ಹದ್ದಿನ ಕಣ್ಣಿಗೊಂದು ಹೊಸ ಚಳಕ

– ಜಯತೀರ‍್ತ ನಾಡಗವ್ಡ.

ಪ್ರತಿ ವರುಶ ಜಗತ್ತಿನ ಹಲವು ನಾಡುಗಳು ತಮ್ಮ ಮುಂಗಡಲೆಕ್ಕದಲ್ಲಿ ನಾಡಿನ ಕಾಪಿನ ವಿಶಯಕ್ಕೆ ಹೆಚ್ಚುವೆಚ್ಚ ಮಾಡುತ್ತವೆ ಎಂದು ತಿಳಿದು ಬರುತ್ತದೆ. ವಿವಿದ ಹೊಸ ಚಳಕದ ಆಯುದಗಳು ಎಶ್ಟೇ ಬಂದರೂ ಇತ್ತಿಚೀನ ದಿನಗಳಲ್ಲಿ ವಯ್ರಿಗಳ ಮೇಲೆ ಹದ್ದಿನ ಕಣ್ಣಿಟ್ಟು ದಾಳಿ ನಡೆಸುವ ಗೆಂಟಂಕೆಯ ಬಾನೋಡಗಳಿಗೆ(Aerial Drones) ಎಲ್ಲಿಲ್ಲದ ಬೆಲೆ. ಗೆಂಟಂಕೆಯ ಬಾನೋಡಗಳ ಬಗ್ಗೆ ಈಗಾಗಲೇ ಹಲವು ಅರಕೆಗಳು ನಡೆಯುತ್ತಿವೆ.

ಜಗತ್ತಿನ ಹೆಸರುವಾಸಿ ಕಲಿಕೆವೀಡು ಅಮೇರಿಕೆಯ ಮಸಾಚುಸೇಟ್ಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (MIT-Massachusetts Institute of Technology)ಯಲ್ಲಿ ಕೆಲ ಅರಕೆಗಾರರು ಗೆಂಟಂಕೆಯ ಬಾನೋಡಗಳಿಗೆ ಹೆಚ್ಚಿನ ಬಲ ತುಂಬಿದ್ದಾರೆ. ಹಿಂದೆಗಿಂತಲೂ ಕಿರಿದಾದ ಆಕಾರದಲ್ಲಿ ಅಣಿಗೊಳಿಸಿ ಹಲಮಹಡಿಯ ಕಟ್ಟಡಗಳ ಸಂದಿಗಳಲ್ಲೂ ನುಸುಳಿ ಅದರ ಮೇಲೆ ಕಣ್ಣಿಡಬಲ್ಲಂತೆ ಮಾಡಿದ್ದಾರೆ.

ಈ ಮುಂಚಿನ, ಮನುಶ್ಯರಿರದ ಬಾನೋಡಗಳು(Unmanned Aerial Vehicles) ಬ್ಯಾಟರಿ ಬಲ ಕುಗ್ಗಿದಾಗ ಅತವಾ ಇಲ್ಲವಾದ ಪರಿಸ್ತಿತಿಗಳಲ್ಲಿ ಮೂಲಸ್ತಳಕ್ಕೆ ಹಿಂದಿರುಗಿ ಚಾರ‍್ಜ್ ತುಂಬಿಸಿಕೊಂಡು ಮತ್ತೆ ಕೆಲಸಕ್ಕೆ ಸಿದ್ದಗೊಳ್ಳುತ್ತಿದ್ದವು. ಆದರೆ ಇದೀಗ ಇದಕ್ಕೆ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ ಎಮ್.ಆಯ್.ಟಿ ಅರಕೆಗಾರರು. (ಈ ಬರಹದ ಮುಂದಿನ ಬಾಗದಲ್ಲಿ ಸುಲಬವಾಗಲೆಂದು ಗೆಂಬಾ ಎಂದರೆ ಗೆಂಟಕೆಯ ಬಾನೋಡ ಎಂದು ಓದಿಕೊಳ್ಳಿ).

ಈ ಹೊಸ ಚಳಕದ ಮೂಲಕ ಗೆಂಬಾಗಳು ಮಿಂಚು ಹರಿಯುವ ತಂತಿಗಳ(electric cable/wires) ಮೂಲಕ ಚಾರ‍್ಜ್ ಮಾಡಕೊಳ್ಳಲು ಸಾದ್ಯವಾಗಿದೆ. ತಾವಿರುವ ತಾಣದ ಹತ್ತಿರದಲ್ಲಿಯೇ ಕಾಣಸಿಗುವ ಯಾವುದಾದರೂ ಮಿಂಚಿನ ಕಂಬಿಗಳನ್ನು ಜೋಡಿಸುವ ತಂತಿ ಇದ್ದರೆ ಆಯಿತು, ಅವುಗಳ ಮೇಲೆ ಗೆಂಬಾಗಳು ತೆಂಗಿ(perch) ಚಾರ‍್ಜ್ ಮಾಡಿಕೊಂಡು ಕೆಲಸಕ್ಕೆ ಮುಂದುವರಿಯಬಹುದು. ಎಮ್.ಆಯ್.ಟಿ ಯ ಕೆಲವು ಅರಕೆಗಾರರು ಇಂತ ಮಾದರಿಗಳನ್ನು ಬೆಳೆಸಿ ಇವುಗಳನ್ನು ಓರೆಹಚ್ಚುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಹೊಸ ಗೆಂಬಾಗಳು ಹೇಗೆ ಕೆಲಸ ಮಾಡುತ್ತವೆ ನೋಡಿ:

ಗೆಂಬಾಗಳಿಗೂ ಮನುಜರು ಹಾರಡುವ ಬಾನೋಡಗಳಿಗಿರುವಂತೆ ಮುಂಬಾಗದಲ್ಲಿ ಮೂಗು(Nose) ಇರುತ್ತದೆ. ಈ ಮೂಗಿನ ಬಾಗದಲ್ಲಿ ಮಿಂಚಿನ ತಂತಿಯ ಇರುವಿಕೆಯನ್ನು ತಿಳಿಯಬಲ್ಲ ಅರಿವಿಕವೊಂದು(sensor) ನೀಡಲಾಗಿರುತ್ತದೆ. ಈ ಅರಿವಿಕದ ನೆರವಿನಿಂದ ಗೆಂಬಾಗಳಿಗೆ ನಾಲ್ಕುಮೀಟರ್ ದಶ್ಟು ಬಳಿಯಿರುವ ಮಿಂಚಿನ ತಂತಿಗಳ ಮಾಹಿತಿ ದೊರಕುತ್ತದೆ. ಗೆಂಬಾಗಳು ತಮ್ಮ ಮೂಗಿನ ಬಾಗ ತಾಗದಂತೆ ಅದನ್ನು ಮೇಲಕ್ಕೇರಿಸಿ ತಂತಿಗಳ ಮೇಲೆ ತಂಗುತ್ತವೆ ಮತ್ತು ಅದರಿಂದ ಬ್ಯಾಟರಿಯನ್ನು ಚಾರ‍್ಜ್ ಮಾಡಿಕೊಳ್ಳುತ್ತವೆ. ಈ ಕೆಳಗೆ ಕೊಡಲಾದ ಕಯ್ತಿಟ್ಟದ ನೆರವಿನಿಂದ ಇದನ್ನು ಸಲೀಸಾಗಿ ಅರಿಯಬಹುದು.

aerial drone

ಎಮ್.ಆಯ್.ಟಿ ಅರಕೆಗಾರರಲ್ಲೊಬ್ಬರಾದ ಜೋಸೆಪ್ ಮೂರ್ (Joseph Moore) ಹೇಳುವಂತೆ, ಹೆಚ್ಚು ಕಸುವಿನ, ವೇಗದ ಮತ್ತು ಎಲ್ಲಿಂದರಲ್ಲಿ ನುಸುಳಿ ವಯ್ರಿಗಳ ಮಾಹಿತಿ ನೀಡುವ ಗೆಂಬಾಗಳಿಗೆ ಇದರ ಮೂಲಕ ಹೆಚ್ಚಿನ ಬಾಳಿಕೆ ಬರಲಿದೆಯಂತೆ.

ಇಂತಹದ್ದೇ ಅರಕೆಯಲ್ಲಿ ತೊಡಗಿಸಿಕೊಂಡಿರುವ ಯು.ಎಸ್. ಏರ‍್ಪೋರ‍್ಸ್ (US Air force) ಪಡೆ ಹೊಸ ಗೆಂಬಾಗಳನ್ನು ಕಂಡುಹಿಡಿದು ಅವುಗಳ ಮಾದರಿ ಸಿದ್ದಪಡಿಸುತ್ತಿದೆ. ಸದ್ದು ಗದ್ದಲದಿಂದ ಕೂಡಿರುವ ತಾಣಗಳಲ್ಲಿ ಚಕ್ಕನೆ ಹಾರಬಲ್ಲ, ಜೇನು ಹುಳುಗಳಂತೆ ತೇಲಿಕೊಂಡು ಸಾಗಬಲ್ಲ, ಜೇಡದಂತೆ ತೆವಳಿಕೊಂಡು ಓಡಾಡಬಲ್ಲ ಪುಟಾಣಿ ಗೆಂಬಾಗಳನ್ನು ತಯಾರಿಸಲು ಯು.ಏಸ್. ಏರ‍್ಪೋರ‍್ಸ್ ಹೆಜ್ಜೆ ಇಟ್ಟಿದೆ. ಇಂತ ಪುಟಾಣಿ ಗೆಂಬಾಗಳ ಆನಿಮೇಟೆಡ್ ಓಡುತಿಟ್ಟವೊಂದನ್ನು ಯು.ಏಸ್.ಏರ‍್ಪೋರ‍್ಸ್ ಬಿಡುಗಡೆಗೊಳಿಸಿದೆ. ಇದರಲ್ಲಿ ಕಂಡುಬರುವಂತೆ, ಬಾನೋಡವೊಂದರಿಂದ ಪಟಪಟನೆ ಪುಟಾಣಿ ಗೆಂಬಾಗಳು ನೊಣಗಳಂತೆ ಹಾರಿಕೊಂಡು ದಾಳಿ ನಡೆಸಬೇಕಾಗಿರುವ ಊರಿನೆಲ್ಲೆಡೆ ಸೇರಿಕೊಳ್ಳುತ್ತವೆ. ನಂತರ ಬೇಕಾದ ಎಲ್ಲ ಮಾಹಿತಿಯನ್ನು ಎಣ್ಣುಕಗಳಿಗೆ ಕಣಿಸುತ್ತ ಗುರಿಯ ಮೇಲೆ ನಾಗರಹಾವಿನಂತೆ ಕಾವಲು ಕಾಯುತ್ತವೆ.

1

ಯು.ಏಸ್. ಏರ‍್ಪೋರ‍್ಸ್ ಬಿಡುಗಡೆಗೊಳಿಸಿರುವ ಇನ್ನೊಂದು ಓಡುತಿಟ್ಟದಲ್ಲಿ, ಗೆಂಬಾವೊಂದು ಪಾರಿವಾಳದ ಆಕಾರದಲ್ಲಿದ್ದು ಮಿಂಚಿನ ತಂತಿಯೊಂದರ ಮೇಲೆ ಕೂತು ತನ್ನ ಗುರಿಯ ಕಡೆ ಎಡೆಬಿಡದೆ ಕಣ್ಣಿಡುವುದು ಕಾಣಸಿಗುತ್ತದೆ. ಮುಂಬರುವ ದಿನಗಳಲ್ಲಿ ಕಾದಾಟಗಳು ಹೊಸ ಹೊಸ ಚಳಕಗಳನ್ನು ಬಳಸಿ ಬಹಳವೇ ಹಾಯ್ಟೆಕ್ ಆಗಿರಲಿವೆ. ಕಾದಾಟಗಳು ನಡೆದರೆ ಮನುಜರ ಸಂತತಿಗಳು ಅಳಿಸಿಹೋಗುವಶ್ಟು  ಬಯಂಕರವಾಗಿರಲಿವೆ. ಇಂತ ಕಾದಾಟಗಳು ನಡೆಯದಿರಲಿ ಅನ್ನುವುದೇ ನಮ್ಮ ಆಶಯ.Categories: ಅರಿಮೆ

ಟ್ಯಾಗ್ ಗಳು:, , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s