ನೇಸರನೇ ಮದ್ದು

 ವಿವೇಕ್ ಶಂಕರ್.

solarclave

ಮಾಂಜುಮನೆಗಳಲ್ಲಿ (hospital) ಯಾವಾಗಲೂ ಸೋಂಕಿನ ತೊಂದರೆ ಕಾಣಿಸಿಕೊಳ್ಳುವ ಪರಿಸ್ತಿತಿ ಇದ್ದೇ ಇರುತ್ತದೆ. ಹಲವಾರು ಕಡೆ ಚುಚ್ಚುಮದ್ದುಗಳನ್ನು ಚೊಕ್ಕವಾಗಿಸದೆ ಬಳಸಿದ್ದರಿಂದಲೇ ರೋಗಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸೋಂಕು ತಪ್ಪಿಸಲು ಮಾಂಜುಮನೆಯಲ್ಲಿ ಬಳಸುವ ಎಲ್ಲಾ ಒದಗಿಕೆಗಳನ್ನು (equipment) ಆಗಾಗ ಕೊಳೆತೆಗೆತಕ್ಕೆ (sterilization) ಒಳಪಡಿಸಬೇಕಾದದ್ದು ತುಂಬಾ ಅರಿದಾದ ಕೆಲಸ.

ಇಲ್ಲಿಯವರೆಗೂ ಇದನ್ನು ಉಗಿ-ಉಂಟುಮಾಡುವ ಆಟೊಕ್ಲೆವ್ ಗಳು ಮಾಡುತ್ತಿದ್ದವು. ಆದರೆ ರಯ್ಸ್ ಕಲಿಕೆವೀಡಿನಲ್ಲಿ ನಡೆದ ಅರಕೆಯಿಂದ ಅಲ್ಲಿನ ಬಿಣಿಗೆಯರಿಗರು (engineers) ಸೋಲಾರ್‍-ಕ್ಲೆವ್ ಎಂಬ ನೇಸರ-ಕಸುವಿನ ಚೂಟಿಯನ್ನು (solar-powered device) ಮಾಡಿದ್ದಾರೆ. ಹಳೆಯ ಸಲಕರಣೆಗಳಿಗೆ ಹೋಲಿಸಿದರೆ ಇದಕ್ಕೆ ಹೊರ ಮಿಂಚಿನ ಸೆಲೆ (external electricity source) ಬೇಕಿಲ್ಲ. ಮಿಂಚಿನ ತೊಂದರೆ ಇರುವ ಊರುಗಳಲ್ಲಿ ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಅಂತಹ ಊರುಗಳಲ್ಲಿ ಈ ಸಲಕರಣೆಯ ಬಳಕೆಯಿಂದಾಗಿ ಮಂದಿಗೆ ಸೋಂಕು ತಗಲುವುದನ್ನು ತಪ್ಪಿಸಿದಂತಾಗುತ್ತದೆ.

ಆಟೊ-ಕ್ಲೆವ್ಗಳು ಮಿಂಚನ್ನು ಬಳಸಿ ಉಗಿಯನ್ನು ಉಂಟುಮಾಡಿದರೆ ಈ ಸೋಲಾರ್‍-ಕ್ಲೆವ್ಗಳು ಬಿಸಿಲಿನ ಬೆಳಕು, ಮರುಬಳಸುವ ಹೊನ್ನು (recyclable metal) ಹಾಗೂ ಕರಿ ಸೀರ‍್ತುಣುಕುಗಳನ್ನು (carbon nano particles) ಬಳಕೆ ಮಾಡುತ್ತವೆ. ಈ ಸಲಕರಣೆ ಕೊಳೆತೆಗೆಯುತ್ತದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು, ಈ ತಂಡ ಮಾಡಿದ ಎರಡು ಚೂಟಿಗಳನ್ನು ಜಿಯೋಬಾಸಿಲಸ್ ಸ್ಟಿಯರೊತರ‍್ಮೊಪಿಲಸ್ (geobacillus stearothermophilus ) ಎಂಬ ಬಾಕ್ಟೀರಿಯಾವನ್ನು ಕೊಲ್ಲುತ್ತದೊ ಇಲ್ಲವೋ ಅಂತ ಒರೆಗೆ ಒಳಪಡಿಸಲಾಯಿತು. ಈ ಮೇಲಿನ ಬಾಕ್ಟೀರಿಯವನ್ನು ಕಾವಿನಿಂದ ಕೊಲ್ಲುವುದು ತುಂಬಾ ತೊಡಕು ಆದರೆ ಈ ಹೊಸ ಸೋಲಾರ್‍-ಕ್ಲೆವ್ ಮೂವತ್ತು ನಿಮಿಶದೊಳಗೆ ಇಡಿ ಬಾಕ್ಟೀರಿಯವನ್ನು ಇಲ್ಲವಾಗಿಸಿತು.

ಇದನ್ನು ಮುಂದಕ್ಕೆ ನೀರು ಚೊಕ್ಕಗೊಳಿಸುವುದಕ್ಕೆ ಇಲ್ಲವೇ ಮಿಂಚು ಉಂಟುಮಾಡುವುದಕ್ಕೂ ಬಳಸಬಹುದೆಂದು ಅರಕೆಗಾರರು ತಿಳಿಸಿದ್ದಾರೆ.

ಒಸಗೆಯ ಸೆಲೆ: popsci.com

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಇದರಲ್ಲಿ ಈಗ ಬಳಸುತ್ತಿರುವ ಅಟೋ-ಕ್ಲೆವ್ ಗಳ ರೀತಿ ಉಗಿಯ ಬಳಕೆಯೂ ಇಲ್ಲ ತಾನೇ. ಅಂದರೆ ಇದು ಸೋಲಾರ್ ಶಕ್ತಿಯನ್ನು ಕೇವಲ ವಿದ್ಯುತ್ತಾಗಿ ಮಾತ್ರ ಬಳಸಿಕೊಂಡಿಲ್ಲ. ಆಸಕ್ತಿಕರವಾಗಿದೆ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *