ರೋಬೋಟುಗಳು ಪೋಲೀಸರ ಕೆಲಸ ಮಾಡಿದರೆ ಹೇಗೆ?

– ಜಯತೀರ‍್ತ ನಾಡಗವ್ಡ

highway patrol

ಹೆದ್ದಾರಿಯಲ್ಲಿ ಯಾರೂ ನೋಡುತ್ತಿಲ್ಲ ಅಂತಾ ’ಜುಯ್’ ಎಂದು ಕಾರು ಓಡಿಸುವಾಗ ಸರಕ್ಕನೇ ಕಾರೊಂದು ಹಿಂಬಾಲಿಸಿ ನಿಮ್ಮ ಮುಂದೆ ನಿಂತು ಅದರೊಳಿಗಿನಿಂದ ಒಬ್ಬ ಉಕ್ಕಾಳು (ರೋಬೋಟ್) ಬಂದು ನಿಮ್ಮ ಮುಂದೆ ದಂಡದ ಚೀಟಿ ಹಿಡಿದರೆ ಹೇಗನಿಸುತ್ತದೆ! ಹವ್ದು, ಮುಂದಿನ ಕೆಲ ವರುಶಗಳಲ್ಲಿ ಹೆದ್ದಾರಿಯ ಕಟ್ಟಲೆಗಳನ್ನು ಮೀರಿದವರಿಗೆ ತಕ್ಕ ಶಿಕ್ಶೆ ಕೊಡುವವರು ಪೋಲೀಸರಲ್ಲ ಅವರಂತೆ ಕೆಲಸ ಮಾಡುವ ಉಕ್ಕಾಳುಗಳು ಅಂದರೆ ರೊಬೋಟಗಳು!

ನಾನು ಮಾತನಾಡುತ್ತಾ ಇರೋದು ಹೀಗೊಂದು ಉಕ್ಕಾಳುಗಳ ಗುರಿ ಇಟ್ಟುಕೊಂಡು ಎಂದಿನಂತೆ ಈ ವರುಶವು ನಡೆಯುತ್ತಿರುವ ಲಾಸ್-ಏಂಜಲೀಸ್ ತಾನೋಡಗಳ ತೋರ‍್ಪಿನ (auto show) ಬಗ್ಗೆ. ಅಂದ ಹಾಗೆ ಲಾಸ್-ಏಂಜಲೀಸ್ ಅಮೆರಿಕದ ಎರಡನೇ ಅತಿ ಹೆಚ್ಚಿನ ಬಂಡಿ ದಟ್ಟಣೆಯಿಂದ ಕೂಡಿ ಹೆಚ್ಚು ಒಯ್ಯಾಟದ (traffic) ತೊಂದರೆಗೆ ಒಳಗಾಗುತ್ತಿರುವ ಊರು. ಹಲವು ಮಂದಿ ಕಟ್ಟಲೆ ಮೀರಿ ಗಾಡಿ ಓಡಿಸಿದರೂ ಅವರನ್ನು ಹಿಡಿದಿಡಲು ಆಗದಂತಹ ಪಾಡು. ಅದಕ್ಕೆಂದೇ ಈ ಸಲದ ತೋರ‍್ಪಿನ ಹುರುಳು (theme) ಹೆದ್ದಾರಿ ಕಾವಲು 2025 ಎಂದು ಗುರುತಿಸಿ, ’ಒಯ್ಯಾಟವನ್ನು ಅಂಕೆಯಲ್ಲಿಡುವಂತ ಉಕ್ಕಾಳುಗಳನ್ನು ಅಣಿಗೊಳಿಸಿ’ ಎಂದು ತಾನೋಡಗಳ ತಯಾರಕರಿಗೆ ಕರೆ ನೀಡಲಾಗಿದೆ.

ಪ್ರತಿ ವರುಶವೂ ಒಂದು ಹೊಸ ಹುರುಳನ್ನು ಮುಂದೊಡ್ಡಿ ಆಟೋಮೋಬಾಯ್ಲ್ ಕೂಟಗಳ ಮಾಡುಬಲ್ಮೆಗೆ (creativity) ಸೆಲೆಯಂತಾಗುವ ಈ ತೋರ‍್ಪು ’ಎಲ್.ಎ ಆಟೋಶೋ’ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಈ ಹೆದ್ದಾರಿ ಕಾವಲಿನ ಬಂಡಿಗಳ ಜಾತ್ರೆಗೆ ತಾನೋಡಗಳ ಪ್ರಮುಕ ಕೂಟಗಳಾದ ಬಿ.ಎಮ್.ಡಬ್ಲ್ಯೂ, ಹೋಂಡಾ, ಜಿಎಮ್,ಮರ್‍ಸಿಡಿಸ್ ಬೆಂಜ್ ಹಾಗೂ ಸುಬಾರೂ ತಮ್ಮ ಕನಸಿನ ಬಂಡಿ ತೋರಲು ಸಜ್ಜಾಗಿವೆ. ಈ ತೋರ‍್ಪು (show) ಕೇವಲ ಬಂಡಿ ತಯಾರಿಕರ ನೆನಸಿಕೆಗೆ (imagination) ಪಣವಾಗಿರದೇ ಅಟೋಮೋಬಾಯ್ಲ ಕಯ್ಗಾರಿಕೆಯಲ್ಲಿ ಮುಂದೆ ಹೊಮ್ಮಲಿರುವ ದಿಟ (real) ಏಳಿಗೆಗಳ ಕನ್ನಡಿಯೂ ಆಗಲಿದೆ.

ಈಗ ಲಾಸ್ ಎಂಜಲೀಸ್ ಒಡ್ಡಿರುವ ಸವಾಲಿಗೆ ಬಂಡಿ ತಯಾರಕರು ಏನು ಮಾಡಿದ್ದಾರೆ ಎಂದು ನೋಡೋಣ. ಜನರಲ್ ಮೋಟರ‍್ಸ್ ’ವೋಲ್ಟ್-ಸ್ಕ್ವಾಡ್’ ಎಂಬ ಹೆಸರಿನ ಹೊಳಹನ್ನು ತೋರ‍್ಪಡಿಸಲಿದೆ. ಇದು 3 ಬಂಡಿ ಅಳವಡಿಸಿಕೊಂಡು ಮಿನ್ನಿನ ತಳ್ಳುಗೆ (electronic propulsion) ಹೊಂದಿರುತ್ತದೆ. ಬಿ.ಎಮ್.ಡಬ್ಲ್ಯೂ ಮತ್ತು ಹೋಂಡಾ ಕೂಟಗಳು ಹೆಚ್ಚು ನಯ್ಜ ನೀಡಿಕೆ (proposal) ಅಣಿಗೊಳಿಸಿವೆ. ಇವುಗಳು ಕಿಕ್ಕಿರಿದು ತುಂಬಲಿರುವ ಮುಂಬೊತ್ತಿನ ಹೆದ್ದಾರಿಗಳ ಕಾವಲಿಗೆ ಹೆಚ್ಚು ತಕ್ಕುದಾಗಿದೆ.

ಹೋಂಡಾದ ಮುಂದುವರೆದ ಮಾದರಿ ಆಳಿರದ ಗೆಂಟಂಕೆಯ ಬಾನೋಡದಂತಿದ್ದು (unmanned aerial drone), ಇದರಲ್ಲಿ ಮಂದಿ ಹಿಡಿತದ ಆಯ್ಕೆ (manual option) ನೀಡಲಾಗಿದೆ. ಸಿಎಚ್ಪಿ ಡ್ರೊನ್ ಸ್ಕ್ವ್ಯಾಡ್ ಎಂಬ ಹೆಸರಿರುವ ಈ ಬಂಡಿ ಅಮೆರಿಕೆಯ ಮಿಲಿಟರಿ ಪಡೆ ಕಲೆಹಾಕುವ ಜಾಣ್ಮೆಗೆ ಸರಿಹೊಂದುವಂತದ್ದಂತೆ!

ಒಟ್ಟಿನಲ್ಲಿ ಬರುವ 10-15 ವರುಶಗಳಲ್ಲಿ ಕಾಪುಗರ (ಪೋಲೀಸರ) ಸ್ತಾನದಲ್ಲಿ ಉಕ್ಕಾಳಿನ (robot) ಕಾವಲುಗಾರರು ಹೆದ್ದಾರಿಯ ಕಾವಲು ಕಾಯುವುದಂತೂ ದಿಟವೆನಿಸುತ್ತಿದೆ.

(ಮಾಹಿತಿ ಸೆಲೆ: www.popsci.com/)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s