ಕನ್ನಡಿಗರು ಒಳ-ಪಕ್ಶಗಳನ್ನು ಕಟ್ಟಬೇಕು

Congress-campaign

ಕರ‍್ನಾಟಕದ 14ನೇ ವಿದಾನಸಬೆಯಲ್ಲಿ ಜನರಪರವಾಗಿ ನಿಲ್ಲುವರನ್ನು ಆಯ್ಕೆ ಮಾಡಿದ್ದಾಗಿದೆ, ನಿನ್ನೆಯ ಮತ ಎಣಿಕೆಯ ಬಳಿಕ ಯಾರು ಸರ‍್ಕಾರ ಕಟ್ಟುವರು ಎಂಬುದನ್ನೂ ತೀರ‍್ಮಾನ ಮಾಡಿ ಆಗಿದೆ. ಆದರೆ ಕಳೆದ ಒಂದೆರಡು ಚುನಾವಣೆಗಳಲ್ಲಿ ಪ್ರತಿಯೊಂದು ಕ್ಶೇತ್ರದಲ್ಲೂ ಪಯ್ಪೋಟಿಗೆ ನಿಂತಿರುವ ಪಟುಗಳನ್ನು ಗಮನಿಸಿದರೆ ಆ ಪಟ್ಟಿ ಹೆಚ್ಚೇನು ಬದಲಾಗಿಲ್ಲ. ಆಯಾ ಕ್ಶೇತ್ರದಲ್ಲಿ ಪ್ರತಿ ಬಾರಿ ಹೆಚ್ಚು-ಕಡಿಮೆ ಅವರವರೇ ಪಟುಗಳು, ಗೆದ್ದವರ ಹೆಸರು ಅತವಾ ಪಕ್ಶದ ಹೆಸರುಗಳು ಮಾತ್ರ ಬದಲಾಗಿಕೊಂಡು ಬಂದಿವೆ ಎನ್ನಬಹುದಾಗಿದೆ. ಆದರೆ ಈ ರೀತಿ ಅದಿಕಾರದ ಕಯ್-ಬದಲಾವಣೆಯ ಏರ್‍ಪಾಟಿನಲ್ಲಿ ಆಯಾ ಪಟುಗಳಿಗಿಂತ ಅವರನ್ನು ನಿಲ್ಲಿಸಿದ್ದ ಪಕ್ಶಗಳ ಕಯ್ವಾಡವೇ ಹೆಚ್ಚು ಎನಿಸುತ್ತದೆ. ಏಕೆ, ನೋಡೋಣ.

Facebook ನಂತಹ ಒಂದಿಶ್ಟು ಕೂಡುದಾಣಗಳಲ್ಲಿ ಮಂದಿಯ ಮಾತು ಕೇಳಿದರೆ ಈ ಬಾರಿಯೂ ಮತ ಹಾಕಿದ ಮಂದಿ ಕೆಟ್ಟ ಪಟುಗಳನ್ನು ದೂರವಿಟ್ಟು ಒಳ್ಳೆಯ ಪಟುಗಳ ಆಯ್ಕೆಯೇ ನೆರವೇರಿಸಿದ್ದಾರೆ ಎಂಬ ಅನಿಸಿಕೆ ತಿಳಿಯಲು ಸಿಗುತ್ತದೆ. ಪ್ರತಿ ಚುನಾವಣೆಯಲ್ಲೂ ಬೇರೆ ಪಟುಗಳು ಆಯ್ಕೆಯಾಗುತ್ತಿದ್ದು, ಆಯ್ಕೆಯಾಗುವ ಪಟುಗಳೆಲ್ಲರೂ ಒಳ್ಳೆಯ ಪಟುಗಳೇ ಎಂದು ಸಾಬೀತಾಗಿದ್ದಾಗ, ಸೋಲುಂಡ ಪಟುಗಳ ಸೋಲಿನ ಕಾರಣವಾದರು ಏನು ಎಂಬ ಪ್ರಶ್ನೆ ಕುತೂಹಲ ಉಂಟು ಮಾಡುತ್ತಿದೆ. ಇಂತಹ ಸೋಲಿಗೆ ಪಟುವಿನ ಯೋಗ್ಯತೆ ಅತವಾ ಜನರೊಂದಿಗಿನ ಅವರ ಹೊಂದಾಣಿಕೆಯಂತೂ ಕಾರಣವಲ್ಲವೇ ಅಲ್ಲ. ಏಕೆಂದರೆ ಅದೇ ಜನರ ನಡುವೆ ಹಿಂದೊಮ್ಮೆ ಈ ಪಟುಗಳೇ ಗೆದ್ದಿದ್ದೂ ಉಂಟು.

ಅದಿಕಾರ ಕಯ್-ಬದಲಾಗುವ ರಿವಾಜನ್ನು ನಮ್ಮ ನಾಡಿನಲ್ಲಿ ಗಮನಿಸಿದಾಗ ಅಂತಹ ಪಟುಗಳು ಹೆಚ್ಚು ಪಾಲು ರಾಶ್ಟ್ರೀಯ ಪಕ್ಶಗಳಿಗೆ ಸೇರಿದವರು ಎಂಬುದು, ಹಾಗೂ ತಮ್ಮ ಅದಿಕಾರದ ವೇಳೆಯಲ್ಲಿ ತಮ್ಮ ತಮ್ಮ ಹಯ್-ಕಮಾಂಡಿನ ಜನರನ್ನು ಓಲಯ್ಸಲು ಹಾಗೂ ಅವರ ಮೆಚ್ಚುಗೆ ಪಡೆಯಲೇ ಹೆಚ್ಚು ದುಡಿತ ಮಾಡಿರುವುದೇ ಕಾಣ ಸಿಗುವುದು. ಯಾರ ಪರ ನಿಲ್ಲಬೇಕಾಗಿತ್ತೋ ಅವರ ಸೇವೆ ಮಾಡುವ ಆಸೆಯಿದ್ದರೂ ಹಯ್-ಕಮಾಂಡಿನ ಸೇವೆಯಲ್ಲೇ ಅಯ್ದು ವರ್‍ಶ ಹಾಗೇ ಕಳೆದುಹೋಗಿರುವ ಉದಾಹರಣೆಗಳೇ ಎಲ್ಲವೂ!

ದೂರದಲ್ಲಿ (ಹೊರಗೆ) ಕುಳಿತಿರುವ ಯಾರದ್ದೋ (ಹಯ್-ಕಮಾಂಡಿನ) ತೀರ‍್ಮಾನಗಳಿಂದ ಇಲ್ಲಿಯ ಹಿರಿಯರ ನಡುವೆ ತಿಕ್ಕಾಟ ಹುಟ್ಟಿಸುವ ಸನ್ನಿವೇಶಗಳೇ ಹೆಚ್ಚಾಗಿ ಹೋಗಿ, ಪಕ್ಶದ ಸಂಗಟನೆಯ ಕೆಲಸವೂ ಹಿಂದೇಟು ತಿಂದಿದ್ದು, ಪಕ್ಶದ ಮುಂದಿನ ಯುವ ಪಂಕ್ತಿಯಲ್ಲೂ ಏನೂ ಸತ್ವವಿಲ್ಲದಂತಾಗಿದೆ. ಎಲ್ಲವೂ ಹಯ್-ಕಮಾಂಡಿನೋರೇ ತೀರ‍್ಮಾನಿಸಬೇಕು, ಇಲ್ಲವೇ ಅದು ರಾಜ್ಯದೊಳಗಿನ ಯಾರಿಗೂ ಒಪ್ಪಿಗೆಯಿಲ್ಲವೆಂಬ ಸನ್ನಿವೇಶ ಏರ‍್ಪಟ್ಟಿದೆ. ಒಟ್ಟಿನಲ್ಲಿ ಒಳಿತು ಮಾಡಲು ಹೊರಟಿರುವ ಒಂದಿಶ್ಟು ಜನರು ಒಂದೇ ಪಕ್ಶದವರೇ ಆದರು ಅವರ ನಡುವೆ ಒಗ್ಗಟ್ಟು ಇಲ್ಲವೇ ಇಲ್ಲ. ಇದರಿಂದ ಮಂದಿಯ ಒಳಿತಿಗಾಗಿ ಮಾಡಿಕೊಂಡಿರುವ ಮಂದಿಯಾಳ್ವಿಕೆಯ ಪರನಿಲ್ಲುಗ ಏರ್‍ಪಾಟು ರಾಶ್ಟ್ರೀಯ ಪಕ್ಶಗಳಿಂದ ಹಾಳಾಗಿಹೋಗಿದೆ ಎನ್ನಬಹುದು.

ಜನಪರನಿಲ್ಲುವಿಕೆಯನ್ನು ಜನರಿಂದ ದೂರ ಕಿತ್ತು ರಾಶ್ಟ್ರೀಯ ಹಯ್-ಕಮಾಂಡುಗಳಿಗೆ ಸೇರಿರುವ ಇಂದಿನ ಏರ್‍ಪಾಟಿನಲಿ ತಪ್ಪಿದೆ. ಜನಪರನಿಲ್ಲುಗರು ಒಳಿತನ್ನೇ ಮಾಡಬಯಸುವುದಾದರೆ ಅವರುಗಳೆಲ್ಲಾ ಸೇರಿ ಜನರಿಗೆ ಹತ್ತಿರವಾದ, ನಾಡಪರವಾದ, ನಾಡಿನ ಒಳ-ಪಕ್ಶಗಳನ್ನೇ ಕಟ್ಟಬೇಕು, ಅವುಗಳ ಮೂಲಕವೇ ಅದಿಕಾರ ವಹಿಸಿಕೊಳ್ಳಬೇಕು, ಆಳ್ಮೆ ನಡೆಸಬೇಕು. ಇಂದು ಇದಾಗದ ಕಾರಣ ಆಳ್ಮೆ ನಡೆಸಿಕೊಳ್ಳುವುದು ನಮ್ಮ ನಡುವೆ ನಡೆಯುತ್ತಿದೆ. ಇದು ಮುಂಬರುವ ಚುನಾವಣೆಯೊಳಗಾದರೂ ಬದಲಾಗಲಿ ಎಂದು ಆಶಿಸೋಣ.

ನಮ್ಮವರಲ್ಲೇ ಅವರು ಕೆಟ್ಟ ಪಟು, ಇವರು ಒಳ್ಳೆಯ ಪಟು ಎಂದು ಬೇರೆ ಮಾಡದೇ, ಅವರ ಅಯ್ಡಿಯಾಲಜಿ ಸರಿಯಿಲ್ಲ, ಇವರ ಅಯ್ಡಿಯಾಲಜಿ ಸರಿಯಿರಬಹುದು ಎಂದು ವಿಚಾರ ಮಾಡಿಕೊಂಡು ಕೂತು ರಾಶ್ಟ್ರೀಯ ಮಟ್ಟದ ಬೆರಕೆ ಸರ‍್ಕಾರದಿಂದಲೇ ತ್ರುಪ್ತಿ ಹೊಂದದೆ, ನಮ್ಮವರೆಲ್ಲಾ ಸೇರಿ ಒಳಪಕ್ಶ ಕಟ್ಟುವ ಕೆಲಸ ಮಾಡಲು ಮುಂದಾಗುವಂತೆ ಮತ ಹಾಕುವ ನಾವು-ನೀವೇ ಸೇರಿ ಮಾಡಬೇಕಾಗಿದೆ, ಮಾಡೋಣ.

ರೋಹಿತ್ ರಾವ್

ಚಿತ್ರ: www.deccanchronicle.com

ನಿಮಗೆ ಹಿಡಿಸಬಹುದಾದ ಬರಹಗಳು

2 Responses

 1. ಒಳ ಪಕ್ಷ ಬೇಕು . ಆದರೆ ಅದು ನಮ್ಮ ರಾಜ್ಯಕ್ಕೆ ಒಳಿತನ್ನ ಮಾಡೇ ಮಾಡತ್ತೆ ಅನ್ನೋದು ಏನು ಗ್ಯಾರೆಂಟೀ ? ಈಗ ನನ್ನ ಪ್ರಕಾರ ನಮಗೆ ಬೇಕಿರೋದು ಬರಿ
  ಒಳ ಪಕ್ಷಗಳಲ್ಲ ಒಳ್ಳೇ ನಾಯಕರು , ಜನಪರ ನಾಯಕರು ಬೇಕು.ಇಲ್ಲ ಅಂದ್ರೆ ಎನ್ ಬಾಗ್ಯ ಬಂತು ನಾವು ಒಳ ಪಕ್ಷಗಳನ್ನ ಆಯ್ಕೆ ಮಾಡಿ ?

  ಒಳ್ಳೇ ನಾಯಕರು (ಜನಪರ,ಜಾಣರ ಹಿತ ಕಾಪಾಡೊ ನಾಯಕರು) ಇಲ್ಲದ ಒಳ ಪಕ್ಷನ ಸುಮ್ನೇ ಒಳ ಪಕ್ಷ ಅಂತ ಅದಕ್ಕೆ ಬೆಂಬಲ ಕೊಡೋದು ಹಾವಿಗೆ ಹಾಲನ್ನ ಕೂಡಿಸಿದ ಹಾಗೆ.

  ಧನ್ಯವಾದಗಳು .

  • ayyo , idu heLbekanthidde

   ಒಳ ಪಕ್ಷ ಬೇಕು . ಆದರೆ ಅದು ನಮ್ಮ ರಾಜ್ಯಕ್ಕೆ ಒಳಿತನ್ನ ಮಾಡೇ ಮಾಡತ್ತೆ ಅನ್ನೋದು ಏನು ಗ್ಯಾರೆಂಟೀ ? ಈಗ ನನ್ನ ಪ್ರಕಾರ ನಮಗೆ ಬೇಕಿರೋದು ಬರಿ
   ಒಳ ಪಕ್ಷಗಳಲ್ಲ ಒಳ್ಳೇ ನಾಯಕರು , ಜನಪರ ನಾಯಕರು ಇರುವ ಒಳ ಪಕ್ಷ.ಇಲ್ಲ ಅಂದ್ರೆ ಎನ್ ಬಾಗ್ಯ ಬಂತು ನಾವು ಒಳ ಪಕ್ಷಗಳನ್ನ ಆಯ್ಕೆ ಮಾಡಿ ?

   ಒಳ್ಳೇ ನಾಯಕರು (ಜನಪರ,ಜಾಣರ ಹಿತ ಕಾಪಾಡೊ ನಾಯಕರು) ಇಲ್ಲದ ಒಳ ಪಕ್ಷನ ಸುಮ್ನೇ ಒಳ ಪಕ್ಷ ಅಂತ ಅದಕ್ಕೆ ಬೆಂಬಲ ಕೊಡೋದು ಹಾವಿಗೆ ಹಾಲನ್ನ ಕೂಡಿಸಿದ ಹಾಗೆ.

   ಧನ್ಯವಾದಗಳು .

ಅನಿಸಿಕೆ ಬರೆಯಿರಿ:

%d bloggers like this: