ತಾಂಜೇನಿಯಾದಲ್ಲಿ ಒಂದು ದಿನದ ಪ್ರವಾಸ

– ಪ್ರಮೋದ ಕುಲಕರ‍್ಣಿ.

IMG_20131020_111350

ದಾರ್‍-ಈಸ್-ಸಲಾಮ್ (ತಾಂಜೇನಿಯಾ) ಎಂದರೆ ಕೂಡಲೇ ನಮ್ಮ ಕಣ್ಣು ಮುಂದೆ ಬರುವುದು ಹಲವಾರು ಸಂದರ ಸಮುದ್ರ ತೀರಗಳ ಅಹಂಗಮ ನೋಟ, ಅದರಲ್ಲಿ ಚಂಗಾಣೀ ಬೀಚ್ ಕೂಡ ಒಂದು. ಕಳೆದ ಅಕ್ಟೋಬರ್ 20, 2013ರಂದು “ಕಾವೇರಿ ಕನ್ನಡ ಸಂಗ – ದಾರ್‍-ಈಸ್-ಸಲಾಮ್” ವತಿಯಿಂದ ಒಂದು ದಿನದ ಪ್ರವಾಸವನ್ನು ಏರ್‍ಪಡಿಸಲಾಗಿತ್ತು. ಈ ಒಂದು ದಿನದ ಪ್ರವಾಸಕ್ಕೋಸ್ಕರ ಸುಮಾರು ಹದಿನಯ್ದು ದಿನದ ಮೊದಲೇ ಯೋಜನೆ ತಯಾರಾಗಿತ್ತು. ನಾನಂತೂ ಆ ಒಂದು ದಿನದ ಪ್ರವಾಸಕ್ಕೆ ತುಂಬಾ ಕಾತುರನಾಗಿದ್ದೆನು.

ಎರಡು ದಿನಗಳ ಮೊದಲೇ, ಅಂದರೆ ಅಕ್ಟೋಬರ್ 18ರಂದು, ರೆಸಾರ್‍ಟಿನ ಬಗ್ಗೆ ಮತ್ತು ದಾರಿಯ ಬಗ್ಗೆ ಮಿಂಚು ಸಂದೇಶವನ್ನು ಎಲ್ಲರಿಗೂ ರವಾನಿಸಲಾಗಿತ್ತು. ನಾವು ಆವತ್ತು ಪೆರ್‍ರಿಯನ್ನು 8.30ಕ್ಕೆ ತಲುಪಿದೆವು. ಆನಂತರದ ಹಾದಿ ಅಂದುಕೊಂಡಿದ್ದಶ್ಟು ಚೆನ್ನಾಗಿರಲಿಲ್ಲ. ಏಕೆಂದರೆ ಅದು ಕಾಡಿನ ರಸ್ತೆ ಆಗಿತ್ತು. ಆ ಬೀಚು ಪೆರ್‍ರಿಯಿಂದ ಸುಮಾರು 35 ಕಿ.ಮಿ. ಅಂತರದಲ್ಲಿದೆ, ರೆಸಾರ್‍ಟನ್ನು ತಲುಪಲು ನಮಗೆ ಸರಿಯಾಗಿ ಒಂದುವರೆ ಗಂಟೆಗಳು ಬೇಕಾದವು.

ಆನಂತರ ಕಾರಿನಿಂದ ಇಳಿದ ಪ್ರತಿಯೊಬ್ಬರ ಬಾಯಿಂದ ಆ ಸ್ತಳದ ಬಗ್ಗೆ “ಆಹಾ ಎಶ್ಟು ಸಂದರ ಈ ಜಾಗ” ಎನ್ನುವ ಮಾತು ಮಾಮೂಲಾಗಿ ಬಿಟ್ಟಿತ್ತು. ಎಲ್ಲರನ್ನು ಬರ ಮಾಡಿಕೊಂಡು ತಾಜಾ ಹಣ್ಣಿನ ರಸವನ್ನು ನೀಡಲು ಆ ದೇಶದ ಒಬ್ಬ ಡಾಡಾ (ತಂಗಿ) ಇದ್ದಳು. ನನಗಂತೂ ಇದು ಒಂದು ಹೊಸ ಅನುಬವ ಆಗಿತ್ತು. ಯಾಕೆಂದರೆ ನಾನು ಆಗಶ್ಟೇ ಹೊಸದಾಗಿ ಆ ಸಂಗದ ಸದಸ್ಯತ್ವವನ್ನು ಹೊಂದಿದ್ದೆನು ಮತ್ತು ಹೊಸ-ಹೊಸ ವ್ಯಕ್ತಿಗಳ ಪರಿಚಯದ ಜೊತೆಗೆ “ಬಾರೊ – ಹೋಗೋ” ಎನ್ನುವಶ್ಟು ಸಲಿಗೆ ಬೆಳೆಯಿತು.

ಆ ಬೇಚಿನ ಚೆಲುವಿಗೆ ಮರುಳಾಗಿ ಸುಮಾರು ಅರ್‍ದ ಗಂಟೆ ತಿರುಗಾಡಲು ಒಬ್ಬನೇ ಹೊರಟು ಹೋದೆನು. ಆಮೇಲೆ ಸಂಗದ ಕಾರ್‍ಯದರ್‍ಶಿಗಳು ಸಂಗದ ಹೊಸ ಸದಸ್ಯರನ್ನು ಬರ ಮಾಡಿ ಕೊಳ್ಳುತ್ತಾ ಜೊತೆಗೆ ಕಮಿಟಿಯ ಸದಸ್ಯರನ್ನು ಕೂಡ ಪರಿಚಯ ಮಾಡಿಸಿದರು. ಇದೆಲ್ಲಾ ಮುಗಿಯುವ ಹೊತ್ತಿಗೆ ಗಂಟೆ 11.30 ಆಗಿತ್ತು. ಆ ಹೊತ್ತಿಗೆ ಸಂಗದ ಪ್ರತಿಯೊಬ್ಬ ಸದಸ್ಯರಿಗೂ ಹೊಟ್ಟೆ ಚುರ್ ಎನ್ನುತ್ತಿತ್ತು. ಆದ್ದರಿಂದ ಪ್ರತಿಯೊಬ್ಬರು ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಕೆಲವರು ತಮಗೆ ಮನ ಬಂದಂತೆ ತಿರುಗಾಡಲು, ಇನ್ನು ಕೆಲವರು ಹರಟೆ, ಜೋಕ್ಸಗಳನ್ನು ಹೇಳಲು ಪ್ರಾರಂಬಿಸಿದರು. ಮತ್ತೆ ಉಳಿದವರು ವಿಶಾಲವಾದ ಸಮುದ್ರದತ್ತ ನಡೆದರು, ಅವರಲ್ಲಿ ನಾನೂ ಒಬ್ಬ.

ಸಮುದ್ರದಿಂದ ಹೊರಬಂದ ನಂತರ ನಮಗಾಗಿ ಸ್ವಾದಿಶ್ಟ ಸವಿ ಬೋಜನ ತಯಾರಾಗಿ ಕಯ್ ಬೀಸಿ ಕರೆಯುತ್ತಿತ್ತು, ಬೊಜನದಲ್ಲಿ ವೆಜ್ ಮತ್ತು ನಾನ್ ವೆಜ್ ಎರಡೂ ಸಿದ್ದಪಡಿಸಲಾಗಿತ್ತು. ಆದ್ದರಿಂದ ಸದಸ್ಯರು ಸಕತ್ತಾಗಿ ಬೋಜನ ಸವಿದು ಸ್ವಲ್ಪ ವಿಶ್ರಾಂತಿಯನ್ನು ತಗೆದುಕೊಂಡು ಆನಂತರ ಎಲ್ಲರೂ ವಯಸ್ಸಿನ ಬೇದವಿಲ್ಲದೇ ಆಟವಾಡಿ ಸುಮಾರು 5.30 ಕ್ಕೆ ಆ ಸುಂದರ ತಾಣದಿಂದ ಮನಸ್ಸಿಲ್ಲದ ಮನಸ್ಸಿನಿಂದ ನಿರ್‍ಗಮಿಸಿದೆವು.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. nanobba kannadiga.bareyalu ishta paduttene.yaradaru sahay hasta chachuvira?

ಅನಿಸಿಕೆ ಬರೆಯಿರಿ: