ಹೊಸ ತಲೆಮಾರಿನ ಬರಹ

– ಬರತ್ ಕುಮಾರ್.

’ಹೊನಲು’ ಮಿಂಬಾಗಿಲಿನ ಮೊದಲ ಏಡಿನ ಹಬ್ಬದ ಈ ಸಂದರ‍್ಬದಲ್ಲಿ ಹೊನಲಿನ ಒಬ್ಬ ನಡೆಸುಗನಾಗಿ ಅದಕ್ಕಿಂತ ಹೆಚ್ಚಾಗಿ ಓದುಗನಾಗಿ ಹೆಮ್ಮೆ ಅನಿಸುತ್ತದೆ. ಲಿಪಿ ಸುದಾರಣೆ ಇಲ್ಲವೆ ಎಲ್ಲರಕನ್ನಡ ಎಂಬುದು ಜನಪರವಾಗಿದೆ ಎನ್ನುವುದಕ್ಕೆ ಹೊನಲಿಗೆ ಹರಿದು ಬಂದ ಬರಹಗಳೇ ಕಣ್ಮುಂದಿವೆ. ಎಲ್ಲರಕನ್ನಡವು ಹಿಂದೆಂದು ಬರೆಯದವರನ್ನು ಬರಹಗಾರರನ್ನಾಗಿ ಮಾಡಿದೆ. ಹಾಗಾಗಿ ಎಲ್ಲರಕನ್ನಡವು ಈ ಮೂಲಕ ತನ್ನ ಸುಳುತನವನ್ನು, ಅಗ್ಗಳಿಕೆಯನ್ನು ಎತ್ತಿ ಹಿಡಿದಿದೆ ಎಂದು ನಾನು ಅಂದುಕೊಂಡಿದ್ದೇನೆ.

ಹೊನಲು ಶುರು ಮಾಡಿದಾಗ ಇದೊಂದು ಜನ ಸಾಮಾನ್ಯರ ಬರಹದ ಚಳುವಳಿಯಾಗಬೇಕೆಂಬುದೇ ನಮ್ಮ ಗುರಿಯಾಗಿತ್ತು. ’ನಲ್ಬರಹ’ ಕವಲಿನ ನಡೆಸುಗನಾಗಿ ನಾನು ಕಂಡ ಹಾಗೆ ಹೊನಲಿನಲ್ಲಿ ಸುಮಾರು ಇನ್ನೂರು ನಲ್ಬರಹಗಳು ಬಂದಿವೆ. ಇದರಲ್ಲಿ ಸಣ್ಣಕತೆ, ಕವನ ಮತ್ತು ಅನುಬವ ಬರಹಗಳು ಹೆಚ್ಚಾಗಿ ಮೂಡಿ ಬಂದಿವೆ. ನಲ್ಬರಹದ ಮೂಲಕವೇ ಕನ್ನಡದ ತಳಮಟ್ಟದ ನಡೆ(ಸಂಸ್ಕ್ರುತಿ)ಯನ್ನು ಬರಹಕ್ಕೆ ಪರಿಣಾಮಕಾರಿಯಾಗಿ ತರಬಹುದೆಂದು ಹೊನಲಿನ ನಲ್ಬರಹಗಳು ತೋರಿಸಿಕೊಟ್ಟಿವೆ.

ಇನ್ನು ಕನ್ನಡದ್ದೇ ಆದ ಪದಗಳನ್ನು ಕಟ್ಟುವುದಲ್ಲದೆ ಮತ್ತು ಅದನ್ನು ಬಳಕೆಗೆ ತರುವಲ್ಲಿಯೂ ಹೊನಲು ಒಂದು ತಲೆಮಾರಿನಶ್ಟು ಮುಂದಿದೆ ಎಂದು ಹೇಳಬಹುದು. ಹಾಗಾಗಿಯೇ ಹೊನಲಿನ ಬರಹಗಳನ್ನು ಒಂದು ಹೊಸತಲೆಮಾರಿನ ಬರಹ(Next Generation Writings) ಎಂದೇ ಹೇಳಬಹುದು. ಈ ಬರಹಗಳು ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡವಾಗಿಸುತ್ತಾ, ಕನ್ನಡಿಗರು ಒಂದು ಹೊಸ ಮುಂದುವರೆದ ಕೂಡಣವನ್ನು ಕಟ್ಟಿಕೊಳ್ಳುವುದಕ್ಕೆ ನೆರವೀಯಲಿ ಎಂದು ಬಯುಸುತ್ತೇನೆ. ಮತ್ತೊಮ್ಮೆ, ಹೊನಲು ಹನ್ನೆರಡು ತಿಂಗಳನ್ನು ಕಾಣುವುದಕ್ಕೆ ಕಾರಣರಾದ ಎಲ್ಲ ಹೊನಲಿನ ಬರಹಗಾರರು ಮತ್ತು ಓದುಗರಿಗೆ ಸವಿ ಹಾರಯ್ಕೆಗಳು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks