ಹೊತ್ತಿಗೆ ಪರಿಚಯ: ಕನ್ನಡ ಬರಹದ ಸೊಲ್ಲರಿಮೆ – 4

– ಬರತ್ ಕುಮಾರ್.

485476_10151809378644266_442937331_n

ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರಾದ ನಾಡೋಜ ಡಾ. ಡಿ. ಎನ್. ಶಂಕರಬಟ್ಟರು ಹಲವು ವರುಶಗಳಿಂದ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂದು ವಾದಿಸುತ್ತ ಬಂದಿದ್ದಾರೆ. ಇತ್ತೀಚೆಗೆ ಅಂತಹ ಕನ್ನಡದ ವ್ಯಾಕರಣವೊಂದನ್ನು ಬರೆಯಲು ಶುರು ಮಾಡಿದ್ದಾರೆ. ಈಗ ಆ ಹಮ್ಮುಗೆಯಿಂದ ಹೊರಬಂದ ನಾಲ್ಕನೆಯ ಹೊತ್ತಗೆ ಅಚ್ಚಾಗಿ ಮಾರುಕಟ್ಟೆಗೆ ಬಂದಿದೆ. ಅದರ ಒಂದು ಕಿರುಪರಿಚಯ ಇಲ್ಲಿದೆ – ಹೊತ್ತಗೆಯ ಬೆನ್ನುಡಿಯಿಂದ:

ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ.ಎನ್.ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ನಾಲ್ಕನೆಯ ತುಂಡಾಗಿ ಹೊರ ಬರುತ್ತಿದೆ. ಇದರಲ್ಲಿ ಆಡುಪದಗಳು ಮತ್ತು ತೋರುಪದಗಳು ಎಂಬ ಎರಡು ಪಸುಗೆಗಳಿವೆ.

ಮೊದಲನೆಯ ಪಸುಗೆಯಲ್ಲಿ ನಾನು, ನೀನು ಮತ್ತು ತಾನು ಎಂಬ ಮೂರು ಆಡುಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ, ಅವುಗಳ ಕೆಲಸವೇನು, ಅವಕ್ಕೂ ಹೆಸರುಪದಗಳಿಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ವಿವರಿಸಲಾಗಿದೆ; ಇದಲ್ಲದೆ, ಅವಕ್ಕೂ ಅವನು, ಅವಳು, ಅದು ಮೊದಲಾದ ತೋರುಪದಗಳಿಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನೂ ಈ ಪಸುಗೆಯಲ್ಲಿ ತಿಳಿಸಲಾಗಿದೆ.

ಈ ನಾಲ್ಕನೇ ತುಂಡಿನ ಎರಡನೆಯ ಪಸುಗೆಯಲ್ಲಿ ಅವನು, ಇವನು, ಅದು, ಇದು, ಯಾರು, ಏನು, ಅಲ್ಲಿ, ಇಲ್ಲಿ, ಎಲ್ಲಿ ಮೊದಲಾದ ಬೇರೆ ಹಲವು ಪದಗಳನ್ನು ತೋರುಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಗುಂಪಿಸಿ, ಅವುಗಳ ಪರಿಚೆ ಮತ್ತು ಬಳಕೆಗಳ ಕುರಿತಾಗಿ ಹಲವು ವಿವರಗಳನ್ನು ಕೊಡಲಾಗಿದೆ. ಇದಲ್ಲದೆ,ಯಾರು, ಏನು, ಎಲ್ಲಿ ಮೊದಲಾದ ಪದಗಳನ್ನು ಕೇಳ್ವಿಪದಗಳೆಂದು ಕರೆಯುವುದು ಸರಿಯಲ್ಲ, ನಿಜಕ್ಕೂ ಅವು ತಿಳಿಯದ ತೋರುಪದಗಳು ಎಂಬುದನ್ನೂ ಈ ಪಸುಗೆಯಲ್ಲಿ ತೋರಿಸಿಕೊಡಲಾಗಿದೆ. ಇದು ಬರೀ ಕನ್ನಡದ ಸೊಲ್ಲರಿಮೆಯ ಕಣ್ಣಿನಂದಶ್ಟೇ ಅಲ್ಲ ಯಾವುದೇ ನುಡಿಯ ಸೊಲ್ಲರಿಮೆಗೂ ಒಪ್ಪುವಂತಹ ಅರಕೆ. ಇದಲ್ಲದೆ ಆ, ಈ ಎಂಬ ತೋರ‍್ಕೆಯ ತೋರುಪದಗಳ ಬಳಕೆ ಏನು,ಅವುಗಳನ್ನು ಎಂತಹ ಸಂದರ‍್ಬಗಳಲ್ಲಿ ಬಳಸಲಾಗುತ್ತದೆ ಮತ್ತು ಸೊಲ್ಲುಗಳನ್ನು ನೆಲೆಗೊಳಿಸುವುದರಲ್ಲಿ ಇವುಗಳ ಪಾತ್ರ ಏನು ಎಂಬುದನ್ನು ಇದರಲ್ಲಿ ತೋರಿಸಿಕೊಡಲಾಗಿದೆ.

ಕನ್ನಡದಲ್ಲಿ ಅದರದೇ ಆದ ಸೊಲ್ಲರಿಮೆಯ ನಡವಳಿಯೊಂದನ್ನು ಬೆಳೆಸಬೇಕಿದ್ದಲ್ಲಿ, ಅದರಲ್ಲೇನೇ  ಹಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ಇಂತಹ ಹಲವನ್ನು ಇಲ್ಲಿ ಉಂಟುಮಾಡಲಾಗಿದ್ದು, ಅವುಗಳ ಒಂದು ಪಟ್ಟಿಯನ್ನು ಪುಸ್ತಕದಲ್ಲಿ ಮೊದಲಿಗೇನೇ ಕೊಡಲಾಗಿದೆCategories: ಅರಿಮೆ

ಟ್ಯಾಗ್ ಗಳು:, , , , ,

1 reply

  1. kannadada kannada sollarimeya iruvvuyisike aagabeekide. iruvuyisike andare ontologisation anta. dns bhattarige avara terapariyada ii kaayakakke nammellara neravu bembala mattu meccugegalu sallabeeku.

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s