ಜಪಾನಿನಲ್ಲಿ ಹೊಸತನದಿಂದ ಹಳೆ ಕಲೆಗೆ ಬಾಳು

-ವಿವೇಕ್ ಶಂಕರ್

japanese_calligraphyrobot

ಇಂದು ಚೂಟಿಯುಲಿಗಳು (smart phones), ಎಣ್ಣುಕಗಳಂತಹ(computers) ಸಲಕರಣೆಗಳು ನಮ್ಮೆಲ್ಲರ ಬಾಳಿನ ಅರಿದಾದ ಬಾಗವಾಗಿವೆ. ಇಂತ ಹೊಸ ಸಲಕರಣೆ, ಚಳಕಗಳಿಂದಾಗಿಯೇ ಹಳೆ ಕಲೆಗಳು ಸತ್ತುಹೋಗುತ್ತಿವೆ ಎಂಬ ಅನಿಸಿಕೆಯೂ ಕೂಡಾ ಹಲವು ಮಂದಿಯಲ್ಲಿ ಬೀಡುಬಿಟ್ಟಿದೆ. ಅಳಿಸಿ ಹೋಗುತ್ತಿರುವ ಕಲೆಗಳಲ್ಲಿ ಜಪಾನಿನ ಶೋಡೊ ಕಲೆ ಕೂಡ ಒಂದು ಮತ್ತು 60% ರಶ್ಟು ಜಪಾನಿಯರು ಈ ಕಲೆ ಕಣ್ಮರೆಯಾಗುತ್ತಿರಲು ಹೊಸ ಚಳಕಗಳೇ ಕಾರಣ ಅಂತಾ ಅನಿಸಿಕೆ ಹೊಂದಿದ್ದರಂತೆ.

’ಶೋಡೊ’ ಕುಂಚ ಬರಹದ ಕಲೆ, ಕುಂಚದ ನೆರವಿನಿಂದ ಕಾಂಜಿ ಲಿಪಿಯನ್ನು ಬರೆಯುತ್ತಾರೆ. ಜಪಾನಿಯರ ಈಗಿನ ಬರಹದ ಮೂರು ಬಗೆಯ ಲಿಪಿಗಳಲ್ಲಿ ಇದೊಂದು ಬಗೆಯ ಲಿಪಿ.ಈ ಕಲೆಯನ್ನು ಉಳಿಸುವುದಕ್ಕೆ ಕಯೊ ಕಲಿಕೆವೀಡಿನಲ್ಲಿ (university) ಕಲಿಸುತ್ತಿರುವ ಶಯ್ಚಿರೊ ಮಟ್ಸು (Seiichiro Matsui) ಮುಂದೆ ಬಂದಿದ್ದಾರೆ. ಅಂದದ ಕಯ್ಬರಹದಲ್ಲಿ ತಿಳಿವಿಗರಾದ (calligraphy expert) ತೊಂಬತ್ತರ ಹರೆಯದ ಜುಹು ಸದೊ(Juhu Sado) ಅವರನ್ನೂ ಇದರಲ್ಲಿ ತೊಡಗಿಸಿ ಕೊಂಡಿದ್ದಾರೆ.

ಇವರಿಬ್ಬರ ಜತೆ ಈ ಕಲೆ ಉಳಿಸಲು ಅಣಿಯಾಗಿದೆ ಒಂದು ‘ಉಕ್ಕಾಳು’. ಈ ಉಕ್ಕಾಳು (robot) ಮಕ್ಕಳಿಗೆ ಶೋಡೋ ಕಲೆಯ ಅಂದದ ಕಯ್ಬರಹದ ಚಳಕಗಳನ್ನು(techniques) ಹೇಳಿಕೊಡುತ್ತದೆ. ಲಿಪಿಯನ್ನು ಬರೆಯುವಾಗ ಕಯ್ಯನ್ನು ಹೇಗೆ ಆಡಿಸಬೇಕು, ಕುಂಚವನ್ನು ಯಾವ ಕೋನದಲ್ಲಿ ಇಟ್ಟುಕೊಳ್ಳಬೇಕು ಮುಂತಾದ ಚಳಕಗಳನ್ನು ಹೇಳಿಕೊಡುತ್ತದೆ.

ಮುಂದಕ್ಕೆ ಹೋಗುತ್ತಾ ಇಂತ ಉಕ್ಕಾಳಿನ ನೆರವಿನಿಂದ ಕೊಯ್ಮದ್ದಿನ(surgical) ಇಲ್ಲವೇ ಮಾಂಜರಿಮೆಯ(medicinal) ಚಳಕಗಳನ್ನು ಕೂಡ ಕಲಿಯಬಹುದು ಅಂತ ಕೂಡ ಅರಿಗರು ಹೇಳುತ್ತಿದ್ದಾರೆ.

ಬಗೆಯ ಮಾತು:

ಚಳಕರಿಮೆಯಲ್ಲಿ ಹೊಸ ಬೆಳವಣಿಗೆ ಆದ ಕೂಡಲೇ ನಮ್ಮ ಕಲೆಗಳು, ನಡೆ-ನುಡಿಗಳು ಹಾಳಾಗಿ ಹೋಗುತ್ತಿವೆ ಅನ್ನುತ್ತಾ ಹೊಸ ಬೆಳವಣಿಗೆಗಳನ್ನು ವಿರೋದಿಸಿ ಕೊರಗುವುದಕ್ಕಿಂತ ಹೊಸ ಚಳಕದಿಂದಲೇ ನಮ್ಮ ನಡೆ-ನುಡಿಯನ್ನು ಹೇಗೆ ಉಳಿಸಬಹುದು ಅಂತಾ ತೋರಿಸಿ ಕೊಡುತ್ತಿರುವ ಜಪಾನಿಯರ ಜಾಣ್ಮೆಯಿಂದ ನಾವು ತಿಳಿದುಕೊಳ್ಳುವುದು ತುಂಬಾ ಇದೆ ಅಲ್ಲವೇ!?

(ಒಸಗೆಯ ಸೆಲೆ: www.popsci.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications