ಇಂದು ಕ್ರಿಕೆಟ್ ದಿಗ್ಗಜ ಸಚಿನ್ ಕೊನೆಯ ಆಟ

ರಗುನಂದನ್.

ಸಚಿನ್ ಕೊನೆಯ ಆಟ

ಇಂದು ಇಂಡಿಯಾದ ಮೇರು ಕ್ರಿಕೆಟ್ ಆಟಗಾರರಲ್ಲೊಬ್ಬರಾದ ಸಚಿನ್ ತೆಂಡುಲ್ಕರ್ ತಮ್ಮ ಕೊನೆಯ ಟೆಸ್ಟ್ ಆಟವನ್ನು ಆಡಲಿದ್ದಾರೆ. ಇದು ಅವರ ಇನ್ನೂರನೇ ಟೆಸ್ಟ್ ಆಟವಾಗಿದ್ದು ತವರು ನೆಲ ಮುಂಬಯ್ಯಲ್ಲಿ ಆಡಲಾಗುತ್ತಿದೆ. ಇದರ ಬಳಿಕ ಅವರು ಕ್ರಿಕೆಟ್ ಆಟವನ್ನು ತೊರೆಯಲಿದ್ದಾರೆ. ಶಾಲೆಯ ಮಟ್ಟದ ಕ್ರಿಕೆಟ್ ಆಟವೊಂದರಲ್ಲಿ ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದ ಸಚಿನ್ ವಿನೋದ್ ಕಾಂಬ್ಳಿಯೊಡನೆ ಒಟ್ಟು ಆರುನೂರಕ್ಕು ಹೆಚ್ಚು ರನ್ನುಗಳನ್ನು ಪೇರಿಸಿದ್ದರು. ಆಗಲೇ ಮುಂಬಯ್ ಕ್ರಿಕೆಟ್ಟಿನ ದಿಗ್ಗಜರ ಗಮನ ಸೆಳೆದಿದ್ದರು.

ತಮ್ಮ ಹದಿನಾರನೇ ವಯಸ್ಸಿನಲ್ಲಿ (1989ರಲ್ಲಿ) ನಡು-ನಾಡಿನ (international) ಕ್ರಿಕೆಟ್ ಆಡಲು ಮೊದಲು ಮಾಡಿದ ಸಚಿನ್ ಸಾವಿರಾರು ಓಟಗಳನ್ನು ಕಲೆಹಾಕಿ ಸಾಕಶ್ಟು ದಾಕಲೆಗಳನ್ನು ಹುಟ್ಟುಹಾಕಿದ್ದಾರೆ. ಈಗ ಅವರಿಗೆ ನಲವತ್ತು ವರುಶ ವಯಸ್ಸು.

ಈಗ ವಿಶ್ವ ಕ್ರಿಕೆಟ್ಟಿನಲ್ಲಿ ಕಡುಹೆಚ್ಚು ನೂರುಗಳು ಮತ್ತು ಓಟಗಳನ್ನು ಗಳಿಸಿರುವವರು ಸಚಿನ್ ತೆಂಡುಲ್ಕರ್. ಈ ಕೆಳಗಿನ ಪಟ್ಟಿಯನ್ನು ಗಮನಿಸಿದರೆ ಅವರ ಸಾದನೆ ಎಂತಹುದು ಎಂದು ತಿಳಿಯುತ್ತದೆ.

ಒಂದು-ದಿನ ಆಟ(ODI) ಟೆಸ್ಟ್ (Test) ಎರಡೂ ಸೇರಿ
ಆಟಗಳು(Matches) 463 199 662
ಓಟಗಳು (Runs) 18426 15847 34273
ನೂರುಗಳು(Centuries) 49 51 100
ಸರಾಸರಿ(Average) 44.83 53.71
ಕಡು ಹೆಚ್ಚು ಸ್ಕೋರ್(Highest score) 200* 248*

ಈ ಕೆಳಗಿನ ಪಟ್ಟಿಯಲ್ಲಿ ಅವರ ಕೆಲವು ಕುತೂಹಲಕಾರಿ ದಾಕಲೆಗಳನ್ನು ಕೊಡಲಾಗಿದೆ.

ತನ್ನ 21 ನೇ ಹುಟ್ಟುಹಬ್ಬಕ್ಕೆ ಮುನ್ನ ಗಳಿಸಿದ ನೂರುಗಳು 7
ಒಂದೇ ವರುಶದಲ್ಲಿ ಗಳಿಸಿದ ಕಡು-ಹೆಚ್ಚು ಓಟಗಳು 1894 (1998ರಲ್ಲಿ)
90 ಮತ್ತು 100 ರ ನಡುವೆ ಎಶ್ಟು ಸರತಿ ಅವ್ಟ್ ಆಗಿದ್ದಾರೆ 27 ( ಟೆಸ್ಟ್ -10; ಒಂದು-ದಿನ – 17)
ವಿಶ್ವ ಕಪ್ಪಿನಲ್ಲಿ ಗಳಿಸಿರುವ ಕಡು-ಹೆಚ್ಚು ಓಟಗಳು 673 (2003 ವಿಶ್ವ ಕಪ್)
ಒಂದು ತಂಡಕ್ಕಾಗಿ ಕಡು ಹೆಚ್ಚು ಓಟಗಳು ವಿಶ್ವ ಕಪ್ಪಿನಲ್ಲಿ 523 – 1996; 673 – 2003; 482 – 2011.
ಪಾಲ್ಗೊಂಡ ವಿಶ್ವ್ ಕಪ್‌ಗಳು 6
ತಡೆಯಿಲ್ಲದೆ ಆಡಿದ ಒಂದು ದಿನ ಆಟಗಳು 185 (1990ರಿಂದ – 1998ವರೆಗೆ)
ಒಟ್ಟು ಪಂದ್ಯದ ಆಟಗಾರ ಮೆಚ್ಚುಗೆಗಳು (ಒಂದು-ದಿನದ ಆಟ) 62
10000 ಓಟಗಳನ್ನು ಗಳಿಸಲು ತೆಗೆದುಕೊಂಡ ಇನ್ನಿಂಗ್ಸ್ 259
ಹೊರನೆಲಗಳಲ್ಲಿ ಆಡಿದ ಟೆಸ್ಟುಗಳಲ್ಲಿ ಗಳಿಸಿದ ಓಟಗಳು 8705
ಟೆಸ್ಟು ಪಂದ್ಯಗಳನ್ನು ಆಡಿದ ಒಟ್ಟು ಆಟದ ಬಯಲುಗಳು 59
ಟೂರ್‍ನಮೆಂಟ್ ಪಯ್ನಲ್ಗಳಲ್ಲಿ ಗಳಿಸಿದ ಸರಾಸರಿ 54.44
ತನ್ನ ಹುಟ್ಟುಹಬ್ಬದಂದು ಗಳಿಸಿದ ಕಡು-ಹೆಚ್ಚು ಓಟಗಳು 134 ಆಸ್ಟ್ರೇಲಿಯಾ ಎದುರು 1998ರಲ್ಲಿ

(ಮಾಹಿತಿ ಸೆಲೆ: cricinfo.com)
(ಚಿತ್ರ ಸೆಲೆ: hotwallpaperz.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: