ನನ್ನ ಕವಿತೆ

– ಹರ‍್ಶಿತ್ ಮಂಜುನಾತ್.

Poetry-Writing

ಹೊಸ ಕವಿತೆಯೊಂದನ್ನು ಬರೆಯಲೇಬೇಕೆಂದು ಹೊರಟೆ
ಪದ ಹೊಮ್ಮಿಸೋ ಕುಂಚಕ್ಕೆ ಕಾಡಿದೆ ಪದಗಳ ಕೊರತೆ

ಇನ್ನೂ ಏನನ್ನೂ ಬರೆಯದ ಕಾಲಿ ಹಾಳೆಯಲಿ
ಎಲ್ಲೂ ಇರದ ಪದಗಳ ನಾ ಹೇಗೆ ಹುಡುಕಲಿ

ಬಾರಿ ಬಾರಿ ನೆನೆದು ನನ್ನ ನೆನಪುಗಳನ್ನೆಲ್ಲಾ ಬಸಿದೆ
ನನಗರಿವಿಲ್ಲದಂತೆಯೇ ಹರಿದಿದೆ ಈ ನನ್ನ ಕವಿತೆ

ಪ್ರತಿ ಮಾತ ಸಾಲಾಗಿಸಿ ನಾ ಬರೆಯ ಹೊರಟಾಗಲೂ
ಬಾವನೆಗಳೇ ಕಟ್ಟುತ್ತಿದೆ ಪದಗಳ ಹೊಸ ಮಹಲು

ಹೇಗೆ ಬರೆದರೂ ಪದಗಳ ಹುರುಳೆ ಕವಿತೆಯ ಜೀವ
ಆ ಪದಗಳೇ ಕವಿ ಎದೆಯಿಂದ ಜಿನುಗೋ ಸವಿ ಬಾವ

ಅಂದುಕೊಂಡಂತೆಯೇ ಎಂದೂ ಬರೆಯಲಾಗದು ಇದ
ಪದ ಬಾವ ಕೆಟ್ಟರೆ ಸರಿಯುವುದು ಕವಿತೆಯ ಸ್ವಾದ

ಕವಿ ಮನಕ್ಕೇ ತೋಚದ್ದನ್ನು ನಾ ಹೇಗೆ ಬರೆಯಲಿ
ಬರೆಯುವ ಹಂಬಲದಿ ತೋಚಿದ್ದನ್ನು ನಾ ಹೇಗೆ ಮರೆಯಲಿ

ಮರುಳ ನಾನು, ನನ್ನ ಕವಿತೆಗಳೆಲ್ಲಾ ಎಂದೂ ಹೀಗೆ
ಗಾಳಿಯಲಿ ಗೀಚ ಹೊರಟರೂ ಏನೋ ಒಂದು ಬೇಗೆ

ಕಾಣದ ಕನಸುಗಳ ಕವಿತೆಯಲಿ ತುಂಬುವೆನೆಂಬ ಚಯ್ತನ್ಯ
ಮರುತಿರುಗಿ ನೋಡಿದರೆ ಈಡೀ ನನ್ನ ಕವಿತಯೇ ಶೂನ್ಯ…!

(ಚಿತ್ರ: www.mrchoytraveller.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: