ಹೊಸಗಾಲದ ವಚನಗಳು
– ಬರತ್ ಕುಮಾರ್.
1
ಬೇಡ ಬೇಡವೆಂದರೂ
ಬೇಲಿಯಲಿ ಬೇಕಾದಶ್ಟು
ಬೆಳೆಯುವ ಎಕ್ಕದೆಲೆಯೂ
ರತಸಪ್ತಮಿಯಂದು ತಲೆಯ ಏರಿತ್ತು ಕಾಣಾ!
ಸೀರು ಸೀರೊಳು ಉಸಿರುಂಟು
ಅಲೆಯಲೆಗೂ ಬೆಲೆಯುಂಟು ಕೇಳಾ,
ಮೇಲು-ಕೀಳೊಳು ಏನುಂಟು ಹೇಳಾ ಮತ್ತಿತಾಳಯ್ಯ
2
ನುಡಿಯೊಳ್ ಮಡಿಯಿರಬೇಕೆಂಬರ್
ಗುಡಿಯೊಳ್ ದೇವನಿಹನೆಂಬರ್
ನುಡಿಗುಡಿಗಳ ಮೀರಿದ
ನಡೆಯೊಳ್ ಒಳ್ಪಿರದವರೇನೆಂಬೆ ಮತ್ತಿತಾಳಯ್ಯ
(ಚಿತ್ರ: http://sullianews.com)
ಹೊಸ ಕಾಲದ ಗಾದೆಗಳನ್ನ ಚೆನ್ನಾಗ್ ಬರೆದಿದ್ದಿರ. ಮುಂದುವರೆಯಲಿ ನಿಮ್ ವಚನಗಳು :).
“ಮತ್ತಿತಾಳಯ್ಯ”???