ಮಾವಿನಕಾಯಿ ಉಪ್ಪಿನಕಾಯಿ

ನಾಗಶ್ರೀ.

uppinakaayi
ಯುಗಾದಿ ಹಬ್ಬದ ಬಂದ್ರೆ ಎಲ್ಲೆಲ್ಲು ಎಳೆ ಮಾವಿನಕಾಯಿಗಳು ಕಾಣತ್ವೆ! ಮಾವಿನಕಾಯಿಯಲ್ಲಿ ಮಾಡುವ ಎಲ್ಲ ಕಾದ್ಯಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಅಂದ್ರೆ ಉಪ್ಪಿನಕಾಯಿ. ಚಿಕ್ಕ ವಯಸ್ಸಿನಲ್ಲಿ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಾಗ ಜಾಡಿ ಜಾಡಿಗಳಲ್ಲಿ ಅಜ್ಜಿ ಉಪ್ಪಿನಕಾಯಿ ಮಾಡಿಟ್ಟಿರೋರು, ಅದನ್ನ ನೆನಸಿಕೊಳ್ಳುತಾ ಅಜ್ಜಿ ಮಾಡ್ತಿದ್ದ ಉಪ್ಪಿನಕಾಯಿ ರೀತಿ ಇಲ್ಲಿ ಬರಿತಿದೀನಿ…

ಬೇಕಾಗುವ ಸಾಮಾಗ್ರಿಗಳು:

  • 3 – ಮಾವಿನಕಾಯಿ
  • 1 ಲೋಟ – ಕಲ್ಲುಪ್ಪು
  • 15 – 20 – ಒಣ ಮೆಣಸಿನಕಾಯಿ (ಬ್ಯಾಡಗಿ )
  • 2 ಚಮಚ – ಸಾಸಿವೆ
  • 1/2 ಚಮಚ – ಮೆಂತ್ಯ
  • ಚಿಟಿಕೆ ಇಂಗು

1. ಮಾವಿನಕಾಯಿಗಳನ್ನು ಚೆನ್ನಾಗಿ ನೀರಲ್ಲಿ ತೊಳೆದು ಒರಸಿ ಸ್ವಲ್ಪ ಹೊತ್ತು ಒಣಗಿಸಿ. ಅರ‍್ದ ಇಂಚು ಗಾತ್ರದ ಹೋಳುಗಳನ್ನು ಮಾಡಿಕೊಳ್ಳಿ

2. ಒಂದು ಒಣಗಿದ ಜಾಡಿಯಲ್ಲಿ , ಎರಡು ಚಮಚ ಉಪ್ಪು ಹಾಕಿ ಮಾವಿನಕಾಯಿ ಹೋಳುಗಳನ್ನು ಹಾಕಿ ನಂತರ ಮತ್ತೆ ಉಪ್ಪು ಹಾಕಿ ಇನ್ನಷ್ಟು ಮಾವಿನಕಾಯಿ ಹೋಳುಗಳನ್ನ ಹಾಕಿ, ಹೀಗೆ ಎಲ್ಲ ಹೋಳುಗಳು ಮುಗಿಯುವವ ತನಕ ಮಾಡಿ

3. ಜಾಡಿಯ ಮುಚ್ಚಳ ಹಾಕಿ ಒಂದೆರಡು ದಿನ ಕಳೆಯಲು ಬಿಡಿ

ಮಾವಿನಕಾಯಿ ಕಳೆತ ಬಳಿಕ …

4. ಸಾಸಿವೆ, ಮೆಂತ್ಯ ಮತ್ತೆ ಮೆಣಸಿನಕಾಯಿಯನ್ನ ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ

5. ಕಳೆತ ಮಾವಿನಕಾಯಿ ಹೋಳುಗಳಿಗೆ, ಮೇಲೆ ಮಾಡಿಕೊಂಡ, ಪುಡಿ ಹಾಕಿ ಚೆನ್ನಾಗಿ ಕಲಸಿ

6. ಮತ್ತೆ ಜಾಡಿಯೊಳಗೆ ತುಂಬಿ ಕಳೆಯಲು ಬಿಡಿ. ಇಷ್ಟವಾದರೆ ಈಗಲೂ ಉಪ್ಪಿನಕಾಯಿಯನ್ನ ತಿನ್ನಬಹುದು.

ಒಂದೆರಡು ದಿನಗಳ ಬಳಿಕ..

7. ಇಂಗು ಮತ್ತೆ ಸಾಸಿವೆ ಒಗ್ಗರಣೆ ಹಾಕಿದರೆ ಉಪ್ಪಿನಕಾಯಿ ಸವಿಯಲು ಸಿದ್ದ!

ಕಿವಿಮಾತು

  • ಉಪ್ಪಿನಕಾಯಿಗೆ ರಸ ಕಮ್ಮಿ ಆಗಿದಲ್ಲಿ , ಸ್ವಲ್ಪ ಬಿಸಿ ನೀರಿಗೆ ಉಪ್ಪು ಹಾಕಿ ಪೂರ‍್ತಿಯಾಗಿ ಆರಿದ ನಂತರ ಉಪ್ಪಿನಕಾಯಿಗೆ ಹಾಕಿ
  • ಯಾವಾಗಲು ಒಣಗಿದ ಪಾತ್ರೆ, ಜಾಡಿಯನ್ನು ಬಳಸಿ. ನೀರು ಬಿದ್ದರೆ ಉಪ್ಪಿನಕಾಯಿ ಹಾಳಾಗುವ ಸಾದ್ಯತೆ ಹೆಚ್ಚು

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. anujvalmiki says:

    ಚೆನ್ನಾಗಿದೆ.. ಹಲವು ಅಲ್ಪ ತಿದ್ದುಪಡಿಗಳು – ಎಲ್ಲೆಲ್ಲೂ, ಖಾದ್ಯ, ಆದಲ್ಲಿ, ಪೂರ್ತಿಯಾಗಿ, ಯಾವಾಗಲೂ, ಸಾಧ್ಯತೆ

ಅನಿಸಿಕೆ ಬರೆಯಿರಿ: