ಚೆಲುವು ನೆರೆಯಲಿ – ಒಲವು ಮೆರೆಯಲಿ

– ಬರತ್ ಕುಮಾರ್.western ghats paddy field

ಕೆರೆಯ ತೆರೆಯಲಿ
ಹೆರೆಯು ತೇಲಲಿ
ಕೊರೆವ ಎಲರಲಿ
ಉಸಿರು ಬಸಿಯಲಿ
ಚೆಲುವು ನೆರೆಯಲಿ
ಒಲವು ಮೆರೆಯಲಿ

ಕಣಿವೆ ಹೂವಲಿ
ತನಿವ ಹಣ್ಣಲಿ
ಮಂಜ ಹನಿಯಲಿ
ಕಂಪ ಮಣ್ಣಲಿ
ಚೆಲುವು ನೆರೆಯಲಿ
ಒಲವು ಮೆರೆಯಲಿ

ಗದ್ದೆ ಪಯಿರಲಿ
ಒದ್ದೆ ಮಳೆಯಲಿ
ಮೆದ್ದ ಜೇನಲಿ
ಹದದ ತೆನೆಯಲಿ
ಚೆಲುವು ನೆರೆಯಲಿ
ಒಲವು ಮೆರೆಯಲಿ

ಹಗೆಯ ಕೊಲ್ಲಲಿ
ಬಗೆಯ ಗೆಲ್ಲಲಿ
ನಗೆಯ ಚೆಲ್ಲಲಿ
ಮಿಗೆಯ ನಲಿವಲಿ
ಚೆಲುವು ನೆರೆಯಲಿ
ಒಲವು ಮೆರೆಯಲಿ

(ಚಿತ್ರ: http://www.facebook.com/WaterFalls.Of.WesternGhats)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: