ಈ ಜುಲಯ್ ನಿಮ್ಮ ಮುಂದೆ ಹೋಂಡಾ ಮೊಬಿಲಿಯೊ

– ಜಯತೀರ‍್ತ ನಾಡಗವ್ಡ.

mbl1

ಪುಟಾಣಿ ಕಾರುಗಳು ಬಾರತದ ಮಾರುಕಟ್ಟೆಯಲ್ಲಿ ಎಂದಿನಂತೆ ಬರಾಟೆ ನಡೆಸಿದ್ದರೂ, ಹಲಬಳಕೆಯ ಬಂಡಿಗಳ ಬೇಡಿಕೆ ಕುಂದಿಲ್ಲ. ಇತ್ತೀಚಿನ ಮಾರುಕಟ್ಟೆಯ ಅಂಕಿ ಅಂಶಗಳೇ ಇದಕ್ಕೆ ಸಾಕ್ಶಿ. ರೆನೋ ಡಸ್ಟರ‍್ ಬಂಡಿ ಬಾರತದ ಮಾರುಕಟ್ಟೆಯಲ್ಲಿ ಕಾಲಿಟ್ಟ ದಿನದಿಂದ ಹಲಬಳಕೆಯ ಬಂಡಿಗಳಿಗೆ ಎಲ್ಲಿಲ್ಲದ ಬೇಡಿಕೆಯಾಗಿದೆ. ಈ ಪಯ್ಪೋಟಿಗೆ ಮಾರುತಿ-ಸುಜುಕಿ ಕೂಟ ಕೆಲವೇ ದಿನಗಳಲ್ಲಿ ತನ್ನ ಎರ‍್ಟಿಗಾ ಬಂಡಿ ಹೊರತಂದಿತು. ಪುಟಾಣಿ ಪಿಗೋ ಕಾರಿನ ಮೂಲಕ ಬಾರತದಲ್ಲಿ ತನ್ನ ಬೇರನ್ನು ಮತ್ತಶ್ಟು ಗಟ್ಟಿಗೊಳಿಸಿಕೊಂಡು ಹೆಸರುವಾಸಿಯಾಗಿರುವ ಪೋರ‍್ಡ್ ಕೂಟದವರು ನಾವೇನು ಕಮ್ಮಿ ಎನ್ನುವಂತೆ ಇಕೊಸ್ಪೋರ‍್ಟ್ ಬಂಡಿಯನ್ನು ಕಣಕ್ಕಿಳಿಸಿದರು. ಇದೀಗ ಎಲ್ಲ ಎದುರಾಳಿಗಳನ್ನು ಮೆಟ್ಟಿ ನಿಲ್ಲಲು ಜಪಾನಿನ ಹೋಂಡಾ ಕೂಟ ಹಿಂದೆ ಬಿದ್ದಿಲ್ಲ. ಮೊಬಿಲಿಯೊ ಎನ್ನುವ ಹೊಸ ಹಲಬಳಕೆಯ ಬಂಡಿಯೊಂದನ್ನು ಸಿದ್ದಗೊಳಿಸಿದ್ದಾರೆ. ಇದೇ ಪೆಬ್ರವರಿಯಲ್ಲಿ ನಡೆದ “ಆಟೋ ಎಕ್ಸ್ಪೋ” ದಲ್ಲಿ ಮೊಬಿಲಿಯೊ ಬಂಡಿಯ ಮಾದರಿ ಸಿದ್ದಪಡಿಸಿ ಜಗತ್ತಿಗೆ ತೋರ‍್ಪಡಿಸಿದ್ದ ಹೋಂಡಾ ಕೂಟದವರು, ಇದೀಗ ಜುಲಯ್ ತಿಂಗಳಿಂದ ಮಾರಾಟಕ್ಕೆ ಅಣಿಗೊಳಿಸಿದ್ದಾರೆ. ಮಾರಾಟಗಾರರ ಮೂಲಕ ಈಗಾಗಲೇ ಬರ‍್ಜರಿ ಪ್ರಚಾರ ನಡೆಸಿರುವ ಹೋಂಡಾ ತನ್ನ ಮಿಂದಾಣದಲ್ಲೂ “ಜುಲಯ್ ನಲ್ಲಿ ಮೊಬಿಲಿಯೊ ಮಾರಾಟಕ್ಕೆ ಸಿದ್ದ” ವೆಂದು ಹಾಕಿದ್ದಾರೆ. ಅಶ್ಟೇ ಅಲ್ಲದೇ ಬಾರತದ ವಿವಿದ ಊರುಗಳ ಮಾಲ್ಗಳಲ್ಲಿ ಮೊಬಿಲಿಯೊ ಬಂಡಿಗಳ ತೋರ‍್ಪು ನಡೆಸುತ್ತಿದ್ದಾರೆ. ಜುಲಯ್ 11 ರಿಂದ 20 ರವರೆಗೆ ಬೆಂಗಳೂರಿನ ವಿವಿದ ಮಾಲುಗಳಲ್ಲಿ ತೋರ‍್ಪು ನಡೆಯಲಿದೆ.

ಮೇಲೆ ಪಟ್ಟಿಮಾಡಿದ ಎರ‍್ಟಿಗಾ, ಡಸ್ಟರ್, ಇಕೊಸ್ಪೋರ‍್ಟ್ ಎಲ್ಲವೂಗಳು ಹಲಬಳಕೆ ಬಂಡಿಗಳಾಗಿದ್ದರೂ ಸಾಮಾನ್ಯವಾಗಿ 8-10 ಜನರು ಕುಳಿತುಕೊಳ್ಳಲು ಮಾಡಲಾಗಿಲ್ಲ. ಮಹೀಂದ್ರಾ ಸ್ಕಾರ‍್ಪಿಯೊ, ಎಕ್ಸ್ಯುವಿ-5೦೦, ಟಾಟಾ ಸುಮೋ ಗ್ರಾಂಡ್ಯೆ, ಸಪಾರಿ, ಟೊಯೋಟಾ ಪಾರ‍್ಚೂನರ್ ಗಳ ಸಾಲಿಗೆ ಇವುಗಳು ಸೇರುವುದಿಲ್ಲ. ಅದಕ್ಕೆ ಡಸ್ಟರ್, ಎರ‍್ಟಿಗಾ, ಇಕೊಸ್ಪೋರ‍್ಟ್ ಮತ್ತು ಮೊಬಿಲಿಯೊಗಳನ್ನು ಕಿರು-ಹಲಬಳಕೆಯ ಬಂಡಿಗಳೆನ್ನಬಹುದು. ಇವುಗಳಲ್ಲಿ ಹೆಚ್ಚೆಂದರೆ 7 ಜನರಶ್ಟೇ ಸಾಗಬಹುದು. ಹೋಂಡಾ ಮಿಂದಾಣವೇ ಹೇಳುವಂತೆ ಹೊಸ ಮೊಬಿಲಿಯೊ 7-ಜನರನ್ನು ಹೊತ್ತೊಯ್ಯಬಲ್ಲದು.

space for 7

ಮೊಬಿಲಿಯೊ ವಿಶೇಶವೇನು:
ಈಗಿರುವ ಎರ‍್ಟಿಗಾ, ಡಸ್ಟರ್, ಇಕೊಸ್ಪೋರ‍್ಟ್ ಬಂಡಿಗಳು 6-7 ಜನರ ಹೊತ್ತೊಯ್ಯಲು ಅನುಕೂಲಕರವಾಗಿದ್ದರು ಇವುಗಳಲ್ಲಿ ಸರಕು-ಸಾಮಗ್ರಿಗಳ ತುಂಬಲು ಸಾಕಶ್ಟು ಜಾಗ ಇಲ್ಲದೇ ಇರುವುದು. ಈ ಕೊರತೆಯನ್ನು ನೀಗಿಸಿಕೊಂಡೆ ಮೊಬಿಲಿಯೊ ಹೊರತರಲಾಗಿದೆ ಎಂಬುದು ಹೋಂಡಾ ಕೂಟದವರ ಅಂಬೋಣ. 7 ಜನರನ್ನು ಸಲೀಸಾಗಿ ಕೂರಿಸಿ ಬಂಡಿಯ ಹಿಂದಿರುವ ಡಿಕ್ಕಿಯಲ್ಲಿ ಹೆಚ್ಚಿನ ಸರಕುಗಳು, ಚೀಲಗಳನ್ನು ತುಂಬಿಸಿ ಸಾಗಬಲ್ಲದು ಮೊಬಿಲಿಯೊ. ಕಳೆದ ಕೆಲತಿಂಗಳ ಹಿಂದೆ “ಅಮೇಜ್” ಕಿರು-ಸೇಡಾನ್ ಕಾರಿನ ಗೆಲುವಿನ ಅಲೆಯ ಮೇಲೆ ತೇಲುತ್ತಿರುವ ಹೋಂಡಾ, ಮೊಬಿಲಿಯೊವನ್ನು ಬಿಡುಗಡೆಗೊಳಿಸಿ ಮರುಗೆಲುವು ಪಡೆಯುವುದು ಕಚಿತ ಎಂದು ತಾನೋಡದ ಕಯ್ಗಾರಿಕೆಯ ಹಲವರ ಅನಿಸಿಕೆ. ಮೊಬಿಲಿಯೊವನ್ನು “ಆಟೋ-ಎಕ್ಸ್ಪೋ” ದಲ್ಲಿ ನೋಡಿದ್ದ ಹಲವರು ಇದೇ ತೆರನಾದ ಮೆಚ್ಚುಗೆಯ ನುಡಿಯನ್ನು ಉಲಿದಿದ್ದರು.

bootspace

ಮೊಬಿಲಿಯೊ ಮಾರಾಟಕ್ಕೂ ಕೂಡ ಹೋಂಡಾ ಬರದ ಸಿದ್ದತೆ ಮಾಡಿಕೊಂಡಿದೆ. ಕೊಳ್ಳುಗರನ್ನು ಸೆಳೆಯಲು ಬರೀ 51000 ರೂಪಾಯಿಗಳು ಕೊಟ್ಟು ಹೋಂಡಾ ಮಾರಾಟಗಾರರಲ್ಲಿ ನಿಮ್ಮ ಮೊಬಿಲಿಯೊವನ್ನು ಕಾಯ್ದಿರಿಸುವ ಅವಕಾಶ ಕೂಡ ನೀಡಲಾಗಿದೆ. ಮೊಬಿಲಿಯೊ ಬೆಲೆ 7.5 ಲಕ್ಶ ರೂಪಾಯಿಗಳಿಂದ ಆರಂಬಗೊಳ್ಳಲಿದೆ.

ಕೆಳಗಿರುವ ಪಟ್ಟಿ-1 ರಲ್ಲಿ ಮೊಬಿಲಿಯೊದ ವಿಶೇಶತೆಗಳನ್ನು ಪಟ್ಟಿಮಾಡಲಾಗಿದೆ. ಎರಡನೇಯ ಪಟ್ಟಿಯಲ್ಲಿ ಇತರೆ ಎದುರಾಳಿ ಬಂಡಿಗಳೊಂದಿಗೆ ಮೊಬಿಲಿಯೊ ಹೋಲಿಕೆ ಮಾಡಲಾಗಿರುತ್ತದೆ.
(ಡಿಸೇಲ್ ಮಾದರಿಗಳನ್ನಶ್ಟೇ ಹೋಲಿಕೆ ಮಾಡಲಾಗಿದ್ದು, ಮಾಯ್ಲೇಜ್ಅನ್ನು ಬಾರತದ ತಾನೋಡ ಕಯ್ಗಾರಿಕೆಗಳ ಅರಕೆ ಕೂಟದ ಒರೆಹಚ್ಚುವಿಕೆಯಲ್ಲಿ ಆಯಾ ಕೂಟಗಳ ಗೋಶಿಸಿಕೊಂಡು ಮಿಂಬಲೆಯಲ್ಲಿರುವಂತೆ ನೀಡಲಾಗಿರುತ್ತದೆ. ಕೆಲವು ವಿಶೇಶತೆಗಳಲ್ಲಿ ಚಿಕ್ಕ-ಪುಟ್ಟ ವ್ಯತ್ಯಾಸ ಕಂಡುಬರಬಹುದು)

Specs

 

Compare

(ಮಾಹಿತಿ ಮತ್ತು ಚಿತ್ರ ಸೆಲೆ: worldrapido.comhondacarindia.comrenault.co.inindia.ford.comautocarindia.com)

ಇವುಗಳನ್ನೂ ನೋಡಿ

1 ಅನಿಸಿಕೆ

  1. 12-08-2014

    […] ಇದಕ್ಕೆ ಸಾಕ್ಶಿಯೆಂಬಂತೆ ಕಳೆದ ತಿಂಗಳಶ್ಟೇ ಹೋಂಡಾದ ಮೊಬಿಲಿಯೊ ಬಿಡುಗಡೆಯಾಗಿತ್ತು. ಇದೀಗ ಬಾರತದ ಪ್ರಮುಕ […]

ಅನಿಸಿಕೆ ಬರೆಯಿರಿ: