ್ತವೆ. ಈ ಕಾರಣದಿಂದ ಎಲ್ಲರ ಕನ್ನಡದಲ್ಲಿ ಹಕಾರವನ್ನು ಇರಿಸಿಕೊಳ್ಳಲಾಗಿದೆ.

    • Maaysa says:

      “ಯಾಕೆಂದರೆ ಅವರು ಹ-ಕಾರವಿಲ್ಲದ ಪದಗಳಿಗೂ ಹ-ಕಾರವನ್ನು ಸೇರಿಸುವ ವಾಡಿಕೆ ಮಾಡಿಕೊಳ್ಳುತ್ತಾರೆ. ಇದನ್ನು ನುಡಿಯರಿಮೆಯಲ್ಲಿ hypercorrection (ಮೇಲ್ತಿದ್ದಿಕೆ) ಎಂದು ಕರೆಯುತ್ತಾರೆ. ಕೆಳಗಿನ ಪದಪಟ್ಟಿಯಲ್ಲಿ ಇದನ್ನು ಕಾಣಬಹುದಾಗಿದೆ.”

      ಇಂದು ಎಲ್ಲ ಕಡೆಯಲ್ಲಿ ಸರಿಯಲ್ಲ.

      ಹಲವರಿಗೆ ಸ್ವರಗಳಿಂದ ಶುರುವಾಗುವ ಪದಗಳನ್ನು ಉಳಿಯುವಲ್ಲಿ ಸ್ವಾಭಾವಿಕ ಅಡೆಯು ಇರುವುದು. ಸ್ವರದ ಮುಂದೆ ‘ಹಕಾರ’ ಸೇರಿಸುವ ಹೆಚ್ಚಿನವರು ವ್ಯಾಕರಣವನ್ನು ಅರಿಯದವರೇ. ಇಂದು ‘hypercorrection’ ಅಲ್ಲ, ಅದೊಂದು ಬಗೆಯ ಉಲಿಕೆಯಾ ವಿಚಿತ್ರ/rarity.

      ಇಂತಹ ಇನ್ನೊಂದು ವಿಚಿತ್ರ/rarity, ‘ಇಂತಹ’ ಪದವನ್ನ್ನು ‘ಇಂಥ’, ಎತ್ತಿ-ಹಾಕು ಅನ್ನು ‘ಎತ್ಥಾಕು’ ಎಂದು ಉಳಿಯುವುದು

  6. Raghu Nandan says:

    ಮಾಯ್ಸ ಅವರೇ, ನಿಮ್ಮ ಪ್ರಶ್ನೆ ಸರಿಯಾಗಿದೆ. ಓದು ಬರಹ ತಿಳಿದವರು ಬರಹಕನ್ನಡದಲ್ಲಿ ’ಹಕಾರ’ ಇರುವ ಕಡೆ ಹ-ಕಾರವನ್ನೇ ಬಳಸುತ್ತಾರೆ. ಆದರೆ ಅವರು ಉಲಿಯುವಾಗ ಅ-ಕಾರವಾಗಿ ಉಲಿಯುತ್ತಾರೆ. ಅ-ಕಾರದ ಮಟ್ಟಿಗೆ ಕೂಡ ಹಾಗೆಯೇ. ಉಲ್ಟಾ ಆದರೂ ಕೂಡ ಮತ್ತೇ ಅದು ಕೂಡ ಸನ್ನಿವೇಶಕ್ಕೆ ತಕ್ಕುದಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ಎಲ್ಲೋ ಒಂದೆರಡು ಎತ್ತುಗೆಗಳಲ್ಲಿ ಗೊಂದಲಗಳು ಹುಟ್ಟಬಹುದೇನೋ..ಇದಕ್ಕೆ ಅಂಟಿಕೊಂಡಿರುವ social stigma ಹೋಗಲಿ ಎಂಬ ಕಾರಣಕ್ಕೆ ಈ ಬರಹ ಬರೆದದ್ದು. ನಿಮ್ಮ ಚಿಂತನೆಯನ್ನು ಒರೆಗಚ್ಚಬೇಕಿದೆ.

  7. vivekshankar153 says:

    ರಗು ಅವರೇ, ಮೇಲ್ತಿದ್ದಿಕೆ ಬಗ್ಗೆ ಒಂದು ಮಾತು, ನಮ್ಮ ನೆಂಟರು “ಅರಸಿನ” ಒರೆಯನ್ನು “ಹರಸಿನ” ಅಂತ ಇತ್ತೀಚೆಗೆ ಬರೆದಿದ್ದರು. ಆದುದರಿಂದ ಹ-ಕಾರ ಇಂದ ಒರೆಗಳನ್ನು ಬರೆದರೆ ಅದೇ ಸರಿ ಅಂತ ಒಂದು ಗೆಟ್ಟಿಯಾದ ನಂಬಿಕೆ ಹಲವು ಮಂದಿಯಲ್ಲಿ ಇದೆ.

ಅನಿಸಿಕೆ ಬರೆಯಿರಿ: