ಪಯಣ

ಗೀತಾಮಣಿ

irula

ಬಂದದ್ದು ನೆನಪಿಲ್ಲ!
ಹೋಗುವುದು ಗೊತ್ತಿಲ್ಲ!
ಬಂದು ಹೋಗುವ ನಡುವೆ
ನಡೆಯುವುದು ಶಾಶ್ವತವಿಲ್ಲ.
ಕಾಣದ ಕಯ್, ನಡೆಸುವ ದಾರಿ
ಕಲ್ಲು ಮುಳ್ಳು,
ಕೆಲವೊಮ್ಮೆ ಹೂ ಹಾಸಿಗೆ.
ಬಿಸಿಲು, ಬಿರುಗಾಳಿಗೆ,
ತಣಿಸುವ ತಂಬೆಲರಿಗೆ,
ಮಯ್ಮನಗಳ ಒಡ್ಡಿಕೊಳ್ಳುತ್ತಾ
ಸಿಕ್ಕದ್ದಕ್ಕೆ ಅರಳಿಕೊಳ್ಳುತ್ತಾ,
ಸಿಗದ್ದಕ್ಕೆ ಮುದುರಿಕೊಳ್ಳುತ್ತಾ
ಸೂರೆತ್ತರ ಹಾರಲಾಗದ ದೇಹದಲ್ಲಿ
ಸೂರ‍್ಯನ ಸುತ್ತುವ ಮನಸು
ಹೊತ್ತ ಕನಸುಗಳ ಸರಮಾಲೆ!
ಕೂಡಿಸಿ, ಗುಣಿಸಿ, ಬಾಗಿಸಿ
ಗಳಿಸಿದ್ದೇನು? ಕಳೆದದ್ದೇನು? ಎಂಬ
ಬಿಡಿಸಲಾಗದ ಪ್ರಶ್ನೆಗಳ ಸುರಿಮಳೆ!
ಕ್ಶಣಕ್ಕೊಂದು ಬಗೆಯ
ಕತನ ?ಜೀವನ?
ಹೀಗೇ ಸಾಗಿದೆ ?ಜೀವನ
ಪಯಣ!!

(ಚಿತ್ರ: nanondubhavabindu.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Basavaraj N M says:

    ತುಂಬಾ ಚೆನ್ನಾಗಿದೆ

    *Thanks *

    *Basavaraj N M *

  2. Sangamesh says:

    Good message

ಅನಿಸಿಕೆ ಬರೆಯಿರಿ: