ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!

ರೋಹಿತ್ ರಾವ್

4923CC0A-80F9-46A1-9FDA-EF79A61AD680_w640_r1_s

{ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…}

ಆಕಳು-ಎಮ್ಮೆ-ಕರುಗಳಿವೆ
ಹಾಲು ಕರೆಯುವರಿಲ್ಲ
ಸೆಗಣಿ ಎತ್ತುವರಿಲ್ಲ
ಬೆರಣಿ ತಟ್ಟುವರಿಲ್ಲ.
ಎತ್ತು-ಕೋಣಗಳಿವೆ
ಉಳಲು ಬೂಮಿಗಳಿವೆ
ಬಿತ್ತಲು ಬೀಜ-ಕಾಳುಗಳಿವೆ
ನಾಟಿ ಮಾಡುವರಿಲ್ಲ
ಬೂಮಿ ಉಳುವರಿಲ್ಲ
ಕುಯಿಲಂತೂ ಉಳಿದೇ ಇಲ್ಲ.
ಮಕ್ಕಳು-ಮರಿಗಳಾಗುತ್ತಿವೆ
ಬಾಣಂತಿ-ಕೂಸ್ಗಳ ಎರೆಯುವರಿಲ್ಲ
ದಟ್ಟಿ-ಕುಪ್ಸ-ಕುಲಾವಿ ಹೊಲೆಯುವರಿಲ್ಲ
ಸವ್ದೆ-ಇದ್ದಿಲು ಮಾಡುವರಿಲ್ಲ.
ನಾಡು-ಬೀಡುಗಳಿವೆ
ಗಣಿ-ನದಿ-ಗಡಿಗಳಿವೆ
ಆಳ್ವಿ ಕಾಯುವರಿಲ್ಲ
ತೋಡಿ ಕಾಪಾಡುವರಿಲ್ಲ.
ರುಪಾಯಿಗೊಂದು ಕೇಜಿಯಕ್ಕಿಗಳಿವೆ
ದುಡಿಯದಿದ್ದರೂ ನೂರ್‍ರುಪಾಯಿ
ನರೇಗಾ ಮಜೂರಿಗಳಿವೆ
ರಾಜ್ಯ ಸರ‍್ಕಾರವೇ ಇಲ್ಲ
ಇನ್ಮುಂದೆ ಎಲ್ಲಕ್ಕೂ
ಕೇಂದ್ರ ಸರ‍್ಕಾರವೇ ಎಲ್ಲ!?

(ಚಿತ್ರ: http://gdb.voanews.com/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: