’ಹೊನಲು’ ಹುಟ್ಟುಹಬ್ಬ – ಅಣಿಗಾರರೊಡನೆ ಎರಡು ಮಾತು

– ಹೊನಲು ತಂಡ

’ಹೊನಲು’ ಮಿಂಬಾಗಿಲು ಶುರುವಾಗಿ ಇಂದಿಗೆ ಒಂದು ವರುಶವಾಯಿತು. ಬರವಣಿಗೆಯ ಕನ್ನಡದಲ್ಲಿ ಮೂರು ಮುಕ್ಯವಾದ ಮಾರ‍್ಪಾಡುಗಳನ್ನು ಮಾಡಬೇಕು, ಇಲ್ಲವಾದರೆ ಕನ್ನಡದ ಕೂಡಣವು ಏಳಿಗೆ ಹೊಂದುವುದಿಲ್ಲ ಎಂಬ ಕಾಳಜಿಯಿಂದ ಇದನ್ನು ಏಪ್ರಿಲ್ 15, 2013 ರಂದು ಶುರು ಮಾಡಿದೆವು. ಆ ಮಾರ‍್ಪಾಡುಗಳು ಯಾವುವೆಂದರೆ: ಕನ್ನಡಕ್ಕೆ ಬೇಡದ ಮಹಾಪ್ರಾಣಗಳು, ಋಕಾರ, ಷಕಾರ, ವಿಸರ‍್ಗ, ಔ, ಐ, ಮತ್ತು ಅರ‍್ಕಾವೊತ್ತುಗಳನ್ನು ಬರಿಗೆಮಣೆಯಿಂದ ಬಿಡುವುದು; ಆದಶ್ಟು ಅಚ್ಚಗನ್ನಡದ ಪದಗಳನ್ನೇ ಬಳಸುವುದು ಮತ್ತು ಕಟ್ಟುವುದು; ಹಾಗೂ ಕನ್ನಡದಲ್ಲಿ ಅರಿಮಯ ಬರವಣಿಗೆಯನ್ನು ಗಂಬೀರವಾಗಿ ತೆಗೆದುಕೊಂಡು ಜಗತ್ತಿನ ಯಾವುದೇ ನುಡಿಗೂ ಕಡಿಮೆಯಿಲ್ಲದಂತಾಗಿಸುವುದು. ಈ ಗುರಿಗಳೆಡೆಗೆ ಒಂದು ವರುಶದಿಂದ ಒಂದೇ ಸಮನೆ, ಹೆಚ್ಚು-ಕಡಿಮೆ ಒಂದು ದಿನವೂ ಬಿಡದಂತೆ ನಿಮ್ಮ ನೆರವಿನಿಂದ ಸಾಗಿದ್ದೇವೆ. ಇದು ಹೀಗೇ ಮುಂದುವರೆದರೆ ಕನ್ನಡದ ಕೂಡಣವು ಏಳಿಗೆ ಹೊಂದುವುದರಲ್ಲಿ ಎರಡು ಮಾತಿಲ್ಲ.

ಹುಟ್ಟುಹಬ್ಬದ ಈ ದಿನ ನಮ್ಮ ಮಿಂಬಾಗಿಲಲ್ಲಿ ಹೊರಬರುತ್ತಿರುವ ಬರಹಗಳನ್ನು ಅಣಿಗೊಳಿಸುತ್ತಿರುವವರೆಲ್ಲರೂ ಸೇರಿ ಒಂದು ಚಿಕ್ಕ ಓಡುತಿಟ್ಟವನ್ನು ಮಾಡಿದ್ದೇವೆ, ದಯವಿಟ್ಟು ನೋಡಿ, ಹಂಚಿಕೊಳ್ಳಿ:

[youtube http://www.youtube.com/watch?v=ahBS60cygZA]

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. bahala muda tandikkuva sangati idu.
    ondu varushada kelasa maadide honalu. nanna kaalaji eenendare, iii kaayaka e-oyyugeyallee atava kagadada oyyugeyallee ulidu hoogabaaradu. kannada naadina ondondu halliguu, obbobba maguguu shaale pathyagalalluu baruvantavaagabeeku.

    aa tarahada activism shuru aagideyaa?

  2. honaluvannu nodi tumba kushi ayitu naavu hechagi kannada padagalanne balasona .ethugegagi kashta ennuva sanskritada pada bittu kannada pada bavane e padavannu balasona tamilinante kannadavannu bareyalu hodare lipi anda keduthe adudarinda naavu hechhagi kannadadde ada padagalannu balasona edake adi kavi pampana hothigegalannu odidare saaku

Ramakrishnan Nagaraj ಗೆ ಅನಿಸಿಕೆ ನೀಡಿ Cancel reply