ಜೇನ್ಗನಸ ತಂದವನು

– ಶ್ವೇತ ಪಿ.ಟಿ.

hqdefault

ಆಲೋಚನೆಯ ಹೊಳೆಯಲ್ಲಿ
ಎಳೆ ಎಳೆಯ ಬಿಡಿಸುತ್ತಾ
ತುಸು ಬೆಳಕ ಮವ್ನದಲಿ
ನಿಮಿಶಗಳ ಎಣಿಸುತ್ತಾ…
ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ

ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ
ನಿನ ನೆರಳ ಕಂಡು
ಸಡಗರದಿ ತಡವರಿಸಿ ‘ಬನ್ನಿ’ ಎನ್ನುವ ಗಳಿಗೆ
ಉಕ್ಕಿದ ಲಜ್ಜೆಯನು ತುರುಬ ಎಲ್ಲೆಗೆ ಸಿಗಿಸಿ
ಮತ್ತೆ ಮವ್ನಿಯಾದೆ

ಸ್ತಬ್ದ ಚಿತ್ರಗಳ ನಡುವೆ ಜೇನ್ಗನಸ ತಂದವನು
ಒಂದು ಮಲ್ಲಿಗೆ ಮಾರು
ದೂರದಲಿ ನಿಂತು ಬೀರಿದ ಕಿರುನಗೆಗೆ
ನಾಚಿದ ಮುಂಗುರುಳು ಗುಳಿಕೆನ್ನೆ ಚುಂಬಿಸಿತು.

(ಚಿತ್ರ: www.youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: