ಇಂಡೋನೇಶಿಯಾದಲ್ಲಿ ಅತಿ ಹೆಚ್ಚು ಕಾಡು ಮರಗಳ ಕಡಿತ

– ಸುಜಯೀಂದ್ರ ವೆಂ.ರಾ.

ಇಂಡೋನೇಶಿಯಾ ಕಾಡುಗಳನ್ನು ಕಳೆದುಕೊಳ್ಳುತ್ತಿದೆ, ಹೀಗೆಂದು ಗೂಗಲ್ ಬೂಪಟ ತೋರಿಸುತ್ತಿದೆ. ಇದನ್ನು ಇಂಡೋನೇಶಿಯಾದ ಮುಂಗಾಬೇ ಮಿಂದಾಣ ವರದಿ ಮಾಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಕಳೆದ 12 ವರುಶಗಳಲ್ಲಿ ಇಂಡೋನೇಶಿಯಾದಲ್ಲಿ ಅತಿ ವೇಗದಲ್ಲಿ ಕಾಡುಮರಗಳನ್ನು ಕಡಿಯಲಾಗುತ್ತಿದೆ.

ಇದರ ಅದ್ಯಯನವನ್ನು ಮ್ಯಾಟ್ ಹಾನ್ಸೆನ್ (ಮೆರಿಲ್ಯಾಂಡ್ ವಿಶ್ವವಿದ್ಯಾಲಯ) ನಡೆಸಿದಾಗ ಅವರಿಗೆ ಸಿಕ್ಕ ಮಾಹಿತಿ ಏನೆಂದರೆ, ಇಂಡೋನೇಶಿಯಾ 15.8 ಲಕ್ಶ ಹೆಕ್ಟೆರ್‍ ಕಾಡುಗಳನ್ನು 2000 ಮತ್ತು 2012ರ ನಡುವೆ ಕಳೆದುಕೊಂಡಿದೆ. ಆದ್ದರಿಂದ ಅದನ್ನು ಅತಿ ಹೆಚ್ಚು ಕಾಡುಗಳನ್ನು ಕಳೆದುಕೊಂಡ ದೇಶಗಳಾದ ರಶ್ಯಾ, ಬ್ರೆಜಿಲ್, ಸಂಯುಕ್ತ ರಾಜ್ಯ(ಅಮೇರಿಕಾ) ಮತ್ತು ಕೆನಡಾದ ಸಾಲಿನಲ್ಲಿ 5ನೇ ಸ್ತಾನದಲ್ಲಿ ಇರಿಸಿದೆ. ಇದೇ ಹೊತ್ತಿನಲ್ಲಿ 7ಲಕ್ಶ ಹೆಕ್ಟೆರ್‍ ಕಾಡುಗಳನ್ನು ಕೂಡ ಬೆಳೆಯಲಾಗಿದೆಯಂತೆ.

indonesia_mungabay

ಮೇಲಿನ ಸಾಲಿನಲ್ಲಿರುವ ಅಯ್ದು ಕಾಡುಗಳುಳ್ಳ ದೇಶಗಳ ಪಯ್ಕಿ, ಇಂಡೋನೇಶಿಯಾಗೆ ನೂರರ ಲೆಕ್ಕದಲ್ಲಿ ಹೆಚ್ಚಿನ ಬೆಲೆಯಲ್ಲಿ ಕಾಡುಗಳನ್ನು ಕಳೆದುಕೊಂಡಿದೆ. ಅಂದರೆ ನೂರರ ಲೆಕ್ಕದಲ್ಲಿ 8.4ರಶ್ಟು ಕಾಡುಗಳ ಸವೆತ. ಹೋಲಿಕೆ ಮಾಡಿದಲ್ಲಿ, ಬ್ರೆಜಿಲ್ ಅದರ ಕೇವಲ ಅರ‍್ದದಶ್ಟು ಕಳೆದುಕೊಂಡಿದೆ. ನೂರಕ್ಕೆ 98ರಶ್ಟು ಕಾಡುಗಳ ಸವೆತ ದಟ್ಟವಾದ ಕಾಡುಗಳುಳ್ಳ ಪ್ರದೇಶಗಳಾದ ಸುಮಾತ್ರ ಮತ್ತು ಕಲಿಮನ್ಟನ್ ನಲ್ಲಿ ನಡೆದಿದೆ. ಈ ಜಾಗದಲ್ಲಿ ಕಯ್ಗಾರಿಕಾ ಮರಗಳ ನೆಡುವಿಕೆ ಮತ್ತು ಎಣ್ಣೆತರುವ ಪಾಮ್ ನೆಲೆಸೊಮ್ಮು(estates)ಗಳು 20 ವರುಶಗಳಲ್ಲಿ ಬೇಗ ಬೇಗನೆ ಚೆನ್ನಾಗಿ ಬೆಳೆದಿತ್ತು. ರಿಯಾವ್ ಪ್ರದೇಶ ಹೆಚ್ಚು ಬಾದಿತ ಪ್ರದೇಶವಾಗಿದೆ. ಅದನ್ನು ನೀವು ತಿಟ್ಟದಲ್ಲಿ ಕಾಣಬಹುದು.

ಕಾಡುಗಳ ಕಡಿಯುವಿಕೆ ಈ ದೇಶದಲ್ಲಿ ಹಾಗೇಯೇ ಬೆಳೆಯಿತು. 1990ರ ದೇಶದೆಲ್ಲೆಡೆ 65ಲಕ್ಶ ಹೆಕ್ಟೆರ್‍ ಮೊದಲಿನ ಹಂತದ ಕಾಡು ಪ್ರದೇಶಗಳ, ಕೊಳೆಸೊಪ್ಪುನೆಲಗಳ (peatlands), ಕಾಪಾಡಲ್ಪಟ್ಟ ನೆಲಗಳ ಹೊಸದಾಗಿ ಕಡಿಯಲು ಎಡೆಗೊಡುವಿಕೆಗೆ(concessions) ಇದ್ದ ತಡೆಯ ನಡುವೆಯೂ 2011 ಇಲ್ಲವೆ 2012ರಲ್ಲಿ ಅತಿ ಹೆಚ್ಚು ಕಾಡುಗಳನ್ನು ಕಳೆದುಕೊಂಡಿತು. ಕಾಡರಿಮೆ ತಡೆಹಿಡಿತ(forestry moratorium)ಕ್ಕೆ ತಿಳಿಹ ಸುಳಿವು ಕೊಡುವುದೇನೆಂದರೆ, ದೇಶದ ಕಾಡುಗಳ ಕಾಪಾಡಲು, ಇಂಗಾಲದ ಹರಡುವಿಕೆ ಕಡಿಮೆ ಮಾಡಲು ಇದ್ದ ಕಟ್ಟಲೆಗಳನ್ನು, ಬದ್ದತೆಯನ್ನು ಸರಿಯಾಗಿ ಜಾರಿಗೆ ತರುವಲ್ಲಿ ಸೋತಿದೆ.

hansenvsmof_indonesia

ಇಂದಿನ ಕಾಡರಿಮೆ ಬಿಡುಗಡೆ ಮಾಡಿದ ಪಲಿತಾಂಶಗಳು, 2013 ರಲ್ಲಿ ಕಾಡರಿಮೆ ಸಚಿವಾಲಯ ಬಿಡುಗಡೆ ಮಾಡಿದ ತಿಳಿಹಕ್ಕಿಂತ, ಕಾಡುಗಳ ಹಾಳಾಗುವಿಕೆಯನ್ನು ಹೆಚ್ಚಾಗಿರುವುದನ್ನು ಎತ್ತಿ ತೋರುತ್ತಿದೆ. ದೇಶದ ಸಚಿವಾಲಯದ ಅಂದಾಜು ಮತ್ತು ಕಾಡರಿಮೆಯ ಅಂದಾಜಿಗೆ ಹೋಲಿಕೆ ತಂದಾಗ, ಅದಿಕಾರಿಗಳು ಅರೆ ಬರೆ ಮಾಹಿತಿ ನೀಡಿದಂತಿದೆ. ಕಾಡರಿಮೆ ಸಚಿವಾಲಯದ ಅಂದಾಜು, 2005/2006ರ ಮಾಹಿತಿಗೆ ಹೋಲಿಸಿದರೆ ಕಾಡುಗಳ ಸವೆತ ಕಡಿಮೆಯಾಗಿದೆ. ಅದು ನೋಡಿಕೊಳ್ಳುವ ನೆಲದ ಹೊರಗಿನ ನೆಲದಲ್ಲಿನ ಕಾಡುಗಳ ಸವೆತವನ್ನು ಅಲ್ಲಗಳೆದಿದೆ ಮತ್ತು ನಯ್ಸರಿಗಿಕ ಕಾಡುಗಳನ್ನು ಮರಮಟ್ಟುಗಳ (timber) ಕಾಡನ್ನಾಗಿ ಮಾರ‍್ಪಡಿಸಿರುವುದನ್ನು ತಳ್ಳಿಹಾಕಿದೆ.

ಹೊಸ ತಿಳಿಹದ (data) 65 ಲಕ್ಶ ಹೆಕ್ಟೆರ್‍ ಕಾಡುನೆಲದ ಮಾಹಿತಿ ನಾಸಾದ ಲ್ಯಾಂಡ್ ಸ್ಯಾಟ್ ಉಪಗ್ರಹದ ಗೂಗಲ್ ಅರ‍್ತ್ ಎಂಜಿನ್ ತೆಗೆದ ತಿಟ್ಟಗಳ ಮೇಲೆ ನಿಂತಿರುವುದು. ಗೂಗಲ್ ಅರ‍್ತ್ ಎಂಜಿನ್ ಒಂದು ಎಣಕದ ಸಾದನ ಅದನ್ನು ನಡೆಸುತ್ತಿರುವುದು ಮಿಂಬಲೆಯ ದಿಗ್ಗಜ. ತಿಳಿಹದ ತಿಳುವಳಿಕೆ(comprehensive) ನೀಡುವ ತಿಳಿಹತಳ(database)ವನ್ನು ಒಡನಾಟ ತೋರಿಸುವ ಜಾಗತಿಕ ಕಾಡಿನ ಬೂಪಟವು ಗುರುತಾಗಿದೆ. ಈ ಸಾದನ ಜನರಿಗೆ ಉಚಿತವಾಗಿ ಇಲ್ಲಿ ದೊರೆಯುತ್ತದೆ.

1114-riau-hansen

ಹಾನ್ಸೆನ್, ಇವರು ಹಲವು ಬರಹಗಳನ್ನು ಕಾಡುಗಳ ಸವೆತದ ನಡೆಯ ಮೇಲೆ ಬರೆದಿದ್ದಾರೆ. ಅವರು ಹೇಳುವುದೇನೆಂದರೆ,

ಬೂಪಟ ಕಾಡುಗಳ ಕಳೆದುಕೊಳ್ಳುವಿಕೆ ತಡೆಯುವಲ್ಲಿ ದೇಶಗಳಲ್ಲಿ ಸರಿಯಾದ ಕಟ್ಟಲೆಗಳು ಬರಲು ನೆರವಾಗಬಹುದು ಎಂದು ನಾನು ನಂಬುತ್ತೇನೆ. ಇದೇ ಮೊದಲಬಾರಿಗೆ ಬದಲಾದ ಕಾಡುಗಳ ಬೂಪಟವನ್ನು ಜಾಗತಿಕವಾಗಿಯೂ ಹಾಗೂ ಪ್ರಾದೇಶಿಕವಾಗಿಯೂ ಹೊಂದಿಸುತ್ತಿರುವುದು. ಬ್ರೆಜಿಲ್ ಕೂಡ ಲ್ಯಾಂಡ್ ಸ್ಯಾಟ್ ತಿಳಿಹವನ್ನು ಬಳಸಿ ಕಾಡುಗಳ ಸವೆತದ ಹಾದಿಯನ್ನು ನೋಡಲು ಹೊರಟಿತು. ಮತ್ತೆ ಇದರ ಮೇಲೆ ತನ್ನ ಕಾಡುಗಳ ಕಾಪಾಡುವ ಕಟ್ಟಲೆಯಲ್ಲಿ ಬದಲಾವಣೆ ತಂದಿತು, ಆಚರಣೆಗೂ ಮಾಡಿತು.

ಇದರ ಜೊತೆಗೆ ಅವರು ಮಾಡಿದ ಬದಲಾವಣೆಯ ಮತ್ತು ಗೆಲುವಿನ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡಿತು. ಇಂತಹ ತಿಳಿಹಗಳು ಸಾಮಾನ್ಯವಾಗಿ ಸಿಗಲು ಆಗುವುದಿಲ್ಲ. ಆದರೆ ಈಗ ನಮ್ಮ ಜಗತ್ತಿನ ಕಾಡುಗಳ ಬದಲಾವಣೆಯ ಬೂಪಟದಿಂದಾಗಿ ಎಲ್ಲಾ ದೇಶಗಳು ತಮ್ಮ ದೇಶದ ಜೊತೆಗೆ ಬೇರೆ ದೇಶಗಳ ಕಾಡುಗಳ ಸವೆತದ ಬಗ್ಗೆ ತಿಳಿಯುವಂತಾಗಿದೆ.

ಇಂಡೋನೇಶಿಯಾದ ಕಾಡುಗಳ ಸವೆತದಿಂದ ಇಂದಿನ ಬಿರುಸೋಟದ ಜಗತ್ತು ತಿಳಿಯಬೇಕಾದುದೇನೆಂದರೆ, ಕಾಡುಗಳ ಹಾಳಾಗುವಿಕೆಯಿಂದ ತಮ್ಮ ನೆಲದ ಪಲವತ್ತತೆ, ನೀರಿನ ಸಂಪನ್ಮೂಲವೂ ಕೂಡ ಹಾಳಾಗುತ್ತದೆ. ಮರ-ಗಿಡಗಳು ನಮ್ಮ ನೆಲದ ಉಸಿರಿಗಳ ಉಸಿರಾಗಿವೆ, ತಮ್ಮ ದಿನದ ಕೂಳನ್ನು ಕೊಡುವಂತವಾಗಿವೆ, ನೆಮ್ಮದಿಯಿಂದ ಮಲುಗುವಂತೆ ಮಾಡಿವೆ. ಬೆಳಗಾದರೆ ಏಳುವ, ಇರುಳಾದರೆ ಕೂಳು ತಯಾರಿಸುವ ಇವುಗಳ ಹಾಳಾಗುವಿಕೆಯಿಂದ ಮಳೆಯೂ ಇಲ್ಲ, ಬೆಳೆಯೂ ಇಲ್ಲ, ಒಳ್ಳೆಯ ಗಾಳಿಯೂ ಇಲ್ಲ.

ಆದ್ದರಿಂದ ನಮ್ಮ ಉಸಿರು, ಕೂಳಾಗಿರುವ, ಮಾತು ಬರದ ಮರ-ಗಿಡಗಳು ನೆಮ್ಮದಿಯಿಂದ ಮಲಗಬೇಕಲ್ಲವೆ? ಅವುಗಳನ್ನು ಉಳಿಸಿ-ಬೆಳೆಸುವುದು ನಮ್ಮ ನಿಮ್ಮೆಲ್ಲರ ಮುಕ್ಯವಾದ ಕೆಲಸವಲ್ಲವೆ? ಅದರಲ್ಲು ನಮ್ಮಿಂದಲೇ ಆರಿಸಿಹೋದ ರಾಜಕೀಯ ಪ್ರತಿನಿದಿಗಳ ಮೊದಲ ಕೆಲಸವಲ್ಲವೇ?

(ತಿಳಿವಿನ ಮತ್ತು ತಿಟ್ಟಸೆಲೆ: news.mongabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: