ನಡುಗುವ ಚಳಿಗೆ ಬಿಸಿ ಬಿಸಿ ತಕ್ಕಾಳಿ ತಿಳಿ

ಪ್ರೇಮ ಯಶವಂತ

ತಿಟ್ಟ

ಬೇಕಾಗಿರುವ  ಪದಾರ್‍ತಗಳು :
ತಕ್ಕಾಳಿ- 2
ಹಸಿ ಶುಂಟಿ – 2 ತುಂಡು
ಕೆಂಪು ಮೂಲಂಗಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿ ಮೆಣಸಿನಪುಡಿ – ½ ಚಮಚ
ರೊಟ್ಟಿ ತುಂಡು (Bread crumbs)- ಆಯ್ಕೆಗೆ ಬಿಟ್ಟದ್ದು
ಉಪ್ಪು – ರುಚಿಗೆ ತಕ್ಕಶ್ಟು
ಎಣ್ಣೆ- 2-3 ಚಮಚ

ವಗ್ಗರಣೆಗೆ:
ಎಣ್ಣೆ – 2 ಚಮಚ
ಜೀರಿಗೆ – ½ ಚಮಚ
ಹಿಂಗು – ¼ ಚಮಚ

ಮಾಡುವ ಬಗೆ:
ಒಂದು ಬಾಣಲೆಯಲ್ಲಿ 2-3 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಕೂಡಲೇ ಹಸಿ ಶುಂಟಿಯನ್ನು ಹಾಕಿ ಕಂದು ಬಣ್ಣ ಬರುವವರೆಗೂ ಬೇಯಿಸಿರಿ. ನಂತರ ಹೆಚ್ಚಿಕೊಂಡ ಕೆಂಪು ಮೂಲಂಗಿ (carrot), ತಕ್ಕಾಳಿ (tomato), ಮೆಣಸಿನ ಪುಡಿ, ಉಪ್ಪು ಹಾಕಿ ಕಲಸಿ 15-20 ನಿಮಿಶಗಳವರೆಗೂ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಈಗ ಸ್ವಲ್ಪ ತಣ್ಣಗಾಗಿಸಿ ರುಬ್ಬುಗೆಯಲ್ಲಿ (mixer) ಹಾಕಿ ನುಣ್ಣಗೆ ರುಬ್ಬಿರಿ. ಹೀಗೆ ರುಬ್ಬಿದ ಮಿಶ್ರಣವನ್ನು ಹಿಂಗು ಮತ್ತು ಜೀರಿಗೆಯ ವಗ್ಗರಣೆ ಕೊಟ್ಟು, ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿರಿ. ಬಿಸಿ ಬಿಸಿ ತಕ್ಕಾಳಿ ತಿಳಿ ರೊಟ್ಟಿ ತುಂಡಿನೊಂದಿಗೆ ಬಡಿಸಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ತಕ್ಕಾಳಿ ಎಂದರೇನು? ದಯವಿಟ್ಟು english-kannada ಪದ ನೆರಕೆಯನ್ನು ತಂತ್ರಾಂಶದ ರೂಪದಲ್ಲಿ ಬಳಸುವ ಹಾಗೆ internet ಇಲ್ಲದಾಗಲೂ ದೊರಕುವಂತೆ ಮಾಡಿ. ಇದಕ್ಕೆ ಹಣವನ್ನು ನಿಗದಿಪಡಿಸಿದರೂ ಪರವಾಗಿಲ್ಲ.

    • ತಕ್ಕಾಳಿ = tomato. ಮಿಂಬಲೆ ಇಲ್ಲದಿರುವಾಗಲೂ ಇಂಗ್ಲಿಶ್-ಕನ್ನಡ ಪದಕೆರಕೆ ಸಿಗಬೇಕೆಂಬುದು ಒಳ್ಳೆಯ ಸಲಹೆ. ಯಾವ ಪದನೆರಕೆಯ ಬಗ್ಗೆ ಮಾತಾಡುತ್ತಿದ್ದೀರಿ ಎಂದು ತಿಳಿಸಿ.

  2. ಆಂಗ್ಲದ ಪದಗಳಿಗೆ ಕನ್ನಡದ್ದೇ ಆದ ಪದಗಳುಳ್ಳ ಪದನೆರಕೆ ಅವಶ್ಯಕ. ಮಿಂಬಲೆಯ ಸಂಪರ್ಕವಿಲ್ಲದಾಗಲು ಬರಿಗೆಗಳನ್ನು ಬರೆಯಲು ನೆರವಾಗುತ್ತದೆ.

ಅನಿಸಿಕೆ ಬರೆಯಿರಿ: