ದೂರ ದೂರ…
– ಬಸವರಾಜ್ ಕಂಟಿ.
ಬೆರಳ ಸಂದಿಗೆ ಬೆರಳ ಸೇರಸಿ,
ಕಯ್ ಕಯ್ ಜೋರ ಒತ್ತಿ ಹಿಡದು,
ಜೋಡಿ ಜೋಡಿ ಹೆಜ್ಜಿ ಹಾಕಿ,
ದೂರ ದೂರ ಹೋಗೂಣು ಬಾ
ತೋಳಿಗೆ ತೋಳು ತಾಗಿಸಿಕೊಂಡು,
ಕಣ್ಣು ಕಣ್ಣು ಮಿಟಕಿಸಿಕೊಂಡು,
ಸಲುಗಿಲೆ ಗಲ್ಲಕ್ಕ ಪೆಟ್ಟ ಕೊಟಕೊಂಡು,
ಒಲವಿನ ಹಾಡ ಹಾಡುನು ಬಾ,
ಹೋದ ದೂರು ಗೊತ್ತಾಗದ್ಹಾಂಗ,
ಸೋತ ಕಾಲು ಅರಿವಿಗೆ ಬಾರದ್ಹಾಂಗ,
ಬ್ಯಾಸರಕಿ ಸನಿ ಸುಳಿಲಾರದ್ಹಾಂಗ,
ಪ್ರೀತಿ ಮಾತ ಆಡುನು ಬಾ
ಚಿತ್ತ-ಚಿತ್ತ ಮಾತಾಡುಹಾಂಗ,
ಯಾವ ಜನ್ಮಕ್ಕೂ ಬ್ಯಾರೆ ಆಗದ್ಹಾಂಗ,
ಒಬ್ಬರೊಳಗೊಬ್ಬರು ಕಳದ್ಹೋಗುಹಾಂಗ
ಒಂದಾಗೂಣು ಬಾ.
(ಚಿತ್ರ: ಎನ್ ವಯ್ ಯು ಕಪಲ್ಸ್)
ಅದ್ಭುತ ರಚನೆ. ಸಕ್ಕತ್ತಾಗಿ ಬರೆದಿದ್ದೀರಿ.