ಮಾಡಿ ನೋಡಿ, ಕಾಳು ಮೆಣಸಿನ ಸಾರು

kaalu menasina saaru

ಮೊನ್ನೆ ಹೀಗೆಯೇ ಒಂದು ಸಂದರ್‍ಬ. ಎಶ್ಟೋ ವರ್‍ಶಗಳಾದಮೇಲೆ ನಾನೇ ಅಡುಗೆ ಮಾಡಲೇ ಬೇಕಾದ ಪ್ರಸಂಗ ಬಂದಿತ್ತು. ಹಿಂದಿನ ದಿನ ಕೇವಲ ಅನ್ನ ಮಾಡಿ ಅನ್ನ ಮೊಸರು ತಿಂದು ತೇಗಿದ್ದೆವೆರಾದ್ದರಿಂದ ಈದಿನ “ಬೇರೆ ಏನಾದರು ಮಾಡಿ ತಿನ್ನಲೇ ಬೇಕು” ಎಂದು ನಾಲಗೆ ಚಡಪಡಿಸುತ್ತಿತ್ತು. ಸರಿ ಬೇರೆ ಏನಾದರು ಮಾಡಬೇಕು ಅಂತನ್ನಿಸಿದಾಗ, ತಮ್ಮನಿಗಾಗಿ (ಅವನಿಗೆ ಸ್ವಲ್ಪ ಹುಶಾರಿರಲಿಲ್ಲವಾದ್ದರಿಂದ) ಮೆಣಸಿನ ಸಾರು ಮಾಡೋಣ ಅಂತನಿಸಿತು.

ನಾನು ಹೇಗೆ ಅಡುಗೆ ತಯಾರಿಸಿದೆ ಎಂಬುದನ್ನು ಸವಿಯಲು ನೋಡಿ.

  1. ಮಾಮೂಲಿಯ ಹಾಗೆ ಒಂದೂವರೆ ಪಾವು ಅಕ್ಕಿಯನ್ನು ಮೂರು ಬಾರಿತೊಳೆದೆ.
  2. ಈಗ ಈ ಅನ್ನದ ಬಟ್ಟಲಿಗೆ ಬೆರಳುಗಳ ಗೆಣ್ಣು ತುಂಬುವ ಹಾಗೆ ನೀರನ್ನು ಹಾಕಿದೆ. ಕುಕ್ಕರಿನಲ್ಲಿ ಮೊದಲು ಪ್ಲೇಟ್ ಇಟ್ಟು, ಪ್ಲೇಟ್ ಮುಳುಗುವಶ್ಟು ನೀರು ಹಾಕಿ, ಗ್ಯಾಸ್ಕೆಟ್ ಇದೆಯೇ ಎಂದು ಕಾತ್ರಿಪಡಿಸಿಕೊಂಡೆ. ನಂತರ ವೇಯ್ಟನ್ನು ಇಟ್ಟು, ಅನ್ನವನ್ನು ಬೇಯಲು ಇಟ್ಟೆ.
  3. ಈಗಲೇ ಕಶ್ಟದ ಕೆಲಸ, ಬೇಳೆ ಬೇಯಿಸಬೇಕಾಗಿತ್ತು. ಮುಕ್ಕಾಲು ಲೋಟದಶ್ಟು ತೊಗರಿಬೇಳೆ ತುಂಬಿಕೊಂಡೆ. ಚೆನ್ನಾಗಿ ತೊಳೆದು 6 ಲೋಟದಶ್ಟು ನೀರನ್ನು ಬೇಳೆ ಬೇಯಿಸುವ ಬಟ್ಟಲಿಗೆ ಹಾಕಿದೆ. ಒಂದು ಚಮಚ ಎಣ್ಣೆ ಮತ್ತು ಒಂದೇ ಒಂದು ಚೂರು ಅರಿಶಿನ ಹಾಕಿ, ಅದನ್ನು ಬೇರೆಯದೊಂದು ಕುಕ್ಕರಿನಲ್ಲಿ ಬೇಯಲು ಇಟ್ಟೆ.
  4. ಅನ್ನ ಮೂರು ಬಾರಿ ಕೂಗಿದ ಮೇಲೆ ಮತ್ತು ಬೇಳೆ 6 ಬಾರಿ ಕೂಗಿದ ಮೇಲೆ ಕೆಳಗೆ ಇಡಬೇಕಿತ್ತು.
  5. ಬೇಳೆ ಬೇಯುವ ಮುಂಚೆ, ಇನ್ನಿತರ ಸಲಕರಣೆಗಳನ್ನು ಸಿದ್ದಪಡಿಸಬೇಕಿತ್ತು. ಒಂದು ಬಾಣಲೆಗೆ ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆ ಮತ್ತು ಕಾಳುಮೆಣಸನ್ನು ಹಾಕಿ ಹುರಿದೆ. ಇದಾದಮೇಲೆ, ಕೆಳಗಿಳಿಸಿ, ಒಂದು ಹಿಡಿ ಕೊಬ್ಬರಿ ಹಾಕಿದೆ. ಅದು ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿಟ್ಟುಕೊಂಡೆ.
  6. ಅನ್ನ ತಯಾರಾಯ್ತು, ಬೇಳೆ ಬೆಂದಿತ್ತು. ಈಗ ಬೇಳೆ ಬಟ್ಟಲನ್ನು ಹೊರತೆಗೆದು, ಚೆನ್ನಾಗಿ ಕುಡಗೋಲಿನಿಂದ ಕಡೆದೆ. ಸ್ವಲ್ಪ ಕಲ್ಲುಪ್ಪು ಮತ್ತು ಮಿಕ್ಸಿಯಲ್ಲಿದ್ದ ಮಿಶ್ರಣವನ್ನು ಸೇರಿಸಿ ಕುದಿಯಲು ಇಟ್ಟೆ. ಇದು ಕುದಿಯುತ್ತಿರಲು ಒಗ್ಗರಣೆ ತಯಾರಿಟ್ಟುಕೊಂಡಿರಬೇಕಿತ್ತು.
  7. ಮತ್ತೊಂದು ಸಣ್ಣ ಒಗ್ಗರಣೆ ಸವ್ಟಿಗೆ, ಸ್ವಲ್ಪವೇ ಸ್ವಲ್ಪ ಎಣ್ಣೆ ಹಾಕಿದೆ. ಕಾದ ನಂತರ ಸ್ವಲ್ಪ ಸಾಸಿವೆ, ಜೀರಿಗೆ, (ಕಡ್ಲೆಬೇಳೆ ಉದ್ದಿನಬೇಳೆ) ಹಾಕಿದೆ. ಹಾಗೆಯೇ, ಮೂರು ಒಣಮೆಣಸಿನಕಾಯಿಯನ್ನು ಸಣ್ಣದಾಗಿ ತುಂಡರಿಸಿ ಅದನ್ನು ಒಗ್ಗರಣೆ ಸವ್ಟಿಗೆ ಹಾಕಿದೆ. ಇದು ಗಂ ಅಂತ ಪರಿಮಳ ಬೀರುತ್ತಿದ್ದಾಗ, ಒಗ್ಗರಣೆ ಆರಿಸಿದೆ. ಇದನ್ನು ಕುದಿಯುತ್ತಿದ್ದ ಬೇಳೆಬಟ್ಟಲಿಗೆ ಹಾಕಿದೆ.

ಎಲ್ಲರನ್ನೂ ಊಟಕ್ಕೆ ಕರೆದೆ, ಊಟ ಬಡಿಸಿ, ನಂತರ ನಾನೂ ಊಟ ಮಾಡಿ, ಇನ್ನಿತರ ಕೆಲಸ ಮಾಡಲು ಅನುವಾದೆ.

ಸುನಿಲ್ ಜಯಪ್ರಕಾಶ್

(ಚಿತ್ರ: www.tastyappetite.net)

ನಿಮಗೆ ಹಿಡಿಸಬಹುದಾದ ಬರಹಗಳು

27 Responses

  1. ನಿಮ್ಮ ಬರಹ ತುಂಬಾ ಚೆನ್ನಾಗಿದೆ.

  2. ಒಂದು ಗಜ್ಜುಗದಷ್ಟು ಹುಣಿಸೆಹಣ್ಣನ್ನು ನೆನಸಿ ರಸ ತೆಗೆದು ಸಾರು ಕುದಿಯುವ ಮುಂಚೆ ಸೇರಿಸಿದರೆ ಒಳ್ಳೆಯದು ಇಲ್ಲದಿದ್ದರೆ ೧/೨ ನಿಮ್ಬೇಹಣ್ಣಿನ ರಸ ಸೇರಿಸಿ ಸವಿದರೆ ಮತ್ತೂ ಒಳ್ಳೆಯದು. :p

  3. ಇವತ್ತು ನಮ್ಮ ಮನೇಲಿ ಸಾರು ಇದೇನೆ….

  4. >>ಅಡುಗೆ ತಯಾರಿಸಿದೆ.
    ಅಡುಗೆ ತಯಾರಿಸುವಂಥದ್ದಲ್ಲ. ಅಡುಗೆ ಎನ್ನುವಂಥದ್ದು ಒಂದು ನಾಮಪದವಲ್ಲ.

    • Maaysa says:

      ಅಡುಗೆ ಹೆಸರುಪದವೇ …

      ಅಡು ಕ್ರಿಯಾಪದ
      (ದೇ) ೧ ಆಡಿಗೆ ಮಾಡು ೨ ಸುಡು, ಬೇಯು

      ಆದರೆ ಆಡುಗನ್ನಡದಲ್ಲಿ ನಾವು ‘ಅಡುಗೆ-ಮಾಡು’ ಎಂದು ಬಳಸುತ್ತೀವಿ . ತಯಾರು ಕನ್ನಡವಲ್ಲ ಉರ್ದು.

      “ಅಡುಗೆ ತಯಾರಿಸಿದೆ” ತಪ್ಪು “ಅಡುಗೆಯನ್ನು ತಯಾರಿಸಿದೆ” ಸರಿ.

  5. ಅಡುಗೆ ಎನ್ನುವುದು ಯಾವುದೋ ಒಂದು ವಸ್ತುವಿನ ಹೆಸರು ಎನ್ನಲಾಗದು.

    • Maaysa says:

      ಅಡುಗೆ ಒಂದು ವಸ್ತುವೇನೇ.

      ಮನೆಯಲ್ಲಿ ಏನು ಅಡುಗೆ? ಅನ್ನಸಾರು .

      ಅಡುಗೆಯು ಚೆನ್ನಾಗಿದೆ. ಅಡುಗೆಯನ್ನು ಮಾಡಿ. ಅಡುಗೆಯಿಂದ .. ಅಡುಗೆಗೆ ಉಪ್ಪುಹಾಕಿ.

      ಹೆಸರುಪದಗಳಿಗೆ ಅಲ್ಲದೆ ಬೇರೆಯವಕ್ಕೆ ವಿಭಕ್ತಿಗಳು ಹತ್ತವು ಸಾಮಾನ್ಯ!

  6. ನಾನು ಹೇಳಿದ್ದು: ಅಡುಗೆ ಎನ್ನುವಂಥದ್ದು ಒಂದು ವಸ್ತುವಲ್ಲ, ಹಾಗಾಗಿ ಅದನ್ನು ತಯಾರಿಸಲಾಗದು. ಇನ್ನು ಬೇಕರಣದ ದೃಷ್ಟಿಯಿಂದ ನೋಡಿದರೆ ವಿಭಕ್ತಿ ಪ್ರತ್ಯಯಗಳು ಅಥವಾ ಹಿನ್ನೊಟ್ಟುಗಳು ಕ್ರಿಯಾಪದದ ನಾಮರೂಪಗಳಿಗೂ ಸೇರುತ್ತವೆ.

    ಅಡುಗೆಯು ಚೆನ್ನಾಗಿದೆ ಎನ್ನುವುದು “ಎಲ್ಲರ ಕನ್ನಡ” ಎಂಬ ಬೇಕರಣದ ದೃಷ್ಟಿಯಿಂದ ನೋಡಿದರೂ ತಪ್ಪು. [‘ಉ’ ಪ್ರತ್ಯೇಕ ವಿಭಕ್ತಿ ಪ್ರತ್ಯಯವಲ್ಲ ಎಂದೇ “ಎಲ್ಲರ ಕನ್ನಡ” ಬೇಕರಣದ ನಿಯಮ.]
    “ಅಡುಗೆಯನ್ನು ಮಾಡಿ” ತಿಳಿಯದು, “ಅಡುಗೆ ಮಾಡಿ” ತಿಳಿದಿದೆ.
    “ಅಡುಗೆಗೆ ಉಪ್ಪುಹಾಕಿ” ತಿಳಿಯದು, “ಅಡುಗೆ ಮಾಡುವಾಗ ಉಪ್ಪು ಹಾಕಿ” ತಿಳಿದಿದೆ. [“ಉಪ್ಪು ಹಾಕಿ” ಎಂಬುದು ಒಂದೇ ಪದಪುಂಜವಲ್ಲ. ಇಲ್ಲಿ ಚೇತನ ಮತ್ತು ಅಚೇತನ ವಸ್ತುಗಳ ಭೇದ ಕಾಣಿಸುವಂಥದ್ದು. ಇತರ ದ್ರಾವಿಡ ಭಾಷೆಗಳಲ್ಲಿ ಬರೆದಿಟ್ಟಿರುವ ಬೇಕರಣದ ನಿಯಮದಂತೆ ನಮಗೆ ಕನ್ನಡದಲ್ಲಿ ಅಚೇತನ ವಸ್ತುಗಳಿಗೆ “ಅನ್ನು” ಎಂಬ ಪ್ರತ್ಯಯವನ್ನು ಸೇರಿಸಬಾರದು ಎಂಬ ನಿಯಮ ಇಲ್ಲದಿದ್ದರೂ ಭಾಷೆಯ ಮೂಲಗುಣ ವ್ಯಕ್ತಗೊಳ್ಳುವ ಕೆಲ ಸಂದರ್ಭಗಳಲ್ಲಿ ಇದೂ ಒಂದು.]

    • Maaysa says:

      ಅದೇನು ಬರೆದಿದೆಯೋ !

      • “ಅದೇನು ಬರೆದಿದೆಯೋ !?”

        • Maaysa says:

          ಅದು ಏನು ಬೇರೆದಿದೆ?!

          ಬೇಕರಣ ಅಂದ್ರೇನು?

          • ವ್ಯಾಕರಣ. ಇನ್ನೇನಾದರೂ?

          • ಅಷ್ಟೂ ತಿಳಿಯದೆ ಚರ್ಚೆಗೆ ಇಳಿದಿರುವುದು ಅಚ್ಚರಿ ಮೂಡಿಸುತ್ತದೆ.

          • ಬೇರೆ ಕೆಲವೆಡೆ ಈ ಬೇಕರಣ ಎಂಬ ಪದದ ಬಳಕೆ ಆಗಿದೆ. ಅದನ್ನು ಬಳಸಿದವರಲ್ಲಿ ನಾನು ಮೊದಲಿಗನಲ್ಲ. ಹಿಂದೆ ಒಂದು ತಾಣದಲ್ಲಿ “ಬೇಕರಣದ ಕಟ್ಟಳೆಗಳು” ಎಂದು ತಾವೇ ಹಲವಾರು ಸಲ ಬರೆದಿರುವುದನ್ನು ನೆನಪಿಸಿಕೊಳ್ಳಬಹುದು.

          • ತಮ್ಮ ಕೆಟ್ಟ ನಡತೆಯಿಂದಾಗಿ ತಮ್ಮನ್ನು ಅಲ್ಲಿಂದ ಬಹಿಷ್ಕರಿದ್ದರೆಂದೂ ಕೆಲವರು ನೆನಪಿಸಿಕೊಳ್ಳುತ್ತಾರೆ.

          • Maaysa says:

            ^^ 😀

  7. ybharath77 says:

    ಮಾಯ್ಸ,
    ೧. ಅಡುಗೆಯನ್ನು ತಯಾರಿಸಿದೆ/ಮಾಡಿದೆ
    ೨. ಅಡುಗೆ ತಯಾರಿಸಿದೆ/ಮಾಡಿದೆ

    ಇವೆರಡೂ ಸರಿ, ಪತ್ತುಗೆಗಳ (ವಿಬಕ್ತಿ) ಬಳಕೆಗಳಲ್ಲಿ ಒಳನುಡಿಗಳ ಪರಿಚೆ/ಒಲವು ಇದೆ.

    ಎತ್ತುಗೆಗೆ: ಗಿರೀಶ್ ಕಾರ್ನಾಡ್ ಅವರು ’ವಿಮಾನಿನಿಂದ’ ಎಂದು ತಮ್ಮ ಹೊತ್ತಗೆಯಲ್ಲಿ ಬರೆದಿದ್ದಾರೆ. ಆದರೆ ಸುದ್ದಿಹಾಳೆಗಳು ಹೆಚ್ಚಾಗಿ ’ವಿಮಾನದಿಂದ’ ಎಂದೇ ಬಳಸುತ್ತವೆ.

    ಅದೇ ರೀತಿ ’ಇಂಗ್ಲಿಶಿನ’ ಎನ್ನುವ ಬದಲು ಕಾರ್ನಾಡ ’ಇಂಗ್ಲಿಶದ’ ಎಂದು ಬರೆಯುತ್ತಾರೆ. ಹಾಗಾಗಿ ’ಇಂಗ್ಲಿಶದ’ ತಪ್ಪು ’ಇಂಗ್ಲಿಶಿನ’ವೇ ಸರಿ ಎಂದು ಹೇಳಲು ಬರುವುದಿಲ್ಲ.

    • Maaysa says:

      “ಅಡುಗೆ ತಯಾರಿಸಿದೆ/ಮಾಡಿದೆ” ತಪ್ಪು ಆದರೆ “ಅಡುಗೆತಯಾರಿಸಿದೆ/ಮಾಡಿದೆ” space ಇಲ್ಲದೆ ಸರಿ .

      “X ಮಾಡಿದೆ” ಎಂದರೆ ಅಲ್ಲಿ X Subject . ಅದೇ “Xಅನ್ನು ಮಾಡಿದೆ” ಅಂದರೆ ಅಲ್ಲಿ X object. ಕನ್ನಡದಲ್ಲಿ word -order ಸರಿಯಾಗಿ ಇರದ ಕಾರಣದಿಂದ ಇದು ಅನಿವಾರ್ಯ.

      ಆದರೆ “X ಮಾಡಿದೆ” ಎಂದು ಸೇರಿಸಿ ಬರೆದು ಸಮಾಸವನ್ನು ಮಾಡಬಹುದು.

      ಹಾಗೆ
      ಗಿರೀಶ ಕಾರ್ನಾಡ ಬರೆದರೂ ವಿಮಾನಿನಿಂದ ಹಾಗು ಇಂಗ್ಲಿಶದ ತಪ್ಪೇ .. !

      ಅಕಾರಂತ ಅಮಾನುಷ-ಲಿಂಗದ ಅರನೇ ವಿಭಕ್ತಿ ಯಾವಾಗಲು ‘ದ’. ಇದು ಎಲ್ಲಾ ಕನ್ನಡದಲ್ಲೂ . ಮರಾಟಿಯ ಪ್ರಭಾವವಿರುವ ಮಂದಿ ಹೀಗೆ ತಪ್ಪುಗಳನ್ನು ಮಾಡುತ್ತಾರೆ, ಆದರೆ ನಮಗೇನು ಬಂದಿದೆ ದರಿದ್ರ?

  8. ybharath77 says:

    “ಅಡುಗೆತಯಾರಿಸಿದೆ”— ಓದುವುದಕ್ಕೆ ತುಂಬ ತೊಡಕು

    • Maaysa says:

      ಅದಕ್ಕೆ “ಅಡುಗೆಯನ್ನು ತಯಾರಿಸಿದೆ” ಎಂದು ಸರಿಯಾಗಿ ಬರೆಯಬೇಕು .

  9. ybharath77 says:

    ಗಿರೀಶ್ ಕಾರ್ನಾಡ ಒಬ್ಬರೇ ಆ ತರ ಬರೆದಿದ್ದರೆ ಅದನ್ನು ತಪ್ಪು ಅನ್ನಬಹುದಿತ್ತು…. ಆದರೆ ಉತ್ತರ ಕರ್ನಾಟಕದ ಹೆಚ್ಚಿನ ಬರಹಗಾರರು ಆ ತರ ಬರೆಯುತ್ತಿದ್ದರೆ ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ.

  10. Maaysa says:

    ಅರೇ ನೀವು ಹೇಳೋದೇ ಸರಿ..

    ಕೊಂಕಣಿಯ ‘ವಿಮಾನ್’ ಪದವನ್ನು ಕನ್ನಡದಲ್ಲಿ ವಿಮಾನಿನಿಂದ ಎಂದೇ ತಾನೇ ನಾವು ಬಳಸೋದು. ನಾನು ಸಂಸ್ಕೃತದ “ವಿಮಾನ” ಎಂದು ಪೆದ್ದು ಬುದ್ಧಿಯನ್ನು ತೋರಿಸಿ ಬಿಟ್ಟೆ.

    ಹಾಗೆ ‘ಇಂಗ್ಲೀಶ” ಕೂಡ ಸರಿ. ಇಂಗ್ಲೀಶದ ಕೂಡ.

    ನಿಮ್ಮ ವಚನಿನಿಂದ ನನಗೆ ಈ ಬಾತಿನ ಖಬರ್ ಆಯ್ತು . ಷುಖ್ರಿಯ !

  11. ಅಡುಗೆ ಪದವು ಹಮ್ಮುಗೆಯ ಹೆಸರೂ ಹವ್ದು ಅದೇ ಹಮ್ಮುಗೆಯಿಂದ ಉಂಟಾದ ವಸ್ತುವಿನ ಹೆಸರೂ ಹವ್ದು. ಹಳೇ ಮಯ್ಸೂರಿನವರು ಅಡುಗೆ ಅಟ್ಟುತ್ತಾರೆ/ಮಾಡುತ್ತಾರೆ (ಹಮ್ಮುಗೆ/process) ಹಾಗೆಯೇ ಅಡುಗೆಯನ್ನು ಬಡಿಸುತ್ತಾರೆ (ವಸ್ತು/Thing). ಮಾಯ್ಸ ಅವರು ಹೇಳುವಂತೆ subject/process ಅನ್ನು ಕೆಲಸದ ಜೊತೆ ಯಾವಾಗಲೂ ಸೇರಿಸಬೇಕೇ ಇಲ್ಲವೇ ಗೊತ್ತಾಗುತ್ತಿಲ್ಲ. ಆಟವಾಡು > ಆಡು, ಕಾಟಕೊಡು > ಕಾಡು, ಅಡುಗೆಮಾಡು > ಅಟ್ಟು, ಊಟಮಾಡು > ಉಣ್ಣು. ಇದೇ ಸರಿಯೇ?

  12. Maaysa says:

    ಆಟವನ್ನು ಆಡು = ಆಟವಾಡು ( ಸೇರಿಸದೇ ‘ಆಟ ಆಡು’ ಎಂದು ಬರೆಯೋದು ತಪ್ಪು ನನ್ನ ಪ್ರಕಾರ )

    ಇನ್ನೂ ವಿವರಣೆಗೆ ಉದಾಹರಣೆ .

    ಸಿದ್ದರಾಜುವನ್ನು ಕರೆದರು != ಸಿದ್ದರಾಜು ಕರೆದರು .

  13. ಸಿದ್ದರಾಜುಗೆ ‘ಅನ್ನು’ ಒಟ್ಟು ಸೇರಿಸಬೇಕು. ಒಪ್ಪಿದೆ. ಹೆಸರುಪದವು ವಸ್ತುವನ್ನು ಸೂಚಿಸಿದರೆ, ಅದರಲ್ಲೂ ಆಳುಗಳನ್ನು ಸೂಚಿಸಿದರೆ ‘ಅನ್ನು’ವನ್ನು ಸೇರಿಸಬೇಕು. ಆದರೆ ಹೆಸರು ಪದ ಹಮ್ಮುಗೆಗಳನ್ನು ಸೂಚಿಸಿದರೆ? ಸಿದ್ದರಾಜು ಎಂಬುದು ಹಮ್ಮುಗೆಯ ಹೆಸರು ಅಲ್ಲವಲ್ಲ! ಅದು ಆಳಿನ (ವಸ್ತುವಿನ) ಹೆಸರು. ‘ಕೆಲಸ ಮಾಡಿದರು’ = ‘ಕೆಲಸವನ್ನು ಮಾಡಿದರು’. ಇಲ್ಲಿ ಯಾವುದಾದರೂ ನಡೆಯುತ್ತದಲ್ಲ? ಒಂದೇ ಹುರುಳು ಕೊಡುತ್ತದಲ್ಲ?
    ಆಡುಮಾತಿನವರು ಆದಶ್ಟೂ ಕತ್ತರಿಸಿ ಹಾಕೋರೇ! ‘ಕಾಗೆ ಓಡಿಸು’! ‘ಅನ್ನು’ ಸೇರಿಸಿ ಓಡಿಸೋಕೆ ಹೋಗುವಶ್ಟರಲ್ಲಿ ಕಾಗೆ(ಯು) ಕಾಳ್(ಅನ್ನು) ತಿಂದು ಹಾರಿರುತ್ತದೆ! ನಾವ್ ಮಾತಾಡ್ತಿರೋದು ಬರಹದ ಬಗ್ಗೆಯೇ ಬಿಡಿ. ಆ ಮಾತ್ ಬೇರೆ.

  14. Maaysa says:

    “ಅಡುಗೆ ಪದವು ಹಮ್ಮುಗೆಯ ಹೆಸರೂ ಹವ್ದು ಅದೇ ಹಮ್ಮುಗೆಯಿಂದ ಉಂಟಾದ ವಸ್ತುವಿನ ಹೆಸರೂ ಹವ್ದು”

    ಅಲ್ಲ . ಅಡುಗೆಯು ಹಮ್ಮುಗೆಯಲ್ಲ. ಅದು ಸರಕೇ/ವಸ್ತು ..

    ಅಡುವಿಕೆಗೆ / ಅಡುಗೆಯನ್ನು ಮಾಡುವ ಕ್ರಿಯೆಗೆ ನಾವು ‘ಅಡುಗೆ’ ಎಂದು ಕರೆಯುವುದಿಲ್ಲ .

    ಇನ್ನೂ “‘ಅಡುಗೆ’ಯನ್ನು ಮಾಡು” ಎಂದರೆ ಅಡುಗೆ ಎಂಬ ಸರಕನ್ನು ತಯಾರಿಸು/ಮಾಡು/ರಚಿಸು .

    ಇದು “ಮಡಕೆಯನ್ನು ಮಾಡು” ಹಾಗು “ಮಡಕೆಯನ್ನು ಕೊಡು ” ಹಾಗೇ .

    ~~~~~~~~~~~~~~~~~

    ನೋಡಿ .. “ಆಡುನುಡಿಯಂತೆ ಬರೆ” ಎಂಬ ವಾದಕ್ಕೂ ಒಂದು ಎಲ್ಲೆಯೂ ಇದೆ .

    ಕನ್ನಡವನ್ನು ಕಲಿಯುವವರು ಹಾಗು ಓದುವವರಿಗೆ ಸುಲಭವಾದ ನಿಯಮವು ಎಂದರೆ “Object” ಆದ ಸಂಗತಿಗೆ ಎರಡನೇ (ಅನ್ನು) ಹತ್ತುತ್ತದೆ. ಸಾಲಿನಲ್ಲಿ ಪದ ಯಾವುದೇ ಓರಣದಲ್ಲಿ ಇದ್ದರೂ ಕೂಡ .

    ಉದಾ: ಕಾಗೆಯನ್ನು ಓಡಿಸು ನೀನು, ಓಡಿಸು ಕಾಗೆಯನ್ನು ನೀನು, ನೀನು ಓಡಿಸು ಕಾಗೆಯನ್ನು , ಕಾಗೆಯನ್ನು ನೀನು ಓಡಿಸು …… ಹೀಗೆ ಎಲ್ಲ ಅದಲು-ಬದಲುಗಳು .

    ಆದರೆ .. ನೀನು ಕಾಗೆಯೋಡಿಸು, ಇದನ್ನು ನೀನು ಓಡಿಸು ಕಾಗೆ , ಕಾಗೆ ನೀನು ಓಡಿಸು , ಮುಂದಾದ ಅದಲು-ಬದಲು ಓರಣದಲ್ಲಿ ಬರೆಯಲು ಬರದು . ಆದ ಯೂರೋಪಿನ ಭಾಷೆಗಳಿಗೆ ಇರುವ ‘word order’ ಎಂಬ ನಿಯಮವನ್ನು ಕಲಿಸಬೇಕು.

    ಅದಕ್ಕೆ ಕಾಗೆಯನ್ನು ಓಡಿಸು = ಕಾಗೆಯೋಡಿಸು ಒಂದು ಸಮಾಸ-ಪದ/ಜೋಡುಪದ . ಅದಕ್ಕೆ ಅದನ್ನು ಬರೆದಾಗ ವ್ಯಾಕರಣ-ಬದ್ಧವಾಗಿ ಸೇರಿಸಿಯೇ ಬರೆಯಬೇಕು. .
    ಕನ್ನಡದಲ್ಲಿ ‘word order’ ನಿರ್ದಿಷ್ಟವು ಆಗಿ ಇರದುದು ಒಂದು ಸಮಸ್ಯೆ ಕೆಲವು ಸಲ.

    ಅದೂ ಅಲ್ಲದೇ ಎರಡನೇ ವಿಭಕ್ತಿಗಳನ್ನು ಇಂದು ಮಂದಿ ತೀರಾ ಮರೆದು ಬಿಟ್ಟಂತೆ ಬರೆಯುತ್ತಿದ್ದಾರೆ.

    ~~~~~~~~~~~~~~~

  15. Kiran Batni says:

    ಕನ್ನಡದಲ್ಲಿ ಎರಡನೇ ವಿಬಕ್ತಿಯನ್ನು ಸಂಸ್ಕ್ರುತದಂತೆ ಎಲ್ಲ ಕಡೆಯೂ ಬಳಸಲೇ ಬೇಕೆಂಬುದಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿ. ಎನ್. ಶಂಕರ ಬಟ್ ಅವರ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಪುಟ 180-182 ಓದಿ.

ಜಗದೀಶ್ ಗೌಡ ಎಂ ಟಿ ಗೆ ಅನಿಸಿಕೆ ನೀಡಿ Cancel reply

%d bloggers like this: