ಮಿಂಬಲೆ ಮಿಂಚಿಸಲಿರುವ ಗೂಗಲ್ ಪಯ್ಬರ್

– ಪುಟ್ಟ ಹೊನ್ನೇಗವ್ಡ.

google-fiber

ಇನ್ನೇನು ಮಿಂಬಲೆ ಮಿಂಚಲಿದೆ, ಗೂಗಲ್ ಪಯ್ಬರ್ (Google fiber) ಎಂಬ ಮನೆ ಮನೆಗೆ ಮಿಂಬಲೆ (ಇಂಟರ‍್ನೆಟ್ಟು) ಕೊಂಡೊಯ್ಯಲು ಗೂಗಲ್ಲಿನವರು ಹೊರತಂದಿರುವ ಹೊಸಚಳಕ ಮುಂದಿನ ಕೆಲ ವರುಶಗಳಲ್ಲಿ ಹೊಮ್ಮಲಿದೆ.

ಈಗಿರುವ ಬ್ರಾಡ್ ಬ್ಯಾಂಡ್ ಏರ‍್ಪಾಟಿನಲ್ಲಿ ಕಡತಗಳನ್ನು ಇಳಿಸಿಕೊಳ್ಳುವಾಗ ಇಲ್ಲವೇ ವಿಡಿಯೋ ನೋಡುವಾಗ ವೇಗ ತುಂಬಾ ಕಡಿಮೆಯಾಗಿ ಬಿಡುತ್ತದೆಯಲ್ಲವೇ ಆದರೆ ಗೂಗಲ್ ಪಯ್ಬರನಲ್ಲಿ ಈ ರೀತಿ ಆಗುವುದೇ ಇಲ್ಲ. ಗೀಗ ಹರ‍್ಟ್ಸ್ ವೇಗದಲ್ಲಿ ವಿಡಿಯೋ ನೋಡಬಹುದು, ಒಂದೆರಡು ನಿಮಿಶದಲ್ಲೇ ಒಂದಿಡಿ ಸಿನೆಮಾವನ್ನು ನಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದು ಹಾಗೆನೇ ಮಿಂಬಲೆಯೊಂದಿಗೆ ಟಿ.ವಿ.ಯ ಸೇವೆಯನ್ನೂ ಗೂಗಲ್ ಪಯ್ಬರ್ ಒದಗಿಸಬಲ್ಲದು.

ಆಮೆಯ ಮೆಲ್ಲನೆಯ ವೇಗಕ್ಕೆ ಎದುರಾಗಿ ಹೊಸ ಚಳಕ ಚುರುಕಾದ ಓಟ ಹೊಂದಿರುತ್ತದೆ ಅಂತಾ ತೋರಿಸಲು ಹಲಬಣ್ಣಗಳಿಂದ ಕೂಡಿದ ಮೊಲದ ಚಿತ್ರವನ್ನು ಗೂಗಲ್ ಪಯ್ಬರ್ ಏರ‍್ಪಾಟಿನ ಗುರುತಾಗಿಸಲಾಗಿದೆ.

2012 ರ ಸೆಪ್ಟೆಂಬರನಲ್ಲಿ ಗೂಗಲ್ ಪಯ್ಬರನ್ನು ಕನಸಸ್ ಎಂಬ ಅಮೆರಿಕಾದ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಆಳವಡಿಸಿ ಉಪಯೋಗಿಸಲಾಯಿತು. 5 ಎಂಬಿಪಿಎಸ್ ವೇಗದಿಂದ 1 ಗೀಗ ಹರ‍್ಟ್ಸ್ ವೇಗದವರೆಗೂ ಇದರ ಕಸುವಿರುವುದು ಗಟ್ಟಿಯಾಯಿತು. ಆಸ್ಟಿನ್, ಟೆಕ್ಸಾಸ್, ಪ್ರಒ, ಉತಾಹ್ ಊರುಗಳಿಗೆ ಇನ್ನಶ್ಟರಲ್ಲಿಯೇ ಈ ಯೋಜನೆಯನ್ನು ಹರಡಲಾಗುತ್ತಿದ್ದು, 2022ರ ಹೊತ್ತಿಗೆ ಅಮೆರಿಕಾದ 80 ಮಿಲಿಯನ್ ಮನೆಗಳಿಗೆ ಸೇವೆ ಒದಗಿಸುವ ಗುರಿಯನ್ನು ಗೂಗಲ್ ಹೊಂದಿದೆ. ಆದರೆ ಕರ‍್ನಾಟಕಕ್ಕೆ ಈ ಏರ‍್ಪಾಟು ಯಾವಾಗ ಬರಲಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ!

(ತಿಟ್ಟಸೆಲೆ: ಗೂಗಲ್ ಮಿಂಬಲೆ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: