ಕನಸು-ಮನಸು

– ಬರತ್ ಕುಮಾರ್.

dream__8_1

ಕನಸು ಕಡಲಾಚೆಗೆ
ಎಳಸುತ್ತಿದೆ
ಮನಸು ಮಣ್ಣನೇ
ಬಯಸುತ್ತಿದೆ

ಕನಸು ಮುಗಿಲ
ಹೆಗಲೇರಿದೆ
ಮನಸು ಮನೆಯ
ಮುಂಬಾಗಿಲಲ್ಲೇ ಇದೆ

ಓ ಕನಸೇ, ಮನದ
ಮಾತು ಕೇಳುವೆಯಾ?
ಓ ಮನಸೇ, ಕನಸ
ಕೊಲ್ಲುವೆಯ?!

ಕನಸು ಮನಸನು
ತೂಗಿಸುವ ಸೊಗಸಿಗಾಗಿ
ಬೊಗಸೆ ಕಂಗಳು ಕಾಯುತ್ತಿದೆ
ಕನಸು ಮನಸಿನಲ್ಲೂ ಎಣಿಸದೆ

(ಚಿತ್ರ: http://widowsvoice-sslf.blogspot.in/)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.